ಶಿಗ್ಗಾವ್

ಸಾಮೂಹಕ ವಿವಾಹಗಳಿಂದ ಬಡವರಿಗೆ ಅನುಕೂಲ: ಅಂಗಡಿ

ಸಾಮೂಹಕ ವಿವಾಹಗಳಿಂದ ಬಡವರಿಗೆ ಅನುಕೂಲ: ಅಂಗಡಿ

ಶಿಗ್ಗಾವಿ 20:  ಸಾಮೂಹಿಕ ವಿವಾಹಗಳಿಂದ ಸಾಮಾನ್ಯ ವರ್ಗದ ಜನತೆಗೆ ಹಾಗೂ ಬಡವರಿಗೆ ಅನುಕೂಲವಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಡಿ ಕೆ ಶಿವಕುಮಾರ ಅಭಿಮಾನಿ ಭಳಗದ ರಾಜ್ಯಾಧ್ಯಕ್ಷ ಎಮ್ ಎಸ್ ಅಂಗಡಿ ಹೇಳಿದರು.

ಪಟ್ಟಣದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ದಿ. ಸಿ, ಎಸ್ ಶಿವಳ್ಳಿಯವರ ಸ್ಮರಣಾರ್ಥವಾಗಿ ಬಂಕಾಪೂರ ಪಟ್ಟಣದಲ್ಲಿ 2ನೇ ವರ್ಷದ ಉಚಿತ ಸರ್ವಧರ್ಮ ಸಾಮೂಹಕ ವಿವಾಹ ಮಹೋತ್ಸವದ ಕಾರ್ಯಕ್ರಮದ ವಾಲ್ ಪೋಸ್ಟರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಗಲೇ ಸಾಮೂಹಿಕ ವಿವಾಹದ ಬಗ್ಗೆ ಚರ್ಚೆ ನಡೆದಿದ್ದು ಸರಿಯಾದ ಸಿದ್ದತೆ ಮಾಡಿಕೊಂಡು ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ನಡೆಸಲು ತಿಳಿಸಲಗಿದೆ, ಮತ್ತು ಹೆಚ್ಚು ಪ್ರಚಾರ ಮಾಡಿದರೆ ಎಲ್ಲಗೂ ತಿಳಿಯುವಂತಾಗಿ ಇದರ ಸದುಪಯೋಗ ಪಡೆಯುಂತಾಗಲಿ ಎಂದರು.

ಕೆಪಿಸಿಸಿ ಸದಸ್ಯ ಹಾಗೂ ಸಾಮೂಹಿಕ ವಿವಾಹಗಳ ಆಯೋಜಕರಾದ ಷಣ್ಮೂಕಪ್ಪ ಶಿವಳ್ಳಿ ಮಾತನಾಡಿ ಎಪ್ರೀಲ್ 29 ಬಂಕಾಪೂರ ಪಟ್ಟಣದಲ್ಲಿ 151 ಜೋಡಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಕಳೆದ ಭಾರಿ 101 ಜೋಡಿ ವಿವಾಹಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೆವೆ ಅದೇ ರೀತಿ ಈ ಭಾರಿಯೂ ಸಹ ನಡೆಯವ ವಿವಾಹ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ, ಅಂದು ಕಾರ್ಯಕ್ರಮಕ್ಕೆ ಡಿ ಕೆ ಶಿವಕುಮಾರ ಸೇರಿ ಹಲವಾರು ಮುಖಂಡರು ಮತ್ತು ಕ್ಷೇತ್ರ ಮುಖಂಡರು ಪಾಲ್ಗೋಳ್ಳುವರು, ಮಾಜಿ ಸಚಿವ ದಿ ಸಿ ಎಸ್ ಶಿವಳ್ಳಿಯವರ ನಡೆಸಿಕೊಂಡ ಬಂದ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೊಗುವದಾಗಿ ತಿಳಿಸಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಎನ್ ಎಮ್ ವೆಂಕೋಜಿ, ನಾಗಪ್ಪ ತಿಪ್ಪಕ್ಕನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನಮಂತಪ್ಪ ಬಂಡಡಿವಡ್ಡರ, ಅದ್ದು ಪರಾಷೆ ಮಾತನಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶಿರ್ವಚಿಸಿದರು.

ಮುಖಂಡರಾದ ಮಜೀದ ಮಾಳಗಿಮನಿ ಸೇರಿದಂತೆ ಕಾರ್ಯಕರ್ತರು ಶಿವಳ್ಳಿ ಅಭಿಮಾನಿ ಭಳಗದವರು ಉಪಸ್ಥಿತರಿದ್ದರು. ತಾಲೂಕಾ ವಕ್ತಾರ ಮಂಜುನಾಥ ಮಣ್ಣಣ್ಣವರ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಓದಿ