ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಶಾಂತಿಯುತ
ಸಿರುಗುಪ್ಪ 28: ಕೊರೊನಾ ವೈರಸ್ ಆತಂಕ ಹಾಗೂ ಭಾರೀ ಬಿಸಿಲಿನ ತಾಪ ಬೆಳಿಗ್ಗೆ 7 ರಿಂದ ಸ0ಜೆ 6 ರವರೆಗೆ ಬಳ್ಳಾರಿ ಮಹಾನಗರ ಪಾಲಿಕೆ 7 ವರ್ಷಗಳ ಸುದೀರ್ಘ ಅವಧಿಯ ಬಳಿಕ ಚುನಾವಣೆ ಮತದಾನ ಪ್ರಕ್ರಿಯೆ 39 ವಾರ್ಡುಗಳ ಮಂಗಳವಾರ ಒಟ್ಟು 338 ಮತ ಗಟ್ಟೆ ಗಳಲ್ಲಿ ನಡೆದ ಚುನಾವಣೆ ಯಲ್ಲಿ ಶಾಂತಿಯುತ ಶೇಕಡಾ 57.67 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ ಮತದಾರರ ವಿವರ 1,66,298 ಪುರುಷರು 1,74,538 ಮಹಿಳೆಯರು 36 ಇತರೆ ಒಟ್ಟು 3,40,882 ಪಾಲಿಕೆಯ 39 ವಾರ್ಡುಗಳಿಗೆ ಸ್ಪರ್ಧಿಸಿರುವ 187 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ ಬೆಳಿಗ್ಗೆ ಯಿಂದಲೇ ಜನರು ತಂಪು ಹೊತ್ತಿನಲ್ಲಿ ಬಿಸಿಲೇರುವ ಮುನ್ನವೇ ಮತ ಚಲಾಯಿಸಲು ಸಾಲು ಸಾಲಾಗಿ ಜನ ನಿಂತಿದ್ದರು ರಾಜ್ಯಸಭಾ ಸದಸ್ಯ ಡಾ ಸೈಯ್ಯದ್ ನಾಸೀರ್ ಹುಸೇನ್ ಸಮಾಜ ಕಲ್ಯಾಣ ಸಚಿವ ಬಿ ಶ್ರೀ ರಾಮುಲು ಶಾಸಕರಾದ ಬಿ ನಾಗೇಂದ್ರ ಜಿ ಸೋಮಶೇಖರೆಡ್ಡಿ ಎಂ. ಎಲ್. ಸಿ.ಗಳಾದ ಕೆ ಸಿ ಕೊಂಡಯ್ಯ ಅಲ್ಲಂ ವೀರಭದ್ರ್ಪ ಮಾಜಿ ಶಾಸಕರಾದಾ ಎನ್ ಸೂರ್ಯ ನಾರಾಯಣ ರೆಡ್ಡಿ ಸುರೇಶ ಬಾಬು ಮಾಜಿ ಲೋಕಸಭಾ ಸದಸ್ಯ ಸಣ್ಣ ಫಕೀರ್ಪ ಜಿಲ್ಲಾ ಕಾಂಗ್ರೆಸ್ ಕಮಿಟಿ ನಗರ ಅಧ್ಯಕ್ಷ ಜಿ ಎಸ್ ಮೊಹಮ್ಮದ್ ರಫೀಕ್ ಕಾಂಗ್ರೆಸ್ ಮುಖಂಡ ಜೆ ಎಸ್ ಆಂಜನೇಯಲು ಅವರವರ ಕುಟುಂಬಗಳ ಸಮೇತ ವಿವಿಧ ಮತ ಕೇಂದ್ರಗಳಲ್ಲಿ ಮತ ಚಲಾಯಿಸಿದರು ವಿವಿಧ ಮತ ಕೇಂದ್ರಗಳ ಆವರಣಗಳಲ್ಲಿ ಮತದಾರರು ಅಂತರ ಕಾಯ್ದುಕೊಳ್ಳದೆ ಇರುವುದರಿಂದ ಜನರ ಗುಂಪುಗಳನ್ನು ಚದುರಿಸಲು ಪೊಲೀಸರ ಸಾಹಸ ವಾಗಿತ್ತು ಬಳ್ಳಾರಿ ಮಹಾ ನಗರ ಪಾಲಿಕೆ ಏಪ್ರಿಲ್ 30ಕೆ ಮತ ಎಣಿಕೆ ನಡೆಯಲಿದೆ ಬಿಜೆಪಿ-ಕಾಂಗ್ರೆಸ್ ಯಾರಿಗೆ ಸಿಗಲಿದೆ ಅಧಿಕಾರ ಫಲಿತಾಂಶದ ಲೆಕ್ಕಾಚಾರ ನಡೆದಿದೆ.
