ಮುದ್ದೆಬಿಹಾಲ್

ಬಸವಣ್ಣನವರು ಈ ನೆಲದಲ್ಲಿ ಉದಯವಾದದ್ದು ಈ ನಾಡಿನ ಪುಣ್ಯ: ಶಾಸಕ ನಾಡಗೌಡ

ಬಸವಣ್ಣನವರು ಈ ನೆಲದಲ್ಲಿ ಉದಯವಾದದ್ದು ಈ ನಾಡಿನ ಪುಣ್ಯ: ಶಾಸಕ ನಾಡಗೌಡ

ಮುದ್ದೇಬಿಹಾಳ 11: ದುಡಿಮೆಯಲ್ಲಿ ದೇವರನ್ನು ಕಾಣುವ 'ಕಾಯಕವೇ ಕೈಲಾಸ' ಎಂಬ ಘನತತ್ತ್ವ, ಸ್ವಾಸ್ಥ್ಯ  ಹಾಗೂ ಸಮಾನತೆಯ ಸಮಾಜ ನಿರ್ಮಾಣದ ಆಧಾರಸ್ತಂಭ ಎಂಬುದನ್ನು ಸಾರಿದ 'ಕಾಯಕ ಮಹತ್ವ ನಿರೂಪಕರಾಗಿಯೂ ಬಸವಣ್ಣನವರು ಕಾಣಿಸಿಕೊಳ್ಳುತ್ತಾರೆ. ಬಸವಣ್ಣನವರಂಥ ಒಬ್ಬ ಮಹಾನ್ ಕ್ರಾಂತಿಕಾರಿ ಈ ನೆಲದಲ್ಲಿ ಉದಯವಾದದ್ದು ಈ ನಾಡಿನ ಪುಣ್ಮವಿಶೇಷ. ಜನಪರ ಹೋರಾಟಗಾರರಾಗಿ ನಿಂತ ಬಸವಣ್ಣನವರ  ಸಾಮಾಜಿಕ,  ಧರ್ಮ ಉಪದೇಶಗಳು, ಚಿಂತನೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ  ಎಂದು ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದ ಆವರಣದಲ್ಲಿನ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ  ಭಾನುವಾರ ಸಂಜೆ ನಡೆದ  ಉಪ್ಪಿನ ಬೆಟಗೇರಿಯ ಮೂರು ಸಾವಿರ ವೀರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳ ಇವರಿಂದ ಭೀಮಕವಿ ಕೃತ ಬಸವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಸಸಿಗೆ ನೀರು ಏರೆಯುವ ಮೂಲಕ ಉದಘಾಟಿಸಿ ಅವರು ಮಾತನಾಡಿದರು. 

ಅಮೇರಿಕಾ, ಜಪಾನ, ಬ್ರೀಟನ್ ಸೇರಿದಂತೆ ಅನೇಕ ದೇಶಗಳು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಒಪ್ಪಿ ಅಪ್ಪಿ ಗೌರವಿಸುತ್ತಿವೆ ಎಂದರೆ ಎಷ್ಟೋಂದು ಪರಿಣಾಮಕಾರಿಯಾದ ಕ್ರಾಂತಿಕಾರಿ ಹೋರಾಟ ಅವರದಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ.  

ಬಸವಣ್ಣನವರ ಆಸ್ತಿಕರು ಹೌದು ವಿಜ್ಞಾನವೂ ಹೌದು  ಆದರೆ ಸಾರಿರುವ ಸಂದೇಶವೂ ಇಡಿ ಮಾನವ ಕುಲಕ್ಕೂ ಕಲ್ಯಾಣವನ್ನು ಬಯಸಿದ್ದಾಗಿದೆ. ಇಂದು  ವಿಜ್ಞಾನ ವೇಗವಾಗಿ ಮುಂದೆ ಸಾಗುತ್ತಿದೆ ಏನೇಲ್ಲ ಸಾಧನೆಗಳನ್ನು ಸಾಧಿಸಿ ಗೆಲ್ಲುತ್ತಿದ್ದಾರೆ ಆದರೆ ನಿತ್ಯ ಮನುಷ್ಯ ದ್ವೇಶ ಅಸೂಯೆ ಯಂತಹ ವೈಶಮ್ಯಗಳ ತಾಣವಾಗಿ ಬೆಳೆಯುತ್ತಿರುವ ಹಿನ್ನೇಲೆಯಲ್ಲಿ ಇಂದು ದಿನದಿನಕ್ಕೆ ಮಾನವನ ಮೌಲ್ಯ ಕ್ರಮೇಣ ಕಡಿಮೆಯಾಗುತ್ತದೆ,  ಕೆಲ ಮನೋರಂಜನಾ ಟಿವಿಗಳಲ್ಲಿ ಬಿತ್ತರಗೊಳ್ಳು ಕೆಲವು ದಾರಾವಾಹಿಗಳು ಕಾರ್ಯಕ್ರಮಗಳು ನಮ್ಮ ದೇಶದ ಸಂಸ್ಕಾರ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಬೇಕಿರುವುದು ಅತ್ಯಗತ್ಯವಾಗಿದೆ. 

