ತಾಳಿಕೋಟಿ

ಬೆಳಗಾವಿ, ಅಥಣಿ ತಂಡಗಳು ಚಾಂಪಿಯನ್

ಬೆಳಗಾವಿ, ಅಥಣಿ ತಂಡಗಳು ಚಾಂಪಿಯನ್

ತಾಳಿಕೋಟೆ 13:ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಲ್ಲಿ ಬೆಳಗಾವಿಯ ಲಿಂಗರಾಜು ಕಾಲೇಜು ಪ್ರಥಮ ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿ ಅಥಣಿಯ ಕೆ.ಎ.ಲೋಕಾಪೂರ ಕಾಲೇಜು ಪ್ರಥಮ ಸ್ಥಾನ ಪಡೆದು ಚಾಂಪಿಯುನ್ ಪಟ್ಟವನ್ನ ಪಡೆದುಕೊಂಡವು. 

ಎರಡು ದಿನಗಳ ಕಾಲ ಪಟ್ಟಣದ ವಿವಿ ಸಂಘದ ಎಸ್‌.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2021-22ನೇ ಸಾಲಿನ ಏಕ ವಲಯ ಹ್ಯಾಂಡ್ ಬಾಲ್ ಪಂದ್ಯಾವಳಿ ಅಂತ್ಯಗೊಂಡಿದೆ. 

ಕುತೂಹಲ ಮೂಡಿಸಿದ್ದ ಪುರುಷರ ವಿಭಾಗದಲ್ಲಿ ಅಥಣಿಯ ಕೆ.ಎ.ಲೋಕಾಪೂರ ಕಾಲೇಜು ತಂಡ ಹಾಗೂ ರಾಯಭಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಪೈನಲ್ ವಿಭಾಗದಲ್ಲಿ ನಿರ್ವಹಣಾ ಹಣಿ ನಡೆಸಿದವು. ಕೊನೆಗೆ ಅಥಣಿಯ ಕೆ.ಎ.ಲೋಕಾಪೂರ ಕಾಲೇಜು ತಂಡ 11-5 ರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ರಾಯಭಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ತಾಳಿಕೋಟೆ ಪಟ್ಟಣದ ಎಸ್‌.ಕೆ. ಕಾಲೇಜು ತಂಡ ತೃತೀಯ ಸ್ಥಾನ ಮತ್ತು ಅಥಣಿಯ ಎಸ್‌ಎಸ್‌ಎಮ್‌ಎಸ್ ಕಾಲೇಜ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. 

ಮಹಿಳೆಯರ ವಿಭಾಗದಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಬೆಳಗಾವಿಯ ಲಿಂಗರಾಜು ಕಾಲೇಜು ತಂಡವು ಗೋಕಾಕದ ಕೆಎಲ್‌ಇ ಕಾಲೇಜು ತಂಡವನ್ನು 6-2 ರಲ್ಲಿ ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಪೈನಲ್ ಪಂದ್ಯದಲ್ಲಿ ಸೋತ ಗೋಕಾಕದ ಕೆಎಲ್‌ಇ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬೆಳಗಾವಿಯ ಆರ್‌ಎಲ್‌ಎಸ್ ಕಾಲೇಜು ತಂಡ ತೃತೀಯ, ಮುಧೋಳದ ಎಸ್‌.ಆರ್‌.ಕಂಠಿ ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. 

ಪಂದ್ಯಾವಳಿಯ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೋ.ಆರ್‌.ವಿ.ಜಾಲವಾದಿ ವಹಿಸಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕ ಜಗದೀಶ ಗಸ್ತಿ, ಡಾ.ದಯಾನಂದ ಮೂಗಡ್ಲಿಮಠ, ಎಸ್‌.ಬಿ.ಚಳಗೇರಿ, ಡಾ.ಅಶೋಕ ಜಾಧವ, ರವಿ ಗೋಲಾ, ಪ್ರಕಾಶ ನರಗಟ್ಟಿ, ಎಸ್‌.ಎ.ಸರೂರ, ವ್ಹಿ.ಸಿ.ಹಿರೇಮಠ, ಆರ್‌.ಎಲ್‌.ಕೊಪ್ಪದ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು. 


ಸುದ್ದಿ ಓದಿ