ಬೆಳಗಾವಿ ಕನ್ನಡಿಗರ ಆಸ್ತಿ : ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಿ : ಕನ್ನಡಿಗರಿಂದ ಒಕ್ಕೂರಲಿನ ಒತ್ತಾಯ

ಬೆಳಗಾವಿ ಕನ್ನಡಿಗರ ಆಸ್ತಿ : ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಿ : ಕನ್ನಡಿಗರಿಂದ ಒಕ್ಕೂರಲಿನ ಒತ್ತಾಯ
Belgaum Kannadigas' property: Take a decision in the corporation: Kannadigas demand a single settlem

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯಗಳನ್ನು ಅಂಗಿಕರಿಸಬೇಕೆAದು ಒತ್ತಾಯಿಸಿ ಬೆಳಗಾವಿಯ 20ಕ್ಕೂ ಅಧಿಕ ಕನ್ನಡ ಸಂಘಟನೆಗಳು ನೂತನ ಮಹಾಪೌರರಾದ ಶ್ರೀಮತಿ ಪ್ರೀತಿ ಕಾಮಕರ ಮತ್ತು ಉಪಮಹಾಪೌರ ಹನುಮಂತ ಕೊಂಗಾಲಿ ಅವರನ್ನು ಒತ್ತಾಯಿಸಿವೆ. 

     ಗುರುವಾರ ಮುಂಜಾನೆ ಪಾಲಿಕೆಗೆ ಆಗಮಿಸಿದ ಕನ್ನಡ ಸಂಘಟನೆ ಪದಾಧಿಕಾರಿಗಳು ನೂತನ ಮಹಾಪೌರರಾದ ಶ್ರೀಮತಿ ಪ್ರೀತಿ ಕಾಮಕರ ಮತ್ತು ಉಪಮಹಾಪೌರ ಹನುಮಂತ ಕೊಂಗಾಲಿ ಅವರನ್ನು ಭೆಟ್ಟಿಯಾಗಿ ಈ ಕುರಿತು ಮನವಿ ಮಾಡಿದರು. 2005ರ ಅಕ್ಟೊಬರ್ 27ರಂದು ಬೆಳಗಾವಿ ಪಾಲಿಕೆಯು ಬಹುಮತದಿಂದ ಅಂಗೀಕರಿಸಿದ  ಮಹಾರಾಷ್ಟöç ಪರ ಗೊತ್ತುವಳಿಯನ್ನು ಮಹಾರಾಷ್ಟöç ಸರಕಾರ ಸುಪ್ರೀಂ ಕೋರ್ಟಿನಲ್ಲಿ ತಾನು ದಾಖಲಿಸಿರುವ ದಾವೆಯಲ್ಲಿ ಪೂರಕ ದಾಖಲೆಯಾಗಿ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಈ ಬೇಡಿಕೆಯನ್ನು ಮಂಡಿಸಿವೆ. ಗ್ರಾಮವನ್ನು ಘಟಕವನ್ನಾಗಿ ಪರಿಗಣಿಸಿ, ಗಡಿಭಾಗದ ಮಾರಾಠಿಗರ ಇಚ್ಛೆಯ ಅನುಸಾರ ಬೆಳಗಾವಿ ಸಹಿತ ಇತರ ಪ್ರದೇಶಗಳನ್ನು ಮಹಾರಾಷ್ಟöçಕ್ಕೆ ಸೇರಿಸಬೇಕೆಂದು 2005ರಲ್ಲಿ ಪಾಲಿಕೆಯು ಬಹುಮತದಿಂದ ನಿರ್ಣಯವನ್ನು ಅಂಗಿಕರಿಸಿದ್ದಲ್ಲದೆ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿಗಳನ್ನು ಮಹಾರಾಷ್ಟöçಕ್ಕೆ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ನ್ನು ಕೋರಲು ನಿರ್ಣಯಿಸಲಾಗಿತ್ತು.

    ಅಂದಿನ ನಿರ್ಣಯ ಸದ್ಯ ಸುಪ್ರೀಂ ಕೋರ್ಟಿನಲ್ಲಿ ಮಹಾರಾಷ್ಟöçದ ದಾವೆಯ ಒಂದು ಭಾಗವಾಗಿದೆ. ಈಗ ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕದ ಪರವಾಗಿರುವ ಸದಸ್ಯರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಒಟ್ಟು 58 ಸದಸ್ಯರಲ್ಲಿ 55 ಸದಸ್ಯರು ನಮ್ಮವರೇ ಆಗಿದ್ದಾರೆ. ನೂತನ ಮಹಪೌರರು ಮತ್ತು ಉಪಮಹಾಪೌರಾರು ಅಪ್ಪಟ ಕನ್ನಡಿಗರಾಗಿದ್ದಾರೆ. ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಕರ್ನಾಟಕದ, ವಿಶೇಷವಾಗಿ ಬೆಳಗಾವಿ ಹಿತಾಸಕ್ತಿಯನ್ನು ಸುಪ್ರೀಂ ಕೋರ್ಟಿನಲ್ಲಿ ರಕ್ಷಿಸಲು ನಿರ್ಣಯಗಳನ್ನು ಅಂಗಿಕರಿಸಬೇಕೆAದು ಒತ್ತಾಯಿಸಲಾಯಿತು.

    ಕನ್ನಡ ಸಂಘಟನೆಗಳ ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಮಹಾಪೌರಾರದ ಶ್ರೀಮತಿ ಪ್ರೀತಿ ಕಾಮಕರ ಮತ್ತು ಉಪಮಹಪೌರ ಹನುಮಂತ ಕೊಂಗಾಲಿ ಅವರೂ ಶೀಘ್ರವೇ ಈ ಬಗ್ಗೆ ಕ್ರಮ ಕೈಕೊಳ್ಳುವ ಭರವಸೆ ನೀಡಿದರು. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಮಹಾಪೌರರ ಕಾರ್ಯಲಯದಲ್ಲಿ ನಡೆದ ಸನ್ಮಾನ ಮತ್ತು ಚರ್ಚೆಯಲ್ಲಿ ಅವತ್ತಕ್ಕೂ ಅಧಿಕ ಕನ್ನಡ ಮುಖಂಡರು ಪಾಲ್ಗೊಂಡಿದ್ದರು. 

    ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಧ್ಯಕ್ಷ ಮಹಾದೇವ ತಳವಾರ, ನಾಮನಿರ್ದೇಶನಂಗೊAಡ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಹೋರಾಟಗಾರದ ಹುಚ್ಚರೆಡ್ಡಿ ಶಿವರೆಡ್ಡಿ, ಮೈನೋದ್ದಿನ ಮಕಾನದಾರ, ಮಹೇಶ ಶೀಗಿಹಳ್ಳಿ, ಪ್ರೇಮ್ ಚೌಗುಲಾ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. 

ಸುದ್ದಿ ಓದಿ