ಬೇಡ-ಜಂಗಮ ಸಮಾಜದ ಜಾಗೃತಿ ಸಭೆ
ಲೋಕದರ್ಶನ ವರದಿ
ಬೈಲಹೊಂಗಲ 07: ಬೇಡ-ಜಂಗಮ ಬಡ ಸಮಾಜ ಭಾಂದವರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ವಂಚಿತರಾಗಿದ್ದಾರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಸಮಾಜಮುಖಿಗೆ ತರುವ ಕೆಲಸ ಮಾಡಲು ಅವರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕು ಈ ನಿಟ್ಟಿನಲ್ಲಿ ಅನ್ಯ ಜಾತೀಯವರು ಇದನ್ನು ವೀರೋಧಿಸಬಾರದು. ಬೇಡ- ಜಂಗಮ ಜಾತಿ ಜನಾಂಗ ಎಲ್ಲ ಸಮಾಜವನ್ನು ಪ್ರೀತಿಸುವ ಜನಾಂಗವಾಗಿದೆ ಎಂದು ಎಣಗಿಯ ಬಂಗಾರಜ್ಜಮಠದ ಧರ್ಮದರ್ಶಿ ವೀರುಪಾಕ್ಷಯ್ಯ ಸ್ವಾಮಿಜಿ ಹೇಳಿದರು.
ಅವರು ತಾಲೂಕಿನ ಏಣಗಿ ಗ್ರಾಮದ ಬಂಗಾರಜ್ಜನಮಠದಲ್ಲಿ ಭಾನುವಾರ ನಡೆದ ಬೇಡ-ಜಂಗಮ ಜಾಗೃತ ಸಭೆಯಲ್ಲಿ ಮಾತನಾಡಿರು.
ಅಖಲ ಕರ್ನಾಟಕ ಡಾ.ಅಂಬೇಡ್ಕರ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಬಸಲಿಂಗಯ್ಯ ಚಿಕ್ಕಮಠ ಮಾತನಾಡಿ, ಸಮಾಜ ಭಾಂದವರು ಎಲ್ಲರೂ ಒಗ್ಗಟ್ಟಿನಿಂದ ಸಂಘಟಿಕರಾಗಿ ಸಮಾಜವನ್ನು ಬಲಪಡಿಸುವ ಕೆಲಸ ಮಾಡಬೇಕು. ಈಗಾಗಲೇ ಬೇಡ-ಜಂಗಮ ಎಸಿ ಪ್ರಮಾಣ ಪತ್ರ ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದಕ್ಕೆ ಅಡೆತಡೆ ಆಗುತ್ತಿದ್ದು ಈ ನಿಟ್ಟಿನಲ್ಲಿ ಒಕ್ಕೂಟ್ದ ಎಲ್ಲ ಮುಖಂಡರ, ಶಿವಾಚಾರ್ಯರ ಮಾಗದರ್ಶನದಂತೆ ಎಲ್ಲರೂ ಸೇರಿ ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡೋಣ ಎಂದರು.
ಸಂಗಯ್ಯ ಹಿರೇಮಠ, ರಾಜಶೇಖರ ಹಿರೇಮಠ, ವೀರುಪಾಕ್ಷಯ್ಯ ಹೂಲಿಮಠ, ಬಸವರಾಜ ಹೂಲಿಮಠ, ಮಲ್ಲಯ್ಯ ಮಠಪತಿ, ಮಲ್ಲಯ್ಯ ಹೂಗಾರ, ಪ್ರೇಮಾ ಪಾಟೀಲ, ಈರಯ್ಯ ಗದ್ಲಿಮಠ, ವಿರುಪಾಕ್ಷಯ್ಯ ಶಿದ್ಲಿಗಿಮಠ, ಕಲ್ಲಯ್ಯ ಮಠಪತಿ, ರಾಮಯ್ಯ ಪುಜೇರ ಹಾಗೂ ಸಮಾಜ ಬಾಂಧವರು ಇದ್ದರು