ಬಳ್ಳಾರಿ

ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸವರಾಜ ನೇಮಕ

ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸವರಾಜ ನೇಮಕ

ಲೋಕದರ್ಶನ ವರದಿ

ಬಳ್ಳಾರಿ 09: ಬಳ್ಳಾರಿ ಜಿಲ್ಲಾ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷರನ್ನಾಗಿ ಸಾಹಿತಿ, ಜಾನಪದ ಕಲಾವಿದ ಮತ್ತು ಇತಿಹಾಸ ಸಂಶೋದಕ ಟಿ.ಹೆಚ್.ಎಂ. ಬಸವರಾಜರವರನ್ನು ನೇಮಿಸಿದ್ದಾರೆ. 

ಟಿ.ಹೆಚ್.ಎಂ. ಬಸವರಾಜ ರವರು ಕಳೆದ ಹಲವಾರು ವರ್ಷಗಳಿಂದ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತೀ ವರ್ಷ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಇವರ ಇತ್ತೀಚಿನ ಸಂಶೋಧನಾ ಪ್ರಬಂಧ ವಚನ ಭಾಷಾಂತರ ಇತಿಹಾಸ ಎಲ್ಲರ ಮೆಚ್ಚುಗೆಯ ಪಾತ್ರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷರಾಗಿ, ರಾಜ್ಯ ಸಂಚಾಲಕರಾಗಿ, ಕರ್ನಾಟಕ ಜಾನಪದ ಪರಿಷತ್ನ ಅಖಂಡ ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಬಳ್ಳಾರಿ ನಗರದ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವುದಕ್ಕೆ ಅನೇಕ ಸಂಘ-ಸಂಸ್ಥೆಗಳು ಹಿತೈಷಿಗಳು ಇವರನ್ನು ಹಾರ್ದಿಕವಾಗಿ ಅಭಿನಂದಿಸಿರುತ್ತಾರೆ 

ಸುದ್ದಿ ಓದಿ