ಮುಖ್ಯ ಶಿಕ್ಷಕಿ ಎಂ.ಎನ್. ಕಾಳೇನಟ್ಟಿಗೆ ಅತ್ಯುತ್ತಮ ಪ್ರಧಾನ ಗುರುಮಾತೆ ಪ್ರಶಸ್ತಿ
ಕಾಗವಾಡ 06: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಎಂ.ಎನ್. ಕಾಳೇನಟ್ಟಿ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗೆ ಅತ್ಯುತ್ತಮ ಪ್ರಧಾನ ಗುರುಮಾತೆ ರಾಜ್ಯ ಪ್ರಶಸ್ತಿ ಲಭಿಸಿದೆ. ಯುವ ವಾಹಿನಿ ಜನ ಸೇವಾ ಟ್ರಸ್ಟ ಹಾಗೂ ನಾಡಿನ ಸಮಾಚಾರ ಸೇವಾ ಸಂಘ ಇವರ ಆಶ್ರಯದಲ್ಲಿ, ವಿಶ್ವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರ ಸಂಗಮ ಸಾಧನೆಯ ಸಂಭ್ರಮ ಸಮಾರಂಭ ಸೋಮವಾರ ದಿ. 05 ರಂದು ಬೆಳಗಾವಿಯ ಕನ್ನಡ ಭವನದಲ್ಲಿ ಬೆಳಗಾವಿ ಸಂಸದರು, ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಉಪಸ್ಥಿತರಿದ್ದ ಗಣ್ಯರು ಎಂ.ಎನ್. ಕಾಳೇನಟ್ಟಿ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ. ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕಿಯನ್ನು ಸನ್ಮತಿ ವಿದ್ಯಾಲಯದ ಅಧ್ಯಕ್ಷರು, ಉಪಾಧ್ಯಕ್ಷರು ಆಡಳಿತ ಮಂಡಳಿಯವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.