ತಾಳಿಕೋಟಿ

ಬಾವೂರ ಗ್ರಾಮ ಪಂಚಾಯತ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ : ಮೇಟಿ ಅಧ್ಯಕ್ಷೆ-ಬಡಿಗೇರ ಉಪಾಧ್ಯಕ್ಷೆಯಾಗಿ ಆಯ್ಕೆ.

ಬಾವೂರ ಗ್ರಾಮ ಪಂಚಾಯತ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ : ಮೇಟಿ ಅಧ್ಯಕ್ಷೆ-ಬಡಿಗೇರ ಉಪಾಧ್ಯಕ್ಷೆಯಾಗಿ ಆಯ್ಕೆ.

ತಾಳಿಕೋಟಿ: ಹಿಂದಿನ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರಾಜೀನಾಮೆಯಿಂದ ತೆರವಾದ ಬಾವೂರ ಗ್ರಾ. ಪಂ ನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯೆಲ್ಲಿ ಅಧ್ಯಕ್ಷೆಯಾಗಿ ಶಿವಬಾಯಿ ಗುರ​‍್ಪ ಮೇಟಿ, ಉಪಾಧ್ಯಕ್ಷೆಯಾಗಿ ರೇಣುಕಾ ದಂಡಪ್ಪ ಬಡಿಗೇರ ಅವಿರೋಧವಾಗಿ ಆಯ್ಕೆಯಾದರು. 

ಒಟ್ಟು 16 ಜನ ಸದಸ್ಯರನ್ನು ಹೊಂದಿರುವ ಬಾವೂರ ಗ್ರಾ ಪಂ ಚುನಾವಣೆಯೆಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾದ್ಯಕ್ಷ ಸ್ಥಾನ 2ಎ ಮಹಿಳೆ ಮಿಸಲಾತಿಗೆ ನಿಗದಿಪಡಿಸಲಾಗಿತ್ತು. 

ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಶಿವಬಾಯಿ ಗುರ​‍್ಪ ಮೇಟಿ, ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ದಂಡಪ್ಪ ಬಡಿಗೇರ ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಇದರಿಂದ ಚುನವಣಾಧಿಕಾರಿಗಳಾದ ಬಿ. ಆರ್‌. ಬಿರಾದಾರ ಅವರು ಅಧ್ಯಕ್ಷೆಯಾಗಿ ಮೇಟಿ ಹಾಗೂ ಉಪಾಧ್ಯಕ್ಷೆಯಾಗಿ ಬಡಿಗೇರ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಘೋಷಿಸಿದರು. ಚುನಾವಣೆಯೆಲ್ಲಿ ಸಹಾಯಕರಾಗಿ ಬಸನಗೌಡ ಚೌದ್ರಿ, ಪಿಡಿಓ ಶಂಕರ ತಳವಾರ, ಎಸ್‌.ಎಸ್‌. ದೊಡಮನಿ ಅವರು ಕಾರ್ಯನಿರ್ವಹಿಸಿದರು. 

ವಿಜಯೋತ್ಸವ : ಫಲಿತಾಂಶ ತಮ್ಮ ಪರ ಪ್ರಕಟವಾಗುತ್ತಿದ್ದಂತೆಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. 

ಈ ಸಮಯದಲ್ಲಿ ಗ್ರಾ ಪಂ ಸದಸ್ಯರಾದ ಸೋಮು ಕಾಮರೆಡ್ಡಿ, ಶೈನಜಾಬೇಗಂ ಕಮತಗಿ, ಚೆನ್ನಮ್ಮ ಹಿರೇಮಠ, ದೇವಮ್ಮ ಮಾದರ, ನಂದುಬಾಯಿ ಪವಾರ, ಬಾಬು ಭಜಂತ್ರಿ, ಬೊಮ್ಮಲಿಂಗಪ್ಪ ಬೈರವಾಡಗಿ, ಮರಲಿಂಗಪ್ಪ ಮೇಟಿ, ಮಲ್ಲನಗೌಡ ಬಿರಾದರ, ಮುತ್ತಣ್ಣ ಕುಂಬಾರ, ಲಕ್ಷ್ಮೀ ವಾಲಿಕಾರ, ಶಾರದಾ ಹಡಪದ, ಸಿದ್ದನಗೌಡ ಪಾಟೀಲ, ಹಿರಗಪ್ಪ ಭಜಂತ್ರಿ ಇದ್ದರು. 


ಸುದ್ದಿ ಓದಿ