ಬಳ್ಳಾರಿ

ಉಚಿತ ವಧು ವರರ ಸದಸ್ಯತ್ವ ಮಾಹಿತಿ ಅಭಿಯಾನ ಕಾರ್ಯಕ್ರಮ ನೆರವೇರಿತು

ಉಚಿತ ವಧು ವರರ ಸದಸ್ಯತ್ವ ಮಾಹಿತಿ ಅಭಿಯಾನ ಕಾರ್ಯಕ್ರಮ ನೆರವೇರಿತು

ಲೋಕದರ್ಶನ ವರದಿ 

ಕಂಪ್ಲಿ 12: ಪಟ್ಟಣದ ಸತ್ಯನಾರಾಯಣ ಪೇಟೆಯ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ಮಂಜುನಾಥ ವರ್ಲ್ಡ್‌ ವಧು ವರರ ಮಾಹಿತಿ ಕೇಂದ್ರದಿಂದ ವೀರಶೈವ ಲಿಂಗಾಯತ ವಧು ವರರ ಶೀಘ್ರ ಕಲ್ಯಾಣಕ್ಕಾಗಿ, ಉಚಿತ ಸದಸ್ಯತ್ವ ಮಾಹಿತಿ ಅಭಿಯಾನ ಕಾರ್ಯಕ್ರಮ ಸೆ. 11ರಂದು ಯಶಸ್ವಿಯಾಗಿ ಜರುಗಿತು.  


ಬಳಗಾನೂರುಮಠದ ಬಿ.ಎಂ.ನಾಗಭೂಷಣಶಾಸ್ತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಉಚಿತವಾಗಿ ವಧು ವರರ ಮಾಹಿತಿ ನೀಡುವುದರಿಂದ ಹೆಣ್ಣು  ಮತ್ತು ಗಂಡು ಹೆತ್ತ ಪೋಷಕರಿಗೆ ವರದಾನವಾಗಿದೆ. ಇದರಿಂದಾಗಿ ಸುಲಭವಾಗಿ ವಧು ವರರ ಮಾಹಿತಿ ದೊರಕಲು ಸಾಧ್ಯವಾಗಿದೆ. ಇದರಿಂದ ವರ ವರರನ್ನು ಗುರುತಿಸಿ ಶೀಘ್ರ ಕಲ್ಯಾಣ ನೆರವೇರಿಸಲು ಅನುಕೂಲವಾಗುತ್ತದೆ. ವೀರಶೈವ ಲಿಂಗಾಯತರು ಒಳ ಪಂಗಡದವರು ಭೇದ ಮರೆತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.  


ಕಂಪ್ಲಿಯ ಮಂಜುನಾಥ ವರ್ಲ್ಡ್‌ ವಧು ವರರ ಮಾಹಿತಿ ಕೇಂದ್ರದ ಸಂಸ್ಥಾಪಕ ಎಂ.ಮಂಜುನಾಥ ಮಾತನಾಡಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉಚಿತ ವಧು ವರರ ಸದಸ್ಯತ್ವ ಮಾಹಿತಿ ಅಭಿಯಾನ ಕಾರ್ಯಕ್ರಮ ನಡೆಯಲಿ ಎಂದರು ಭಾರತ ಸರ್ಕಾರ ರೂಪಿಸಿದ ಸ್ಯಾಂಡಿಸ್ ಆ್ಯಪ್ ಮಾರ್ಗದರ್ಶನ ಮೂಲಕ ಎಲ್‌ಸಿಡಿ ಟಿವಿ ಮೂಲಕ ನೂತನ ತಂತ್ರಜ್ಞಾನ ಬಳಸಿ ವಧು ವರರ ಮಾಹಿತಿಯನ್ನು ಉಚಿತವಾಗಿ ನೀಡಲಾಯಿತು.ಪ್ರಸ್ತುತ ದಿನಮಾನಗಳಲ್ಲಿ ವಧು ವರರ ಅನ್ವೇಷಣೆ ಪಾಲಕ ಪೋಷಕರಿಗೆ ತುಂಬಾ ಕಠಿಣವಾಗಿದೆ. ಹೆಣ್ಣು ಗಂಡು ಹುಡುಕುವುದಕ್ಕಾಗಿ ಮದುವೆ ಮಾಡಿದಷ್ಟು ಶ್ರಮವಾಗುತ್ತಿದೆ. ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸೂಕ್ತ ವಧು ವರರ ದೊರಕದೆ ಸಂಕಷ್ಟ ಪಡುವಂತಹ ಇಂದಿನ ದಿನಗಳಲ್ಲಿ ಉಚಿತ ವಧುವರರ ಮಾಹಿತಿ ನೀಡುತ್ತಿರುವುದು ಲೋಕ ಕಲ್ಯಾಣಾರ್ಥಸೇವೆಯಾಗಿದೆ. ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಂತಹ ಉಚಿತ ವಧು ವರರ ಮಾಹಿತಿ ಅಭಿಯಾನ ತಾಲೂಕು ಮತ್ತು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಜರುಗುವಂತಾಗಬೇಕು ಎಂದು ಹೇಳಿದರು.  


ಮಲ್ಲಿಕಾರ್ಜುನ ದೇವಸ್ಥಾನ ನಿರ್ದೇಶಕ ಬುಕ್ಕಸಾಗರದ ಮೇಟಿ ನಾಗರಾಜ ಮಾತನಾಡಿ, ಮ್ಯಾಟ್ರೋಮನಿಗಳು ಪ್ಯಾಕೇಜ್ ರೂಪದಲ್ಲಿ ವಧುವರರ ಪಾಲಕ ಪೋಷಕರನ್ನು ಶೋಷಣೆ ಮಾಡುತ್ತಿವೆ. ಇದನ್ನು ತಪ್ಪಿಸಲು ಉಚಿತ ವಧು ವರರ ಮಾಹಿತಿ ನೀಡುತ್ತಿದ್ದು ಉತ್ತಮ ಸಮಾಜ ಸೇವಾಕಾರ್ಯವಾಗಿದೆ. ಕೆಲ ಮ್ಯಾಟ್ರೋಮನಿಗಳು, ಬ್ರೋಕರ್‌ಗಳು ವಧು ವರರ ಪಾಲಕರಿಂದ ಹಣ ಇಸಿದುಕೊಂಡ ನಂತರ ಅವರ ಪೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿ ವಂಚಿಸುತ್ತಿದ್ದಾರೆ ಎಂದರು. ಜವಳಿ ದೊಡ್ಡಬಸಪ್ಪ, ಮೇಟಿ ಮಂಗಳಮ್ಮ, ಗಂಡಿ ನಾಗರಾಜ್, ಟಿ.ಎಂ.ರುದ್ರಸ್ವಾಮಿ, ಮೆಟ್ರಿ ಷಣ್ಮುಖ, ವೀರೇಶಕುಮಾರ್, ಸುಲೋಚನಾ, ಸರೋಜಮ್ಮ, ವೀರೇಶ್‌ಕುಮಾರ್, ಮೀನಾಕ್ಷಿ, ಶಾರದಾ, ಬಿ.ಎಂ.ಬಸವರಾಜ್, ಇತರರು ವೇದಿಕೆ ಮೇಲಿದ್ದು ಮಾತನಾಡಿದರು. ನಾನಾ ಜಿಲ್ಲೆಗಳಿಂದ ವೀರಶೈವ ಲಿಂಗಾಯತ ಸಮಾಜದ ವಧುವರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