ಸಿರುಗುಪ್ಪ ಕರೋನಾ ವೈರಸ್ ಮೊದಲ ಸಮಸ್ಯೆ ಗೊತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೂರ್ವಸಿದ್ಧತೆ ಮಾಡಿಕೊಳ್ಳಲಿಲ್ಲ ಪರಿಣಿತರು ಬಾಯಿಬಡಿದು ಕೊಂಡರೂ ಅವರ ಮಾತು ಕೇಳಲಿಲ್ಲ ತಮ್ಮದೇ ನಿರ್ಧಾರ ಕೈಗೊಂಡರು ಕರೋನ ಹೊಣೆ ಅರಿತು ಹೆಜ್ಜೆ ಇಡದ ಸರ್ಕಾರ ಕೋವಿಡ್ ನಿಂದ ಸಾಯುವಂತೆ ಮಾಡುತ್ತಿರುವ ಕ್ರೂರಿ ಕೊಲೆ ಗಡುಕರ ಸರ್ಕಾರ ಗಳು ಇವು ಎಂದು ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಖತೀಬ್ ಜಹೀರುದ್ದೀನ್ ಬಾಬು ಸೌದಾಗರ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಜನಾಭಿಪ್ರಾಯ ಮುಖಂಡ ಜಿಲ್ಲಾ ವಕ್ಫ್ ಮಾಜಿ ಸದಸ್ಯ ಹಾಜಿ ಅಬ್ದುಲ್ ನಬಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಸಂಕಷ್ಟ ಪರಿಸ್ಥಿತಿ ಯಲ್ಲಿ ದುಡಿದು ತಿನ್ನುತ್ತಿರುವ ಬದುಕಿನ ಮೇಲೆ ಬರೇ ದಿನಗೂಲಿ ಕಾರ್ಮಿಕರು ಬೀದಿ ಬದಿಯ ವ್ಯಾಪಾರಿಗಳು ಸಣ್ಣ ವ್ಯಾಪಾರಿಗಳು ರೈತರ ಬದುಕು ಮೂರಾ ಬಟ್ಟೆ ಯಾಗುತ್ತಿದೆ ರಾಜಕೀಯ ಲಾಭ ದ ನಿರ್ಧಾರಕ್ಕೆ ಸೀಮಿತ ನಿರ್ಲಕ್ಷ್ಯದ ಪರಿಣಾಮ ವಾಗಿದೆ.ಇನ್ನಾದರೂ ಸರ್ಕಾರಗಳು ಎಚ್ಚೆತ್ತು ಸರಿಯಾದ ದಾರಿಯಲ್ಲಿ ಹೆಜ್ಜೆ ಇಡಬೇಕು ಎಂದರು ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫೀಕ್ ಮೊಹಮ್ಮದ್ ನೌಶಾದ್ ಅಲಿ ಬಿ ಜಿಲಾನ್ ಎ ಮುಹಮ್ಮದ್ ಹಾಜಿ ಇತರರು ಇದ್ದರು ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತ ಮತದಾನ ಸಿರುಗುಪ್ಪ - ರಾಜ್ಯದ ಹಲವೆಡೆ ರಾಮನಗರ ನಗರಸಭೆಗೆ ಶೇ.66.82, ಚನ್ನಪಟ್ಟಣ ನಗರಸಭೆಗೆ ಶೇ.70.99,ಮಡಿಕೇರಿ ನಗರಸಭೆ ಶೇ .59.01,ಬೀದರ್ ನಗರಸಭೆ ಶೇ .51.25,ಭದ್ರಾವತಿ ನಗರಸಭೆ ಶೇ.51.25,ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಶೇ.83.3, ಹಳ್ಳಿ ಖೇರ್ಡಾ ಬಿ ಪುರಸಭೆ ಶೇಕಡಾ 83.1, ಬೇಲೂರು ಪುರಸಭೆ ಶೇಕಡಾ 83.3, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯ ಪುರ ಪುರಸಭೆ ಶೇ.79.5 , ಗುಡಿಬಂಡೆ ಪಟ್ಟಣ ಪಂಚಾಯತ್ ಶೇಕಡಾ 71.6 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಮಂಗಳವಾರ ಕರೋನಾ ಭೀತಿಯ ನಡುವೆಯೇ ಶಾಂತ ವಾಗಿ ಮತದಾನ ನೆರವೇರಿತು