ಸೆ.28 ರಂದು ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ
ಲೋಕದರ್ಶನ ವರದಿ
ಧಾರವಾಡ : ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಏಳು ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಬೆಳಗಾವಿ(ಕಿತ್ತೂರು ಕರ್ನಾಟಕ) ವಿಭಾಗ ಮಟ್ಟದ ಸರಕಾರಿ ನಿವೃತ್ತ ನೌಕರರ ಒಂದು ದಿನದ ಸಮಾವೇಶ ಸೆಪ್ಟಂ.28 ರಂದು(ಸೋಮವಾರ) ಮುಂಜಾನೆ 9 ಗಂಟೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಪು ಸಭಾಭವನದಲ್ಲಿ ಜರುಗಲಿದೆ.
ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲನಲವಡಿ ಹಾಗೂ ಪ್ರಧಾನ ಕಾರ್ಯದರ್ಶಿ ಗುರು ತಿಗಡಿ ಅವರು, ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ ಸಮಾವೇಶ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹಾಗೂ ಎಐಪಿಟಿಎಫ್ ಅಧ್ಯಕ್ಷ ಬಸವರಾಜ ಗುರಿಕಾರ ಸಾಧಕರನ್ನು ಮತ್ತು ಹಿರಿಯ ಸದಸ್ಯರನ್ನು ಗೌರವಿಸಲಿದ್ದು, ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಭೈರ್ಪ ಅಧ್ಯಕ್ಷತೆವಹಿಸುವರು.
ಸಂಸದ ಪ್ರೊ.ಎಂ.ನಾಗರಾಜ, ವಿಧಾನ ಪರಿಷತ್ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರುಗಳಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ. ವಿನಯ ಕುಲಕರ್ಣಿ, ಎನ್.ಎಚ್.ಕೋನರೆಡ್ಡಿ, ಪ್ರದೀಪ ಶೆಟ್ಟರ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಎಫ್.ಎಚ್.ಜಕ್ಕಪ್ಪನವರ, ಶ್ರೀನಿವಾಸ ಮಾನೆ, ಲಿಂಗರಾಜ ಪಾಟೀಲ, ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳಾದ ರಂಗೇಗೌಡ, ಎಸ್.ಎಂ. ಆನಂದಪ್ಪ, ಎಸ್.ಎಫ್.ಸಿದ್ಧನಗೌಡರ, ಬಿ.ಎಂ.ಸೂರಗೊಂಡ, ಎಸ್.ಬಿ.ಸಿದ್ನಾಳ, ಎಸ್.ಜಿ.ಬಿರಾದಾರ, ಎಸ್.ಬಿ.ಅಣ್ಣಿಗೇರಿ, ವ್ಹಿ.ಎಂ. ಹೆಗಡೆ, ಕೆ.ಎಚ್.ಬೇಲೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.