 ಸರಕಾರಗಳು  ಎಲ್ಲ ಧರ್ಮದವರೂ ಕೂಡಿಕೊಂಡು ಶರಣರ, ಸತ್ಪರುಷರ, ಸಂತರ,ಸ್ವಾತಂತ್ರ್ಯ ಹೋರಾಟಗಾರರ ಜಯಂತಿಗಳನ್ನು ಆಚರಣೆ ಮಾಡುವಂತಾಗಬೇಕು ಅಂದಾಗ ಮಾತ್ರ ಬಸವಣ್ಣನವರು ಸಂದೇಶವನ್ನು ನಾವು ಗೌರವಿಸಿದಂತಾಗುತ್ತದೆ ಇದೇ ಕಾರಣಕ್ಕಾಗಿಯೇ ಸರಕಾರ ಜಯಂತಿ ಆಚರಣೆ ತರಲಾಗಿದೆ. ಈ ಕಾರಣದಿಂದಲೇ ಪಟ್ಟಣದ ಎಲ್ಲ ಧರ್ಮದ ಹಿರಿಯರು ಮುಖಂಡರು  ಒಂದಾಗಿ ಉಪ್ಪಿನ ಬೆಟಗೇರಿಯ ಮೂರು ಸಾವಿರ ವೀರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳಿಂದ ಬಸವ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಅವರಿಗೆ ನಾನು ಧನ್ಯವಾದಗಳನ್ನು ಸಮರ​‍್ಿಸುತ್ತೇನೆ. ಇಂತಹ ಶ್ರೀಗಳ  ಪುರಾಣ ಪ್ರವಚ ಕೇಳಿ  ಪುನಿತರಾಗಿ ಬದಲಾದರೆ ಸಾಕು ಅವರ ಬದುಕು  ಸಾರ್ಥಕವಾಗುತ್ತದೆ.ಜತೆಗೆ ಇಂದಿನ ತಂತ್ರಜ್ಞಾನದ ಯುಗದ ಮಕ್ಕಳಿಗೆ ನಮ್ಮ ದೇಶದ ನಮ್ಮ ಸಂಸ್ಕಾರ, ಸಂಪ್ರದಾಯದ ಕುರಿತು ಮಾತ್ರವಲ್ಲದೇ ನಿಮ್ಮ ಕಾಯಕದಲ್ಲಿ ಕೈಲಾಸವನ್ನು ಕಾಣಬೇಕು ಎಂಬುದನ್ನು ನಮ್ಮ ಮಕ್ಕಳಿಗೆ ತಿಳಿಹೇಳುವ ಮೂಲಕ ಜಾಗೃತಿ ಮೂಡಿಸಬೇಕಿದೆ.ಅಂದಾಗ ಮಾತ್ರ ಉತ್ತಮ ಮನುಷ್ಯನಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದರು. 

ಈ ವೇಳೆ  ಕಾಂಗ್ರೇಸ್ ಮುಖಂಡ ಹಾಗೂ ಅಸ್ಕಿ ಪೌಂಡೇಶನ್ ಮುಖ್ಯಸ್ಥ ಸಿ ಬಿ ಅಸ್ಕಿ ಮಾತನಾಡಿ ಇಂದು ಮನುಷ್ಯ ಹಣ, ಆಸ್ತಿ ಅಂತಸ್ತು ಗಳಿಸುವ ಪ್ರಯತ್ನದಲ್ಲಿ ಸಂಸಾರದಲ್ಲಿ ವ್ಯವಹಾರದಲ್ಲಿ ಸಂಪೂರ್ಣ ತಲ್ಲಿನನಾಗಿ ತನ್ನನ್ನು ತಾನು ತೊಡಗಿಸಿಕೊಂಡು ಒತ್ತಡದ ಬದುಕು ನಡೆಸುತ್ತಿರುವ ಕಾಲಘಟ್ಟದಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಬದುಕಿಗೆ ಸಂಸ್ಕಾರ ನೀಡುವ ಪುರಾಣ ಪ್ರವಚನಗಳನ್ನು ಆಲಿಸಬೇಕು 

ಇದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ ಮಾತ್ರವಲ್ಲದೇ ನಸಿಸಿ ಹೊಗುತ್ತಿರುವ ನಮ್ಮ ಸಂಪ್ರದಾಯ, ಪರಂಪರೆ ಉಳಿಸಿ ಬೆಳಿಸಿದಂತಾಗುತ್ತದೆ ಎಂದರು.   

ಉಪ್ಪಿನ ಬೆಟಗೇರಿಯ ಮೂರು ಸಾವಿರ ವೀರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಕುಂಟೋಜಿ ಹಿರೇಮಠದ ಶ್ರೀ ಚನ್ನವೀರ ದೇವರು ದಿವ್ಯ ಸಾನಿಧ್ಯವಹಿಸಿದ್ದರು, ಅಮೀನಗಡದ ಶಂಕರರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.  ಗಣ್ಯರಾದ ಬಿ ಸಿ ಮೋಟಗಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಗಣ್ಯ ಉದ್ಯಮಿ ಶಿವಶಂಕರಗೌಡ ಹಿರೇಗೌಡರ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಮಾಜ ಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ)  ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ  ಸತೀಶ ಓಸ್ವಾಲ್, ಗಣ್ಯ ಉದ್ಯಮಿ ಶರಣು ಸಜ್ಜನ, ರಾಜು ಕರಡ್ಡಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ,ಕಾಮರಾಜ ಬಿರಾದಾರ,  ಸೇರಿದಂತೆ ಅನೇಕ ಗಣ್ಯರು, ಮುಖಂಡರು ಇದ್ದರು.  

ಖ್ಯಾತ ಕಿರುತೆರೆ ಹಾಸ್ಯಕಲಾವಿಧ ಶ್ರೀಶೈಲ ಹೂಗಾರ ನೀರೂಪಿಸಿದರು. ಸಾಹಿತಿ ಆರ್ ಜಿ ಕಿತ್ತೂರ ಸ್ವಾಗತಿಸಿದರು. 


ಸುದ್ದಿ ಓದಿ