ವಾಸ್ತವವಲ್ಲದ ಟೀಕೆಗಳಿಗೆ ಕಿವುಡರಾಗಿ
ನಾವು ಸಮಾಜದ ಮಧ್ಯದಲ್ಲಿ ಬದುಕುತ್ತಿದ್ದೇವೆ,ಆದ್ದರಿಂದಲೇ ನಮಗೆ ಹಲವಾರು ಟೀಕೆಗಳು ನಮ್ಮ ವೈರಿಗಳಿಂದ ಅಥವಾಹಿತ ಶತೃಗಳಿಂದ ಆಗಾಗ ಬರುವುದು ಸಹಜವಾಗಿದೆ. ಆಗ ನಾವು ಅವರು ಮಾಡಿರುವ ಟೀಕೆಗಳಿಗೆ ಚಿಂತಸದೆಅವರು ನಮ್ಮದೋಷ, ದೌರ್ಬಲ್ಯಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುತ್ತಿದ್ದಾರೆಂದು ನಾವು ಭಾವಿಸಿದರೆ ಆಗ ನಮ್ಮಜೀವನ "ಚೀನಿವಾರನ ಕುಲುಮೆಯಲ್ಲಿ ಬೆಂದಷ್ಟು ಅಪ್ಪಟ ಚಿನ್ನ ಹೆಚ್ಚು ಹೆಚ್ಚು ಹೊಳೆಯುವಂತೆ" ನಮ್ಮ ವ್ಯಕ್ತಿತ್ವವು ಉತ್ತಮವಾಗಿ ಅನಾವರಣಗೊಳ್ಳಲು ಸಹಾಯವಾಗುತ್ತದೆ. ಇದು ಇತರರು ಮಾಡಿರುವ ಟೀಕೆಗಳಲ್ಲಿ ಯಥಾರ್ಥವಾಗಿದ್ದಾಗ ಮಾತ್ರ ನಮಗೆ ಮಾಡಿದ ಟೀಕೆಗಳು ನಮ್ಮ ಅಭಿವೃದ್ಧಿಯನ್ನುಂಟು ಮಾಡಲು, ನಮ್ಮಲ್ಲಿಯ ಅಹಂ ತೊಡೆದು ಹಾಕಲು ಹಾಗೂ ನಮ್ಮ ಸುಂದರ ಭವಿಷ್ಯ ನಿಮರ್ಾಣವಾಗಲು ಸಹಾಯವಾಗುತ್ತದೆ.
ಬಹುತೇಕ ಟೀಕೆಗಳಲ್ಲಿ ಯಥಾರ್ಥಗಿಂತಲೂ ಹೆಚ್ಚು ವ್ಯಂಗ್ಯದಿಂದ, ಶಬ್ಧಚಮತ್ಕಾರಗಳಿಂದ, ಇನ್ನೊಬ್ಬರನ್ನು ಹಿಯಾಳಿಸಬೇಕೆಂಬ, ಅವರ ವ್ಯಕ್ತಿತ್ವಕ್ಕೆ ಕಳಂಕ ತರಬೇಕೆಂಬ, ಉದ್ದೇಶದಿಂದಲೂ ಸಹ ಇರುತ್ತವೆ. ಅಂತಹ ಸಂದರ್ಭದಲ್ಲಿ ನಾವು ಕಿವುಡರಾಗಿ ವತರ್ಿಸಬೇಕಾದ ಅನಿವಾರ್ಯತೆ ಇದೆ. ಉದ್ದೇಶ ಪೂರಕ ನಮ್ಮನ್ನು ಟೀಕಿಸುವವರಲ್ಲಿ ಅಸೂಯಾಪರ ಮನೋಭಾವ ಹೊಂದಿದ್ದುಅವರ ಮೂಲ ಉದ್ದೇಶ ನಮ್ಮ ಪ್ರಗತಿಗೆ ತಡೆ ಒಡ್ಡಿ ನಮ್ಮಲ್ಲಿ ತೀವ್ರವಾದ ಅಶಾಂತಿಯುಂಟು ಮಾಡುವದಾಗಿರುತ್ತದೆ. ಅಷ್ಟೇ ಅಲ್ಲ ನಮ್ಮಲ್ಲಿರುವ ಆತ್ಮವಿಶ್ವಾಸಕ್ಕೆ ಕುಂದು ತರುವ ಷಡ್ಯಂತ್ರವು ಆಗಿರುತ್ತದೆ ಎಂಬುದು ನಮ್ಮ ಆತ್ಮಾವಲೋಕನದಿಂದ ಅರಿತು ಕಿವುಡರಾಗಿದ್ದಾಗ ಮಾತ್ರ ನಮ್ಮಲ್ಲಿ ನಮಗೆ ಆತ್ಮವಿಶ್ವಾಸ ಮೂಡುತ್ತದೆೆ. ನಮ್ಮ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ವಾಸ್ತವ ಪರಿಸ್ಥಿತಿ ಎದುರಿಸುವ ಧೈರ್ಯ ನಮ್ಮಲ್ಲಿ ಇರುವದಾದರೆ ಇತರರ ವ್ಯರ್ಥಟೀಕೆ ಮಾತುಗಳು ನಮ್ಮನ್ನು ಎಂದಿಗೂ ಕಂಗೆಡಿಸಲಾರವು ಹಾಗೂ ಮೂಢರನ್ನಾಗಿ ಮಾಡಲಾರವು.ಇದಕ್ಕೆ ಸಂವಾದಿಯಾಗಿಅಕ್ಕಮಹಾದೇವಿಯವರುತಮ್ಮ ವಚನದಲ್ಲಿ ಹೇಳಿರುವ ಮಾತುಇಲ್ಲಿ ನೆನೆಯಬಹುದು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗೆಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ಧಕ್ಕೆ ನಾಚಿದೊಡೆಂತಯ್ಯ? ಚೆನ್ನ ಮಲ್ಲಿಕಾಜರ್ುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಇದರ ಅರ್ಥ ಬೆಟ್ಟದ ಮೇಲೆ ಮನೆಮಾಡಿಯಾಗಿದೆ. ಸುತ್ತಲಿನ ಕಾಡಿನ ಪ್ರಾಣಿಗಳು ಅಲ್ಲಿಗೆ ಬರುವದು ಸಹಜವಾಗಿದೆ. ಅವುಗಳಿಗೆ ಅಂಜಿದಡೆ ಹೇಗೆ? ಅದೇ ರೀತಿ ಸಮುದ್ರದತಡಿಯಲ್ಲಿ ಮನೆ ಮಾಡಿದಾಗ ನೊರೆತುಂಬಿದ ಅಲೆಗಳು ಬಂದು ಅಪ್ಪಳಿಸುತ್ತವೆ. ಅದುಕೂಡ ಸಹಜವೆ. ಸಂತೆಯಲ್ಲಿ ಮನೆ ಮಾಡಿದ ಮೇಲೆ ಅಲ್ಲಿಉಂಟಾಗುವ ಶಬ್ಧಕ್ಕೆ ನಾಚಿಕೊಂಡರೆ ಹೇಗೆ? ಅಲ್ಲಿಗದ್ದಲ ಉಂಟಾಗುವದು ಸಹಜ.ಅದೇರೀತಿಯಾಗಿ ಸಮಾಜದಲ್ಲಿ ಹುಟ್ಟಿದ ಬಳಿಕ ಜನರು ನಮ್ಮನ್ನು ಸ್ತುತಿಸುತ್ತಾರೆ ಹಾಗೂ ನಿಂದಿಸುತ್ತಾರೆ. ಇದು ಲೋಕದ ಸಹಜ ವರ್ತನೆಯಾಗಿದೆ.ಜನರ ಸ್ತುತಿ ನಿಂದನೆಗಳನ್ನು ಕಡೆಗಣಿಸಿ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎನ್ನುತ್ತಾಳೆ ಅಕ್ಕ. ಇದನ್ನು ನಾವು ಯಾವತ್ತು ಮರೆಯದೆ ನಮ್ಮಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸುಂದರವಾಗುತ್ತದೆ.
