ಮುದ್ದೆಬಿಹಾಲ್

ಬಸವ ಪುರಾಣ

ಬಸವ ಪುರಾಣ

ಲೋಕದ ಛೇಷ್ಠೆಗೆ ರವಿ ಬೀಜವಾದಂತೆ ಕರಣಂಗಳ ಛೇಷ್ಠೆಗೆ ಮನವೇ ಬೀಜ 

ಮುದ್ದೇಬಿಹಾಳ 16: ಭಕ್ತಿ ಇಲ್ಲದ ಧರ್ಮ ವ್ಯರ್ತನಾಗುವುದೆಂದು ಭತೃತ್ಯಯವಾ ಕಲಿಸಿ ಮುಕ್ತರೇನಿಸಿ  

ಲೋಕದ ಛೇಷ್ಠೆಗೆ ರವಿ ಬೀಜವಾದಂತೆ ಕರಣಂಗಳ ಛೇಷ್ಠೆಗೆ ಮನವೇ ಬೀಜ, ಎನಗುಳ್ಳದೊಂದು ಮನ ನಿಮ್ಮಲ್ಲಿ ಎಡೆವೆರೆದ ಬಳಿಕ ಯನಗೆ ಬವವುಂಟೆ ಚನ್ನಮಲ್ಲಿಕಾರ್ಜುನದೇವ ಎಂಬಂತೆ ಅಕ್ಕಮಹಾದೇವಿ ವಯಸ್ಸಿನಲ್ಲಿ ಬಹಳ ಚಿಕ್ಕವರಿದ್ದರೂ ಅನುಭಾವದಲ್ಲಿ ಬಹಳ ದೊಡ್ಡವಳಾಗಿ  ಹೆಸರಾಗಿ ನೆಲೆಯಾಗಿ ನಿಂತವಳು 900 ವರ್ಷಗಳ ಹಿಂದೇಯೇ ಆಗಾಧವಾದ ಜ್ಞಾನ ಸಂಪತ್ತು ಹೊಂದಿದ್ದಳು ಮಾತ್ರವಲ್ಲದೇ ತನ್ನ ವಚನಗಳ ಮೂಲಕ ಸಮಾನತೆ ಸಂದೇಶ ಸಾರಿದ ಏಕೈಕ ಮಹಿಳಾ ಶರಣೆ ಎಂದರೆ ತಪ್ಪಾಗಲಾರದು 

ನಾವು ಚನ್ನಾಗಿ ಇರಬೇಕೆಂದ್ರ ಮನಸ್ಸು ಶುದ್ಧವಾಗಿರಬೇಕು ಮನಸ್ಸು ವೇಗವಾಗಿ ಎಷ್ಟು ಓಡುತ್ತದೆಯೋ ಅಷ್ಟೆ ಚಂಚಲವಾಗಿದೆ ಇಂತಹ ಚಂಚಲ ಮನಸ್ಸನ್ನು ಗಟ್ಟಿಮಾಡಿ ಶುದ್ಧಮಾಡುವುದಕ್ಕೆ ಸಂಸ್ಕಾರ ನೀಡಬೇಕು ಆದ್ಯಾತ್ಮದಿಂದ ಮಾತ್ರ ಸಾಧ್ಯ.ಅಭ್ಯಾಸದ ಬಲ ವೈರಾಗ್ಯದ ಬಲದಿಂದ ಸಾಧ್ಯ ಅಂದಾಗ ಮಾತ್ರ ಸಂಸಾರಕ್ಕೆ ಅರ್ಥ ಬರುತ್ತದೆ.  ತಾಯಿ ಎನ್ನುವ ವಸ್ತು ಬೇರೊಂದಿಲ್ಲ ಅದು ದೊಡ್ಡದು ಅದಕ್ಕಾಗಿ ತಾಯಿಯ ಸೇವೆ ಮಾಡಬೇಕು ಅದರಿಂದ ಪಾಪ ಕರ್ಮಗಳು ಸುಟ್ಟು ಸನ್ಮಾರ್ಗದತ್ತ ಜೀವನ ತಮ್ಮದಾಗಲಿದೆ.ತಾಯಿಯಂತ ಪುಣ್ಯಕ್ಷೇತ್ರ ಬೇರಾವೂದು ಇಲ್ಲ ಎಂಬುದು ಅರಿತುಕೊಂಡು ಭಕ್ತಿ ಶ್ರದ್ಧೆಯಿಂದ ಗೌರವಿಸಬೇಕು  ದೇಶದಲ್ಲಿ ತಂದೆ ತಾಯಿಯವರೇ ದೇವರೆಂದು ಸತ್ಕರಿಸಿ ಗೌರವಿಸುವ ಸಂಸ್ಕಾರವಂತ ಭಾರತ ದೇಶದಲ್ಲಿ ಇಂದು ವೃದ್ಧಾಶ್ರಮಗಳಿಗೆ ಅಟ್ಟುವ ಕಾರ್ಯ ನಿತ್ಯ ನಡೆಯುತ್ತಿದೆ. ಮಕ್ಕಳು ದೊಡ್ಡ ದೊಡ್ಡ ಹುದ್ದೆ ಯಲ್ಲಿ ಇರುಬೇಕು ಎಂದು ಬಯಸೋ ಪಾಲಕರು ಗುಣಮಟ್ಟ ಶಿಕ್ಷಣದ ಜೊತೆಗೆ ಆಚಾರ,ವಿಚಾರ.ಸಂಸ್ಕಾರ.ಪರಂಪರೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು. 


ಸುದ್ದಿ ಓದಿ