ಕನಕಗಿರಿ

ಬೇಡ ಜಂಗಮ ಪ್ರಮಾಣ ಪತ್ರ ನಿಡಲು ಒತ್ತಾಯಿಸಿ ಪ್ರತಿಭಟನೆ

ಬೇಡ ಜಂಗಮ ಪ್ರಮಾಣ ಪತ್ರ ನಿಡಲು ಒತ್ತಾಯಿಸಿ ಪ್ರತಿಭಟನೆ


ಲೋಕದರ್ಶನ ವರದಿ 

ಕನಕಗಿರಿ 08: ಬೇಡ ಜಂಗಮ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಇಂದು ಸುವರ್ಣ ಗಿರಿ ವಿರಕ್ತ ಮಠ ದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಗೆ ವೇದಮೂರ್ತಿ ಪದ್ಮಾಕ್ಷರಯ್ಯ ಸ್ವಾಮಿ ಬೃಹನ್ ಮಠ ಸೂಳೇಕಲ್ ಇವರು ಶುಕ್ರವಾರ ಪ್ರತಿಭಟನೆ ಮೆರವಣಿಗೆಗೆ ಚಾಲನೆ ನೀಡಿದರು ಪ್ರತಿಭಟನೆ ಮೆರವಣಿಗೆಯು ರಾಜಭೀದಿಯ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಸಿಲ್ ಕಾರ್ಯಾಲಯಕ್ಕೆ ಆಗಮಿಸಿ ತಸಿಲ್ದಾರ್ ಧನಂಜಯ ಮಾಲ್ಗಿತ್ತಿ ಇವರಿಗೆ ಮನವಿ ಸಲ್ಲಿಸಿದರು ಬಳಿಕ ಮಾತನಾಡಿದ ಕೆ ಗಂಗಾಧರ ಸ್ವಾಮಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೆಜಿಟಿಯರ್ ಆದೇಶ ಮಾಡಿವೆ. ಸುಪ್ರಿಂ ಕೋರ್ಟ್‌, ಹೈಕೋಟ್‌ಗಳು ಕೂಡಾ ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳಾದ ಬೇಡ ಜಂಗಮರು ಎಂದು ಹೇಳಿದ್ದಾರೆ.  


ಇದರ ಜೊತೆಗೆ ಡಾ.ಸ್ವಾಮಿನಾಥನ್ ಕಾಮತ್ ವರದಿಯಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಲು ಆದೇಶ ಮಾಡಿದ್ದಾರೆ. ಇಷ್ಟೆಲ್ಲ ಇದ್ದರೂ ಸರ್ಕಾರ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದರು. 

ಸರ್ಕಾರ ದೋರಣೆ ಖಂಡಿಸಿ ಬಿ.ಡಿ ಹಿರೇಮಠ ವಾಪಸ್ಸು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗ ಅಂದು ಸಮಾಜ ಕಲ್ಯಾಣ ಸಚಿವರು ಜುಲೈ 1ರಿಂದ ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಲು ಆದೇಶ ಮಾಡುವುದಾಗಿ ಎರಡನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟ ಧರಣಿ 

ಹೇಳಿದ್ದರೂ ಆದರೆ ಸಚಿವರ ಮಾತು ನಂಬಿ ಧರಣಿ ಪಡೆಯಲಾಯಿತು. ಇದುವರೆಗೂ ಸರ್ಕಾರ ಆದೇಶ ಮಾಡಿಲ್ಲ. ಕೂಡಲೇ ಸರ್ಕಾರ ಬೇಡ ಜಂಗಮರಿಗೆ ಎಸ್‌.ಸಿ ಪ್ರಮಾಣ ಪತ್ರ ಒದಗಿಸಬೇಕೆಂದು ಆಗ್ರಹಿಸಿದರು. 


ಈ ಸಂದರ್ಭದಲ್ಲಿ ವಾಗೆ ಸ್ವಾಮಿ ಹಿರೇಮಠ್ ಮಲ್ಲಯ್ಯ ಶಾಸ್ತ್ರಿ ಗುಡದೂರು ಬಸವರಾಜ ಸ್ವಾಮಿ ಹಿರೇ ಡಂಕನ್ಕಲ್ ಪಟ್ಟಣ ಪಂಚಾಯತಿ ಸದಸ್ಯ ಸಿದ್ದೇಶ್ ಕಲ್ಬಾಗ್ಲುಮಠ ರುದ್ರಮುನಿ ಸ್ವಾಮಿ ಹಿರೇಮಠ್ ಪ್ರಮುಖರಾದ ತಿಪ್ಪಯ್ಯಸ್ವಾಮಿ ಮಾಕಂರ್ಡೇಯ ಸ್ವಾಮಿ ನವಲಿ ಚೆನ್ನಯ್ಯ ಸ್ವಾಮಿ ಮೈಲಾಪುರ ಮಠ ಸಂಗಯ್ಯ ಸ್ವಾಮಿ ಬಸರಾಳ ಮಠ ಶರಣಯ್ಯ ಸ್ವಾಮಿ ಚುಡಾಮಣೆ ತಿಪ್ಪಯ್ಯಸ್ವಾಮಿ ನವಲಿ ವೀರಭದ್ರಯ್ಯ ಸ್ವಾಮಿ ಮೈಲಾಪುರ್‌ಮಠ ಸೂಗಯ್ಯ ಸ್ವಾಮಿ ಶಾಲಾಮಟ್ ವಿಶ್ವರಾಧ್ಯ ಸ್ವಾಮಿ ಚಿಂತೆಗುಂಟಿ ಮಠ ಮಲ್ಲಯ ಸ್ವಾಮಿ ವಸ್ತ್ರದ ಸಿದ್ದಯ್ಯ ಸ್ವಾಮಿ ಮಲದ ಗುಡ್ಡ ವಿಶ್ವನಾಥ್ ಸ್ವಾಮಿ ಎಂ ಸೋಮಶೇಖರಯ್ಯ ಸ್ವಾಮಿ ಹಿರೇಮಠ ಮಾಜಿ ಜಿಲ್ಲಾ ಪಂಚಾಯತ್  ಸದಸ್ಯೆ ಕವಿತಾ ಕಲ್ಬಾಗಿಲುಮಠ ಅನ್ನಪೂರ್ಣಮ್ಮ ಗೊಂಡಬಾಳ ಬಸ್ಸಮ್ಮ ಹಿರೇಮಠ್ ಸುಮಾ ಎಂ ಹಿರೇಮಠ್  ಸುನಂದಮ್ಮ ಶಾಲಾ ಮಠ ಸೇರಿ ದಂತೆ ಮಹಿಳೆಯರು  ಸೇರಿದಂತೆ ತಾಲೂಕಿನ ಬೇಡ ಜಂಗಮರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 


ಸುದ್ದಿ ಓದಿ