ನಾವು ಯಾವುದೇ ಕೆಲಸವನ್ನು ಎಷ್ಠೇ ಉತ್ತಮವಾಗಿ ಮಾಡಿದರೂ ಸಹ ಒಂದಲ್ಲ ಒಂದು ತೆರನಾದ ಟೀಕೆ ಆಗಾಗ ಬಂದೇ ಬರುತ್ತವೆ. ಟೀಕೆಗಳು ನಾವು ಜಾಗ್ರತರಾಗಿರಬೇಕೆನ್ನುದಕ್ಕೆ ಎಚ್ಚರಿಕೆಯ ಕರೆಗಂಟೆ ಎಂದು ನಾವು ತಿಳಿಯಬೇಕು.ಟೀಕೆಯಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಬೇಕಾದರೆ 'ನೀವು ಏನು ಹೇಳಬಾರದು, ಏನೂ ಮಾಡಬಾರದು, ಏನು ಆಗಬಾರದು" ಎಂದು ಒಬ್ಬ ಆಂಗ್ಲ ಮೇಧಾವಿ ಹೇಳುತ್ತಾನೆ. ಟೀಕಾಶಾಸ್ತ್ರಕ್ಕೆ ಹೃದಯವೇ ಇರುವದಿಲ್ಲ ಅದುಎಲ್ಲಿಯಾವಾಗ ಬೇಕಾದರೂ ಬರಬಹುದು.
ಟೀಕೆ ಮಾಡುವವರಲ್ಲಿ 'ಅಹಂ' ಸ್ವಲ್ಪತಲೆಗೆ ಏರಿರುತ್ತದೆ. ಇತರರ ದೋಷಗಳನ್ನು ಟೀಕಿಸುವಾತ ಪರೋಕ್ಷವಾಗಿ ತಾನು ಸ್ವಲ್ಪ ಮೇಲ್ಮಟ್ಟದಲ್ಲಿದ್ದೇನೆ. ತಾನು ಕಡಿಮೆ ಬುದ್ದಿವಂತನಲ್ಲ ಎಂಬುದು ಪ್ರದಶರ್ಿಸಲು ಹೊರಡುತ್ತಾನೆ. ತಮಗಿಂತ ಹೆಚ್ಚು ವಿದ್ಯಾವಂತರಾದವರನ್ನು, ಹೆಚ್ಚು ಯಶಸ್ವಿಯಾದವರನ್ನು, ಟೀಕಿಸುವಾಗ ಅವರಲ್ಲಿರುವ ಏನಾದರೊಂದು ಹುಳುಕು ಕಂಡು ಹಿಡಿಯುವಾಗ ಕೆಲವರಿಗೆ ಒಂದು ರೀತಿಯ ಅನಾಗರಿಕ ಆನಂದವುಂಟಾಗುತ್ತದೆ. ಹಾಗಾಗಿ ಅವರು ಆ ಒಂದು ಕಾರ್ಯಪ್ರವೃತ್ತಿಯಲ್ಲಿ ತೊಡಗಿರುತ್ತಾರೆಂದು ತಿಳಿಯಬೇಕು.
ನಮ್ಮ ಸಮಾಜದಲ್ಲಿರುವ ನಿತ್ಯನಿಷ್ಠರು, ಸಜ್ಜನರು, ಪರೋಪಕಾರಿಗಳೂ ಕೆಟ್ಟಮಾತುಗಳನ್ನು ನಿಂದೆಯ ನುಡಿಯನ್ನು ಕೆಲವು ಬಾರಿ ಕೇಳಬೇಕಾಗುತ್ತದೆ.ಅಂದ ಮೇಲೆ ಇನ್ನು ಸಾಮಾನ್ಯರ ಪಾಡೇನು? ನಾವು ವಿಚಾರ ಮಾಡಬೇಕು. ಅಪಪ್ರಚಾರ ಮತ್ತು ನಿಂದೆಯ ನುಡಿಗಳನ್ನು ನುಂಗಿ ಕುಳಿತಿರಬೇಕೆಂದಲ್ಲ. ಎಲ್ಲಿಅದನ್ನು ವಿರೋಧಿಸುವುದು ಸರಿಯೋ ಪ್ರತಿಕ್ರಿಯೆಯನ್ನು ತೋರಿಸುವದು ಸಹಜ. ಅಲ್ಲಿ ನಾವು ಅದನ್ನು ಕರ್ತವ್ಯದೃಷ್ಠಿಯಿಂದ ಮಾಡಲೇಬೇಕು. ಸಮಾಜದಲ್ಲಿ ದಿನ ಬೆಳಗಾದರೆ ಒಂದಲ್ಲ ಒಂದು