ಬಳ್ಳಾರಿ

ಬೇಸಿಕ್ಸ್ ಆಫ್ ಮಷಿನ್ ಲರ್ನಿಂಗ್ ಯುಸಿಂಗ್ ಪೈತಾನ್ ಕಾರ್ಯಾಗಾರ

ಬೇಸಿಕ್ಸ್ ಆಫ್ ಮಷಿನ್ ಲರ್ನಿಂಗ್ ಯುಸಿಂಗ್ ಪೈತಾನ್ ಕಾರ್ಯಾಗಾರ

ಬಳ್ಳಾರಿ 30: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 30ರಂದು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರಿಂದ ಆರು ದಿನದ “ಬೇಸಿಕ್ಸ್ ಆಫ್ ಮಷಿನ್ ಲರ್ನಿಂಗ್ ಯುಸಿಂಗ್ ಪೈತಾನ್” ಕಾರ್ಯಗಾರದ  ಉದ್ಘಾಟನೆ ಸಮಾರಂಭವು ಜರುಗಿತು. 

ವಿ.ವೀ ಸಂಘದ ಉಪಾಧ್ಯಕ್ಷ ಹಾಗೂ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಲ್ಲಂ ಚನ್ನಪ್ಪ, ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಬಿವೃಧ್ದಿಗಾಗಿ ಈ ರೀತಿಯ ಕಾರ್ಯಗಾರಗಳು ಸಹಾಯಕವಾಗಿರುವುದರಿಂದÀ, ಸಂಸ್ಥೆಯು ಇಂತಹ ಕಾರ್ಯಕ್ರಮಗಳಿಗೆ ಸದಾ ಉತ್ತೇಜನ ನೀಡುತ್ತಾ ಸಾಗಿದೆ, ಆದ್ದರಿಂದ ವಿದ್ಯಾರ್ಥಿಗಳು ಕಾರ್ಯಗಾರದ ಸಂಪೂರ್ಣ ಸದುಪಯೋಗವನ್ನು ಪಡೆಯಬೇಕೆಂದಯ ತಿಳಿಸಿದರು. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ವಿಭಾಗವನ್ನು ಅಭಿನಂಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ, ಇಂದು ತಂತ್ರಜ್ಞಾನ ಪ್ರತಿಕ್ಷಣ ಮಾರ್ಪಾಡಾಗುತಿದ್ದು, ನವೀನ ತಂತ್ರಜ್ಞಾನದ ಮಾಹಿತಿಯನ್ನು ಪಡೆದು ತರಬೇತಿ ಹೊಂದುವುದು ಅತ್ಯಾವಶ್ಯಕವಾಗಿದೆ, ಈ ನಿಟ್ಟಿನಲ್ಲಿ ಇಂತಹ  ಕಾರ್ಯಗಾರಗಳು ನೆರವನ್ನು ನೀಡುತ್ತದೆ ಎಂದು ತಿಳಿಸಿದರು.

ಉಪಪ್ರಾಂಶುಪಾಲರು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ. ಸವಿತ ಸೊನೊಳಿ, ಮಾತನಾಡುತ್ತಾ ಎಲ್ಲಾ ವಿದ್ಯಾರ್ಥಿಗಳು ಸದರಿ ಕಾರ್ಯಗಾರದಲ್ಲಿ ನಿಷ್ಟೆಯಿಂದ ಪಾಲ್ಗೊಂಡು ನೂತನ ತಂತ್ರಜ್ಞಾನವನ್ನು ತಿಳಿದುಕೊಂಡರೆ, ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ ಮಾಡಲು ಸಹಾಯವಾಗುವುದಲ್ಲದೆ, ಕ್ಯಾಂಪಸ್ ಸಂದರ್ಶನಕ್ಕೂ ನೆರವಾಗುತ್ತದೆ ಎಂದು ಉತ್ತೇಜನ ನೀಡಿದರು.

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರವಿಶಂಕರ್ ಹೊಳ್ಳ ಮತ್ತು ಮಹೇಂದ್ರ ಬಿ ಎಮ್, ಅಸಿಸ್ಟೆಂಟ್ ಪ್ರೊಫೆಸರ್ಸ್, ಇಸಿಇ ವಿಭಾಗ, ಆರ್ ವಿ ಕಾಲೇಜ್ ಬೆಂಗಳೂರು. ಇವರು, ಈ 6 ದಿನದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಪೈತಾನ್ ಮೂಲಕ ಆಧುನಿಕ ಮಷಿನ್ ಲರ್ನಿಂಗ್ ಕಲಿಕೆ ಹಾಗೂ ಅದರ ಉಪಯೋಗಳ ಕುರಿತು ಸಮಗ್ರ ತರಬೇತಿಯನ್ನು ಹೊಂದುವರು ಎಂದು ತಿಳಿಸಿದರು. ನಿಜಾನಂದ ರೆಡ್ಡಿ, ಕಾರ್ಯದರ್ಶಿ ಹಾಗೂ  ಸುರೇಶ್ ಡಿ ಎಸ್, ಅಧ್ಯಕ್ಷರು, ಐ.ಎಸ್.ಟಿ.ಇ ಕರ್ನಾಟಕ ವಿಭಾಗ ಇವರ ಪ್ರೇರಣೆ ಹಾಗೂ ಸಹಯೋಗದೊಂದಿಗೆ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಈ ಸಮಾರಂಭಕ್ಕೆ ವಿ.ವೀ ಸಂಘದ ಅಧ್ಯಕ್ಷ ಹೆಚ್ .ಎಮ್ ಗುರುಸಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ ಬಸವರಾಜ, ಸಹ ಕಾರ್ಯದರ್ಶಿ ಜೆ. ಶಾಂತವೀರÀನಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು.  ವಾಣಿ .ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ, ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಗಿರಿಜವಾಣಿ ಸ್ವಾಗತಿಸಿದರು,  ಶ್ರೀಧರ ಬೀಳಗಿ ಕಾರ್ಯಕ್ರಮವನ್ನು ವಂದಿಸಿದರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಮತ್ತು ಇನ್ನಿತರರು ಭಾಗವಹಿಸಿದ್ದರು.

ಸುದ್ದಿ ಓದಿ