ಬೆಟಗೇರಿ: ಉಭಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಲೋಕದರ್ಶನ ವರದಿ
ಬೆಟಗೇರಿ 15: ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರು ವೈ.ಸಿ.ಶೀಗಿಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಂಡಿತ್ ಜವಾಹರಲಾಲ್ ನೆಹರು ಭಾವ ಚಿತ್ರಕ್ಕೆ ಪೂಜೆ, ಪುಷ್ಾರೆ್ಪನ ಸಮರೆ್ನ ಕಾರ್ಯಕ್ರಮ ನಡೆದ ಬಳಿಕ ಸಿಹಿ ವಿತರಿಸಲಾಯಿತು. ಇಲ್ಲಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ ಸನದಿ ಅವರು, ಪಂಡಿತ್ ಜವಾಹರಲಾಲ್ ನೆಹರು ಬದುಕಿನ ಹಾಗೂ ದೇಶಪ್ರೇಮದ ಕುರಿತು ಮಾತನಾಡಿದರು.
ಈ ಶಾಲೆಯ ಹಳೆಯ ವಿದ್ಯಾರ್ಥಿ ಮಂಜುನಾಥ ಈಶ್ವರ ಮುರಗೋಡ ಅವರು ಹೊಸದಾಗಿ ಒಂದನೇಯ ತರಗತಿಗೆ ದಾಖಲಾದ ಎಲ್ಲಾ ಶಾಲಾ ಮಕ್ಕಳಿಗೆ ಚೌಕಗೆರೆ ನೋಟಬುಕ್, ಪೆನ್ಸಿಲ್ ಬಾಕ್ಸ್, ಕಲರ್ ಪೆನ್ಸಿಲ್, ಇಂಗ್ಲಿಷ್ ಬುಕ್ ಸೇರಿದಂತೆ ಕಲಿಕಾ ಪಾಠೋಪಕರಣಗಳನ್ನು ಶಾಲಾ ಮಕ್ಕಳಿಗೆ ದೇಣಿಗೆಯಾಗಿ ನೀಡಿರುತ್ತಾರೆ.
ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಸದಸ್ಯರು, ಉಭಯ ಶಾಲೆಯ ಪ್ರಧಾನ ಗುರುಗಳು, ಶಿಕ್ಷಕರು, ಅತಿಥಿ ಶಿಕ್ಷಕರು, ಶಿಕ್ಷಣಪ್ರೇಮಿಗಳು ಶಾಲಾ ಮಕ್ಕಳಿಗೆ ದೇಣಿಗೆ ನೀಡಿದ ಮಂಜುನಾಥ ಮುರಗೋಡ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಮ್.ಎಸ್.ಪಾಟೀಲ, ಜಿ.ಎಮ್ ಕಮತ, ಪದ್ಮಾಶ್ರೀ., ಜಿ.ಪಿ.ಕೋಣಿ, ಪಿ.ಎಚ್ ಬಂಡಿವಡ್ಡರ, ರಾಜು ಜಾಡರ, ಡಿ.ಎಸ್.ಕುಂಬಾರ, ವಿ.ಕೆ.ಪತ್ತಾರ, ವಿಶ್ವನಾಥ ಶೀಗಿಹಳ್ಳಿ ಸೇರಿದಂತೆ ಶಾಲೆಯ ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು