ಅದ್ದೂರಿಯಾಗಿ ಬಸವೇಶ್ವರರ ತೊಟ್ಟಿಲು ಶಾಸ್ತ್ರ
ಮುಂಡಗೋಡ 13: ತಾಲೂಕಿನ ಪಾಳಾ ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ಮಹಿಳೆಯರು ಬುಧವಾರ ಶ್ರೀಬಸವೇಶ್ವರರ ತೊಟ್ಟಿಲು ತೂಗುವ ಶಾಸ್ತ್ರ ನೆರವೇರಿಸಿದರು.
ಶ್ರೀಬಸವ ಸಮಿತಿ ಅಧ್ಯಕ್ಷ ಮಲ್ಲನಗೌಡ ಬಿದ್ರಕೊಪ್ಪ, ಕಾರ್ಯದರ್ಶಿ ಪ್ರಕಾಶ ಕೋಟಿ, ರಾಜೇಂದ್ರ ಚಿಕ್ಕಮಠ, ಬಸವರಾಜ ಪೂಜಾರ, ಪ್ರಹ್ಲಾದ ಬಡಿಗೇರ, ಮಾಲತೇಶ ಪೂಜಾರ ಹಾಗೂ ಸದಸ್ಯರುಗಳ ಮುಂದಾಳತ್ವದಲ್ಲಿ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಬಸವೇಶ್ವರರ ತೊಟ್ಟಿಲು ತೂಗುವ ಶಾಸ್ತ್ರ ಬಹಳ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಪ್ರಯುಕ್ತ ಗದುಗಿನ ಕುಮಾರಸ್ವಾಮಿ ಮತ್ತು ಪಾಳಾ ಗ್ರಾಮದ ಪರಮೇಶ್ವರ ಹಿರೇಮಠ ಇವರಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳಿಗೆ ಅನ್ನಸಂತರೆ್ಣ ಕಾರ್ಯಕ್ರಮ ಏರಿ್ಡಸಲಾಗಿತ್ತು. ಪಾಳಾ ಹಾಗೂ ಸುತ್ತ-ಮುತ್ತಲಿನ ಸಹಸ್ರಾರು ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರಿಂದ ಬಸವ ಸಮಿತಿಯವರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.