ಶಿಗ್ಗಾವ್

ಭಗವಾನ ಮಹಾವೀರ 24ನೇ ತೀರ್ಥಂಕರ ಜಯಂತೋತ್ಸವ ಕಾರ್ಯಕ್ರಮ

ಭಗವಾನ ಮಹಾವೀರ 24ನೇ ತೀರ್ಥಂಕರ ಜಯಂತೋತ್ಸವ ಕಾರ್ಯಕ್ರಮ

ಶಿಗ್ಗಾವಿ 17:  ಇಡೀ ವಿಶ್ವವೇ ಎದುರಿಸುತ್ತಿರುವ ಈಗಿನ ಪ್ರಕ್ಷುಬ್ಧ ಸ್ಥಿತಿಗೆ  ಅಹಿಂಸೆ  ಒಂದೇ ಪರಿಹಾರ, ಭಗವಾನ್  ಮಹಾವೀರರು ಬೋಧಿಸಿರುವ ಅಹಿಂಸಾ ಮಾರ್ಗದಿಂದ ಮುಕ್ತಿ ಹೊಂದಬಹುದು ಎಂದು ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದ ಸಂತೆ ಮೈದಾನದ ಆವರಣದಲ್ಲಿ ಭಗವಾನ ಮಹಾವೀರ 24ನೇ ತೀರ್ಥಂಕರ ಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಈಗಿನ ಜನತೆ ಅಹಿಂಸಾ ಮಾರ್ಗದಲ್ಲಿ  ಮುನ್ನೇಡದರೇ ಮಾತ್ರ ಮುಂದಿನ ಜೀವನ ಸುಂದರಮಯವಾಗಿ ಬದುಕಲು ಹಾಗೂ ಬಾಳಲು ಸಾಧ್ಯ ಎಂದರು. 

ಭರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಯಾರು ತಮ್ಮ ಜೀವನದಲ್ಲಿ ಅಹಿಂಸೆಯಿಂದ ಸುಖ,  ಪ್ರಗತಿ, ಶಾಂತಿ,  ಸಿದ್ದಿ  ಎಂಬ ಮಹಾವೀರರ ಸಂದೇಶವನ್ನು ಅಳವಡಿಸಿಕೊಳ್ಳುತ್ತಾರೋ ಅಂತವರು ಮಾತ್ರ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವೆಂದರು ಹಾಗೂ ತಾಲೂಕಿನ ಪಟ್ಟಣ ಪ್ರದೇಶದಲ್ಲಿ ಮಹಾವೀರ ಸಮುದಾಯ ಭವನ ಮಾಡಲು ಸರಕಾರದಿಂದ ಅಲ್ಪಸಂಖ್ಯಾತ ಕೋಟಾದಲ್ಲಿ 5 ಕೋಟಿಯವರೆಗೂ ಅನುಧಾನ ಪಡೆಯಿರಿ ಮತ್ತು ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಹೊಲ ಖರೀದಿಗೆ ನನ್ನ ಸ್ವಂತ ದುಡಿಮೆಯ 5 ಲಕ್ಷ ಹಣವನ್ನು ನೀಡುತ್ತೇನೆ ಎಂದು ವಾಗ್ದಾನ ಮಾಡಿದರು. 

ಸಾನಿಧ್ಯವಹಿಸಿ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ವರೂರ, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸೋಂದಾ ಶ್ರೀ, ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ ಶಿಗ್ಗಾವಿ ಈ ಎಲ್ಲ ಶ್ರೀಗಳು ಧರ್ಮದ ಸಂದೇಶವನ್ನು ನೀಡಿದರು. 

ಇದಕ್ಕೂ ಮೊದಲು ಭಗವಾನ್ ಮಹಾವೀರರ ಭಾವಚಿತ್ರದ ಹಾಗೂ ಮೂರ್ತಿ ಮೆರವಣಿಗೆಯು ಎ.ಪಿ.ಎಂ.ಸಿ ಆವರಣದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಸಂಚರಿಸಿ, ಸಂತೆ ಆವರಣದ ಶರೀಪ ಭವನದ ವೇದಿಕೆ ಸೇರಿತು. ನಂತರ ಸಂಗೀತ ಕಲಾವಿಧೆ ಭಾರತೀ ವರ್ಧಮಾನ ಛಬ್ಬಿಯವರಿಂದ ಸಂಗೀತ ಸೇವೆ ನೇರವೇರಿತು.  

 ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಕೆ.ಪಿ.ಸಿ.ಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ, ತಿಪ್ಪಣ್ಣಾ ಸಾತಣ್ಣವರ, ಭೂಪಾಲ ಪಾಯಣ್ಣವರ, ಕಿರಣ ಅವರಾದಿ, ರವೀಂದ್ರ ಪಾಸಾರ, ಶಶೀಕಾಂತ ಹಿತ್ತಲಕೇರಿ, ಕುಬೇರ​‍್ಪ ಸಿದ್ದಣ್ಣವರ, ಮಾಣಿಕಚಂದ ಲಾಡರ, ಶಿವಾನಂದ ಬಾಗೂರ, ಪಕ್ಕೀರ​‍್ಪ ಕುಂದೂರ, ಕಾಳಪ್ಪ ಬಡಿಗೇರ, ಅರ್ಜಪ್ಪ ಲಮಾಣಿ, ಡಾ.ಬಿ.ಹೆಚ್‌.ವೀರಣ್ಣಾ, ಡಾಽಽ ಲಂಗೋಟಿ,  ಪ್ರಕಾಶ ಧರಣೆಪ್ಪನವರ, ಪಾರ್ಶ್ವನಾಥ ಕೋಟಿ, ಶಾಂತಪ್ಪ ಸೊಗಲಿ, ಪದ್ಮಪ್ಪ ಚವಟೆ, ಅಭಿನಂದನ ಅವರಾಧಿ, ಜಿನ್ನಪ್ಪ ವರೂರ, ಮಹಾವೀರ ಕೋಳುರ, ರಮೇಶ ತವನಪ್ಪನವರ, ಮೋಹನ ಬೆಳಗಲಿ, ಅರುಣ ಜಕ್ಕಣ್ಣವರ, ವಿರೇಂದ್ರ ಬಳಿಗಾರ, ಚಂದ್ರ​‍್ಪ ಅಂಗಡಿ, ರಮೇಶ ಮಾಯಣ್ಣವರ, ಸುನೀ ಅರೆಗೊಪ್ಪ, ಬಾಹುಬಲಿ ಸೊಗಲಿ, ಧರಿಯಪ್ಪ ಮುಗಳಿ, ಅಶೋಕ ಅಮ್ಮಿನಬಾವಿ,ಸಂತೋಷ ಮುಂಡಗೋಡ, ಬಾಹುಬಲಿ ಅಕ್ಕಿ, ಪವನ ದೇಸಾಯಿ, ಅಜೀತ ತಟ್ಟಿ ಸೇರಿದಂತೆ ತಾಲೂಕಿನ ಜೈನ ಸಮಾಜದ ಸಮಸ್ತ ಶ್ರಾವಕ  ಶ್ರಾವಕಿಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