ಬಳ್ಳಾರಿ

ಭಗತ್ ಸಿಂಗ್ ಹುತಾತ್ಮ ದಿನಾಚರಣೆ

ಭಗತ್ ಸಿಂಗ್ ಹುತಾತ್ಮ ದಿನಾಚರಣೆ

ಬಳ್ಳಾರಿ 23: ಎಐಡಿಎಸ್‍ಓ  ಮತ್ತು ಎಐಡಿವೈಓ ಸಂಘಟನೆಗಳಿಂದ ಜಂಟಿಯಾಗಿ ದಿ. 23ರಂದು  ನಗರದ ವಿವಿಧ ಕಾಲೇಜುಗಳಲ್ಲಿ ಭಗತ್ ಸಿಂಗ್ ಅವರ 91ನೇ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. 

ಭಗತ್ ಸಿಂಗ್, ರಾಜಗುರು, ಸುಖದೇವ್ ಅವರು ಸಮಾಜವಾದಿ ಸಮಾಜದ ಕನಸನ್ನು ಹೊಂದಿದ್ದರು. ವ್ಯವಸ್ಥೆಯ ಬದಲಾವಣೆಯೇ ಕ್ರಾಂತಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಡತನ, ನಿರುದ್ಯೋಗ, ಹಸಿವು, ಅಪೌಷ್ಟಿಕತೆ, ವ್ಯಭಿಚಾರ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಸಹಜ ಲಕ್ಷಣಗಳು. ಸಮಸ್ಯೆಗಳಿಂದ ಹೊರಬರುವ ಏಕೈಕ ಮಾರ್ಗ ಭಗತ್ ಸಿಂಗ್ & ಸಂಗತಿಗಳು ತೋರಿಸಿದ ಮಾರ್ಗ ಸಮಾಜವಾದಿ ವ್ಯವಸ್ಥೆ ಮಾತ್ರ ಎಂದು ಎಐಡಿವೈಓ ಸಂಘಟನೆ  ಪಂಪಾಪತಿ ಮಾತನಾಡಿದರು.

ಬಂಡವಾಳಶಾಹಿ ವ್ಯವಸ್ಥೆಯನ್ನು ಬಲಪಡಿಸಲು ದುಡಿಯುವವರ ನಿರಂತರ ಹಗಲು ದರೋಡೆ ನಡೆಸಲಾಗುತ್ತದೆ. ಲಾಭ ಎನ್ನುವ ಕಾನೂನು ಬದ್ಧ ದರೋಡೆ ನಡೆಯುತ್ತದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿವೆ, ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಬಗೆಯಲ್ಲಿ ವ್ಯವಸ್ತೆ ತುಂಬಾ ಹದಗೆಟ್ಟಿದೆ. ಜನ ಸಾಮಾನ್ಯರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇಂತಹವುಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಇದಕ್ಕೆ ಭಗತ್ ಸಿಂಗ್ ಅವರ ಚಿಂತನೆಗಳನ್ನು ಮೈಗೂಡಿಕೊಳ್ಳಬೇಕು ಎಂದು ಂIಆಙಔನ ಜಿಲ್ಲಾ ಅಧ್ಯಕ್ಷ ಎರ್ರಿಸ್ವಾಮಿಯವರು ಹೇಳಿದರು.

ಎಐಡಿಎಸ್ ಓನ ಜಿಲ್ಲಾ ಕಾರ್ಯದರ್ಶಿ ರವಿಕಿರಣ್, ಮಂಜುಳಾ, ಪ್ರಕಾಶ್ ನಾಯಕ್, ಗೌಸ್ ಭಾಗವಹಿಸಿದ್ದರು.

ಸುದ್ದಿ ಓದಿ