ಶೈಕ್ಷಣಿಕ ಹಾಗೂ ಕಾನೂನು ಅರಿವು ಮೂಡಿಸಿಕೊಳ್ಳಿ: ನ್ಯಾ. ಅನುಪಮ
ಹಗರಿಬೊಮ್ಮನಹಳ್ಳಿ 31: ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ ಪ್ರಥಮವಾಗಿ ಶೈಕ್ಷಣಿಕ ಹಾಗೂ ಕಾನೂನು ಅರಿವು ಮೂಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ.ಡಿ ಅವರು ಕರೆ ನೀಡಿದರು.
ತಾಲೂಕಿನ ಬನ್ನಿಕಲ್ಲು ಗ್ರಾಮದ ಆಂಜನೇಯ ದೇವಸ್ಥಾನದ ಅವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಗ್ರಾಮ ಬನ್ನಿಕಲ್ಲು ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 75ನೇ ಆಜಾದಿಕಾ ಅಮೃತ್ ಮಹೋತ್ಸವ ಆಚರಣೆ, ಕಾನೂನು ಅರಿವು ನೆರೆವು, ಪ್ಯಾನ್ ಇಂಡಿಯಾ ಜಾಗೃತಿ ಮತ್ತು ವ್ಯಾಪ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ, ಶೈಕ್ಷಣಿಕವಾಗಿ ಸಬಲರಾಗುವಂತೆ ಕರೆ ನೀಡಿದರು, ಕಾನೂನು ಎಲ್ಲರಿಗೂ ಒಂದೇ ಅಗಿರುತ್ತದೆ ಇಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವವಿರುದಿಲ್ಲ ಪ್ರತಿಯೊಬ್ಬರೂ ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು ಇದರಿಂದ ಅನ್ಯಯಕ್ಕೊಳಗಾದ ಪ್ರತಿಯೊಬ್ಬರಿಗೂ ನ್ಯಾಯ ದೊರೆಯುತ್ತದೆ ಕಾನೂನಿನ ಅರಿವಿನಿಂದ ಉತ್ತಮ ಸಮಾಜದ ಜೊತೆ ಉತ್ತಮ ನಾಗರೀಕರಾಗಬಹುದು, ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶಿಕ್ಷಣ ಸೇರಿದಂತೆ ಕಾನೂನು ಧ್ವನಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಹೊಳಗುಂದಿ ಹುಲುಗಪ್ಪ ವಹಿಸಿದ್ದರು , ವಕೀಲರ ಸಂಘದ ತಾಲೂಕಾಧ್ಯಕ್ಷ ಬಿ.ಬಸಪ್ಪ, ಉಪಾಧ್ಯಕ್ಷ ವೇಂಕಟೇಶ್ ನಾಯ್ಕ್, ಕಾರ್ಯದರ್ಶಿ ನರೇಂದ್ರ ಬಾಬು, ಜಂಟಿ ಕಾರ್ಯದರ್ಶಿ ಎಲ್.ಎಸ್.ಸುಭಾಶ್ ನಾಯ್ಕ್, ಖಜಾಂಚಿ ಹೆಚ್.ಸಿ.ಯಾಸ್ಮೀನ್,ಸಂಪನ್ಮೂಲ ವ್ಯೆಕ್ತಿ ಬಿ.ವಿ.ಶಿವಯೋಗಿ, ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ ಶ್ರೀಕಾಂತ್, ಗ್ರಾ.ಪಂ ಸದಸ್ಯರು, ಆರಕ್ಷಕ ಸಿಬ್ಬಂದಿ,ಅಂಗನವಾಡಿ ಶಿಕ್ಷಕಿಯರು,ಆಶಾ ಕಾರ್ಯಕರ್ತೆಯರು, ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.