ಶಿಗ್ಗಾವ್

ಬಸವರಾಜ ಹೊರಟ್ಟಿಯವರಿಗೆ ಮಂತ್ರಿ ಸ್ಥಾನ ನೀಡಬೇಕು: ಮಾಳಗಿ

ಬಸವರಾಜ ಹೊರಟ್ಟಿಯವರಿಗೆ ಮಂತ್ರಿ ಸ್ಥಾನ ನೀಡಬೇಕು: ಮಾಳಗಿ

ಶಿಗ್ಗಾವಿ 18: ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ನೂತನ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿಯವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 7 ಬಾರಿ ವಿಧಾನ ಪರಿಷತ್ತಿಗೆ ಗೆದ್ದು ಬಂದ ಬಸವರಾಜ ಹೊರಟ್ಟಿ ಅವರನ್ನು 8ನೇ ಭಾರಿಗೆ ಭಾರತೀಯ ಜನತಾ ಪಾರ್ಟಿ ಗೌರವದಿಂದ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿ 8ನೇ ಭಾರಿ ಗೆಲ್ಲಲು ಅವಕಾಶ ಮಾಡಿಕೊಟ್ಟ ಸಿ ಎಂ ಬೊಮ್ಮಾಯಿಯವರಿಗೂ, ಕೇಂದ್ರ ಸಚಿವ ಜೋಶಿಯವರಿಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ, ಹಾಲಿ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ,   

ಬಸವರಾಜ ಹೊರಟ್ಟಿಯವರು ಸದನದಲ್ಲಿ 7 ಬಾರಿ ಗೆದ್ದು 42 ವರ್ಷ ಸತತವಾಗಿ  ಸದನದಲ್ಲಿ ಸದಸ್ಯರಾಗಿ ವಿವಿಧ ಸಮಿತಿಗಳ ಅಧ್ಯಕ್ಷರಾಗಿ ಕಾನೂನು,  ಪಂಚಾಯತ್ ರಾಜ,  ಶಿಕ್ಷಣ ಸಚಿವರಾಗಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಕಾರ್ಯ ನಿರ್ವಹಿಸಿದ ಅನುಭವ ರಾಜಕಾರಣಿ, ಬಸವತತ್ವದ ಪರಿಪಾಲಕರಾಗಿ ನಾಡಿನ ಸೇವೆ ಸಲ್ಲಿಸಲು ಮತ್ತೊಮ್ಮೆ ಪುನರ್ ಆಯ್ಕೆಯಾಗಿ ವಿಶ್ವ ದಾಖಲೆ ನಿರ್ಮಿಸಿದ ಹಿರಿಯರು, ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಮಂತ್ರಿ ಮಂಡಳಕ್ಕೆ ಸೇರಿ​‍್ಡಸಿ ಶಿಕ್ಷಣ ಖಾತೆಯನ್ನು ನೀಡಬೇಕು ಎಂದು ವಿನಂತಿಸಿಕೊಳ್ಳುತ್ತೆವೆ ಎಂದರು. 


ಸುದ್ದಿ ಓದಿ