ಗ್ರಾಪಂ ಅಧ್ಯಕ್ಷರಾಗಿ ಬಸವಣ್ಣೆಯ್ಯ ವೀರಭದ್ರಯ್ಯ ಹಿರೇಮಠ ಅವಿರೋಧ ಆಯ್ಕೆ
ಶಿಗ್ಗಾವಿ 03: ತಾಲೂಕಿನ ದುಂಡಶಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಬಸವಣ್ಣೆಯ್ಯ ವೀರಭದ್ರಯ್ಯ ಹಿರೇಮಠ ಅವಿರೋಧ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಹಾಗೂ ತಾ.ಪಂ.ಇ.ಓ ಪ್ರಶಾಂತ ತುರಕಾಣಿ ಘೋಷಣೆಯನ್ನು ಮಾಡಿದರು.
ದುಂಡಶಿ ಗ್ರಾಮ ಪಂಚಾಯತಿಗೆ ಅದ್ಯಕ್ಷ ಈರಣ್ಣಾ ಸಿ ಮಹಾಜನಶೆಟ್ಟರ ಒಳ ಒಪ್ಪಂದದ ಪ್ರಕಾರ ರಾಜೀನಾಮೆಯನ್ನು ಸಲ್ಲಿಸಿದ ತೆರವಾದ ಸ್ಥಾನಕ್ಕೆ ಅಧ್ಯಕ್ಷರ ಚುನಾವಣೆ ಜರುಗಿದ್ದು ಒಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಈರಣ್ಣಾ ಶಿ ಮಹಾಜನಶೆಟ್ಟರ,ಉಪಾಧ್ಯಕ್ಷೆ ಸವಿತಾ ಮಂಜುನಾಥ ತಳವಾರ, ಸದಸ್ಯರಾದ ದಾಮ್ಲಪ್ಪ ದಾನಪ್ಪ ರಾಠೋಡ, ಮಮ್ಮದರಫೀಕ್ ಹಜರೇಸಾಬ ಶಿರಗೋಡ, ರೇಣುಕಾ ಬಸವಣ್ಣೆಪ್ಪ ಮುಳಗುಂದ, ಖುತೇಜಾಬಿ ಖಾದರಸಾಬ ಜಮಾದಾರ, ರಾಮಪ್ಪ ಭೀಮಪ್ಪ ಹರಕುಣ್ಣಿ, ವಿದ್ಯಾಶ್ರೀ ಬಾಹುಬಲಿ ಅಕ್ಕಿ, ಹಸೀನಾಬೇಗಂ ಉ ಹೊಸೂರ, ನೀಲವ್ವ ಶೇಖಪ್ಪ ಹರಿಜನ ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಇದ್ದರು.
ಸಹಾಯಕರಾಗಿ ಎಸ್.ಬಿ.ತೆಗ್ಗಹಳ್ಳಿ, ಪಿಡಿಓ ಪೂರ್ಣಿಮಾ ವಿ ಸೇರಿದಂತೆ ಹಲವರು ಇದ್ದರು. ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಮಾತನಾಡಿ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮದ ಸರ್ವೋತೋಮುಖ ಅಭಿವೃದ್ದಿಗೆ ಎಲ್ಲಾ ಸದಸ್ಯರೊಂದಿಗೆ ಸೇರಿ ಸಮಗ್ರ ಅಭಿವೃದ್ದಿಯನ್ನು ಮಾಡುವುದಾಗಿ ಹೇಳಿದರು. ತಡಸ ಪಿಎಸ್ಐ ಸಂಗನಗೌಡ ಪೊಲೀಸ್ಗೌಡ್ರ ಸೂಕ್ತ ಬಂದೂ ಬಸ್ತಿಯನ್ನು ಮಾಡಿದರು.