ಶಿಗ್ಗಾವ್

ಬಸವರಾಜ ಗೊಬ್ಬಿ ಕಾರ್ಯ ಶ್ಲಾಘನೀಯ: ಡಾ. ಪದ್ಮಶ್ರೀ ಮಂಜಮ್ಮ ಜೋಗತಿ

ಬಸವರಾಜ ಗೊಬ್ಬಿ ಕಾರ್ಯ ಶ್ಲಾಘನೀಯ: ಡಾ. ಪದ್ಮಶ್ರೀ ಮಂಜಮ್ಮ ಜೋಗತಿ

ಲೋಕದರ್ಶನ ವರದಿ 

ಶಿಗ್ಗಾವಿ 11:  ಆಯಾ ಪ್ರಾಂತಗಳಲ್ಲಿ ತನ್ನದೆಯಾದ ಕಲೆ ಹೊಂದಿದ್ದು ಅದು ಆ ಪ್ರಾಂತಗಳಿಗೆ ಅಷ್ಟೆ ಸಿಮಿತವಾಗಿರಬಾರದು ಆ ಪ್ರಾಂತದ ಕಲೆ ಇನೊಂದು ಪ್ರದೇಶದಲ್ಲಿ ಕಲಿಯುವಂತವಾಗಬೇಕು ಎಂಬ ಆಲೊಚನೆ ಮಾಡಿದ ನಿಮ್ಮೂರಿನ ಮಗ ಆಕಾಡಮಿ ಸದಸ್ಯ ಬಸವರಾಜಗೊಬ್ಬಿ ಆಲೋಚನೆ ಮಾಡಿ ಈ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಮಾತೋಶ್ರೀ ಡಾ. ಪದ್ಮಶ್ರೀ ಮಂಜಮ್ಮ ಜೋಗತಿ ಹೇಳಿದರು. 

ತಾಲೂಕಿನ ಮುಗಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಆಕಾಡಮಿ ಅಧ್ಯಕ್ಷೆ ಸಮ್ಮಾಳ ಬಾರಿಸುವದರ  ಮುಖಾಂತರ ಚಾಲನೆ ನೀಡಿ  ಮಾತನಾಡಿದ ಅವರು ಗ್ರಾಮಿಣ ಪ್ರದೇಶದ ಹಿಂದುಳಿದ ಜನಾಂಗಕ್ಕೆ ಈ ತರಬೇತಿಯು ವಿಶೇಷವಾದದು ಇದರ ಪ್ರಯೋಜನೆ ಪಡೆಯಬೇಕು ಅಲ್ಲದೇ ಶಿಬಿರಾರ್ಥಿಗಳು ಸಿಕ್ಕಂತ ಅವದಿಯಲ್ಲಿ ನಿಷ್ಠೆಯಿಂದಕಲಿತು ಅಳಿದು ಹೊಗುವ ಜಾನಪದ ಉಳಸಿ ಅದರಜೊತೆಗೆ ನಿವು ಸ್ವಾವಲಂಬಿಯಾಗಿ ಬದುಕಬಹುದುಎಂದರು. 

ಪ್ರಾಸ್ತಾವಿಕವಾಗಿ ಕರ್ನಾಟಕಜಾನ ಪದ ಆಕಾಡಮಿ ಸದ್ಯಸ ಸಂಚಾಲಕ ಬಸವರಾಜ ಗೊಬ್ಬಿ ಮಾತನಾಡಿ ಕಲೆಗಳು ನಶಿಸಿಸುತ್ತಿದ್ದು ಸದ್ಯಯುವಕಲಾವಿದರು ಕಲೆಗೆ ಗೌರವ ನೀಡಿ ಕಲೆಯನ್ನು ಕರಗತ ಮಾಡಿಕೊಂಡು ನಿಮ್ಮ ಜೀವನದ ಜೊತೆಗೆ ಜಾನಪದ ಕಲೆಯನ್ನು ಸಹಿತ ಮುಖ್ಯವಾಹಿನಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಿವಿ ಮಾತು ಹೇಳಿದರು. 

ಈ ಸಂದರ್ಭದಲ್ಲಿ ನಿಂಗಪ್ಪ ದುಂಡಪ್ಪನವರ,  ಮಾದೇವಪ್ಪ ತಳವಾರ,  ಶಿವಾನಂದ ಬಿಸೆಟ್ಟಿ, ಶಂಕರ​‍್ಪಗೊಬ್ಬಿ, ಗುರನಾಥ ಹುಬ್ಬಳ್ಳಿ ಸೇರಿದಂತೆಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಕಲಾಸಕ್ತರು ಮತ್ತು ಶಿಬಿರಾರ್ಥಿಗಳು ಅಲ್ಲದೇ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಆಕಾಡಮಿಯ ಸಿಬ್ಬಂದಿ ಪ್ರಕಾಸ ಎಚ್ ವಂದಿಸಿದರು. 


ಸುದ್ದಿ ಓದಿ