ರೀತಿಯ ಅಸಂಬದ್ಧ ಮಾತನ್ನು ಕೇಳಬೇಕಾಗುತ್ತದೆ. ಇದರಿಂದ ವಿಚಲಿತನಾಗುವದಾಗಲಿ ಎಲ್ಲರ ಬಾಯಿ ಮುಚ್ಚಿಸಲು ಪ್ರಯತ್ನಿಸುವುದು ಹುಚ್ಚುತನ ಹಾಗೂ ವ್ಯರ್ಥ ಪ್ರಯತ್ನವಾಗುತ್ತದೆ. ಆದರೆ ನಮ್ಮ ಸತ್ಯ, ನಿಷ್ಠೇ ಪ್ರಾಮಾಣಿಕತೆ ಕರ್ತವ್ಯ ನಿಂದಕರ ಬಾಯಿಯನ್ನು ತನ್ನಿಂದ ತಾನೇ ಮುಚ್ಚುವಂತೆ ಮಾಡುತ್ತದೆ. ಇನ್ನೊಂದು ದೃಷ್ಠಿಯಿಂದ ನಿಂದಕರು ಇರಬೇಕು ಏಕೆಂದರೆ ನಮ್ಮ ದೋಷಗಳನ್ನು ಎತ್ತಿ ತೋರಿಸಿ ನಮ್ಮನ್ನುತಿದ್ದುವ ಶಿಕ್ಷಕರು ಅವರಾಗುತ್ತಾರೆ. ಈ ಅರಿವು ನಮ್ಮಲ್ಲಿ ಬರಬೇಕಾದರೆ ನಾವು ತಾಳ್ಮೆಯಿಂದ ಇರಬೇಕಾಗುತ್ತದೆ. ತಾಳ್ಮೆಯನ್ನು ನಾವು ಬೆಳೆಸಿಕೊಳ್ಳಬೇಕು ಸದಾಜಾಗರುಕರೂ ಆಗಿರಬೇಕಾಗುತ್ತದೆ. ಉದ್ವೇಗದ ಹೊತ್ತಿನಲ್ಲಿ ಇತರರನ್ನು ನೋಯಿಸುವ ಒಂದು ಬಿರುನುಡಿ ನಮ್ಮಿಂದ ಹೊರ ಹೊಮ್ಮಬಹುದು. ಅದು ಇತರರ ಮನಸ್ಸು ನೋಯಿಸುತ್ತದೆ. ಅವರಲ್ಲಿ ನಮ್ಮ ಬಗ್ಗೆ ದ್ವೇಷದ ಭಾವನೆ ಹುಟ್ಟು ಹಾಕುತ್ತದೆ. ಇಂತಹ ಅನರ್ಥಗಳು ಸಂಭವಿಸದಂತೆ ನಾವು ಇರಬೇಕಾದರೆ ಹಾಗೂ ಪರಿತಾಪ ಪಶ್ಚಾತಾಪ ಪಡದೆ ಇರಬೇಕಾದರೆ ತಾಳ್ಮೆಯನ್ನು ನಾವು ಅಭ್ಯಾಸಿಸಬೇಕು. ಆದ್ದರಿಂದಲೆ ಹಿರಿಯರು ಹೇಳುತ್ತಾರೆ "ತಾಳಿದವನು ಬಾಳಿಯಾನು, ತಾಳದವನು ಹಾಳಾದನು".
ಹೇಳುವವರು ಬೇಕಾದಷ್ಟು ಹೇಳಲಿ ಬೇಕಾದಷ್ಟು ಟೀಕೆ ಮಾಡಲಿ ಅವು ಯಥಾರ್ಥವಲ್ಲವೆಂದು ನಮಗೆ ಖಚಿತವಾದರೆ ಅದರ ಕಡೆಗೆ ಗಮನ ನೀಡದೆ ಅಂದರ ಅಂತಹ ಮಾತುಗಳಿಗೆ ಕಿವುಡರಾಗಿ ವತರ್ಿಸಿ ನಮ್ಮ ಸತ್ಯ ಪ್ರಾಮಾಣಿಕವಾದ ಕೆಲಸ ಬಿಡದೆ ನಮ್ಮ ಪ್ರಗತಿಯನ್ನು ನಾವು ಸಾಧಿಸಬೇಕಾಗುತ್ತದೆ. ಆಗ ಎಲ್ಲ ಟೀಕೆಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆೆ. ಸುಂದರ ಬದುಕು ನಮ್ಮದಾಗುತ್ತದೆ.
ಶಿವಪ್ಪಗೌಡ ಬಿರಾದಾರ
ವಿಜಯಪುರ
- ಮೊ. 990036406