ಲೇಖನಗಳು

ಬಸವ ಪಂಚಮಿ ಬಸವ ಲಿಂಗೈಕ್ಯ ದಿವ್ಯ ನೆನಹು

ಬಸವ ಪಂಚಮಿ ಬಸವ ಲಿಂಗೈಕ್ಯ ದಿವ್ಯ ನೆನಹು

ಜಗತ್ತಿನ ಶ್ರೇಷ್ಠ ಪ್ರವಾದಿಗಳಲ್ಲಿ ಧರ್ಮ ಗುರು ಬಸವಣ್ಣನವರು ಒಬ್ಬರು ಅವರು ಈ ಜಗತ್ತು ಕಂಡ ಮಹಾಪುರುಷರು, ಅವರ ಜೀವನ ಮರಣಗಳು ಪವಿತ್ರ ಘಟನೆಗಳಾಗಿವೆ. ಗುರುಬಸವಣ್ಣನವರು ಆನಂದನಾಮ ಸವಂತ್ಸರ ವೈಶಾಖಮಾಸ ರೋಹಿಣಿ ನಕ್ಷತ್ರ     30-04-1134 ರಂದು ಶರಣ ಮಾದರಸ ಮಾದಲಾಂಬಿಕೆ ಚಿದ್‌ಗರ್ಭದಲ್ಲಿ ಜನಿಸಿದರು. ಅಕ್ಕಮಹಾದೇವಿಯವರ ಕಾಲಜ್ಞಾನ ವಚನದಂತೆ (ಸಕಲ ಪುರಾತನರು ಹೇಳಿದ ಕಾಲಜ್ಞಾನಿ ಪು. 128-199 ದೀಪಸಂದ ಬಸವನ ಪಂಚಮಿಯಲ್ಲಿ ಅಂದರೆ ಬಸವ ಲಿಂಗೈಕ್ಯ ದಿನ ಪಂಚಮಿ ಎಂಬ ಭಾವ ಬಸವಪಂಚಮಿ ಎಂದು ಸ್ಪಷ್ಟಗೊಳ್ಳುತ್ತಿದೆ ಹೀಗೆ ಗುರು ಬಸವಣ್ಣನವರು 62 ವರ್ಷ 3 ತಿಂಗಳ ಅವರ ಜೀವಿತ ಅವಧಿ ಎಂದು ನಿರ್ಧರಿಸಲಾಗಿದೆ.  

ಗುರು ಬಸವಣ್ಣನವರು ಭಾರತ ಖಂಡ ಅಪರೂಪ ವ್ಯಕ್ತಿತ್ವ ಅವರ ಪ್ರತಿಭೆಗಳು ಬಹುಮುಖವಾಗಿವೆ. ಅವರು ಒಬ್ಬ ಶ್ರೇಷ್ಠ ತತ್ವಜ್ಞಾನಿ, ಭಕ್ತಿಭಂಡಾರಿ, ವಿಶ್ವಗುರು, ರಾಜಕೀಯ ಮುತ್ಸದ್ದಿ, ಶಿಕ್ಷಣ ತಜ್ಞ ಒಂದು ಸಮಗ್ರ ಕ್ರಾಂತಿಯ ದಿವ್ಯ ನಾಯಕ ನವಯುಗ ಸಮಾಜ ನಿರ್ಮಾಪಕ ಸ್ಪ್ರಿಕುಲೊದ್ದಾರಕ, ದಲಿತೊದ್ದಾರಕ 12ನೇ ಶತಮಾನದಲ್ಲಿಯೆ ಅನುಭವ ಮಂಟಪ ಕಟ್ಟಿ ಜಗತ್ತಿಗೆ ಪ್ರಜಾಪ್ರಭುತ್ವ ಮಾದರಿಯನ್ನು ತೋರಿಸಿದ ಮಹಾನ್ ಮುತ್ಸದ್ದಿ ಜಾತಿ, ವರ್ಗ, ವರ್ಣರಹಿತ, ಲಿಂಗ ಭೇದವಿಲ್ಲದ ಸಾಮಾಜಿಕ ಸಮತೆ ಬಂದುತ್ವಗಳು, ಕಾಯಕ ದಾಸೋಹಗಳು ಅರ್ಥವ್ಯವಸ್ಥೆ ದೀನದಲಿತರ ದುಃಖಗಳ ಸಾಂತ್ವಾನ ವಿಶ್ವಗುರು ಬಸವಣ್ಣನವರು ಗಳಿಕೆ, ಉಳಿಕೆ, ಬಳಿಕೆ ಕಾಣಿಕೆಗಳು ಅವರ ನಿನ್ನೆ, ಇಂದು, ನಾಳೆಗಳ ಕಾಲಮಿತಿಯನ್ನು ಮೀರಿದ ಮಹಾಪುರುಷ ವಿಶ್ವ ಬಂದುವಾಗಿದ್ದರು.  

ಸಮಗಾರನಾಗಿ ಹುಟ್ಟಿ ಬಸವಧರ್ಮ ಸ್ವೀಕರಿಸಿದ ಹರಳಯ್ಯ ಹಾಗೂ ಬ್ರಾಹ್ಮಣನಾಗಿ ಜನಿಸಿ ಬಸವಧರ್ಮ ಸ್ವೀಕರಿಸಿದ್ದ ಮದುವರಸ ಮಕ್ಕಳಾದ ಶೀಲವಂತ ಹಾಗೂ ಲಾವಣ್ಯರೊಡನೆ ವೈವಾಹಿಕ ಬಂದುತ್ವ ಕಲ್ಯಾಣ ಮಹೋತ್ಸವ ಅನುಭವ ಮಂಟಪದಲ್ಲಿ ಎಲ್ಲ ಶರಣ, ಶರಣೆಯರ ಹಾಗೂ ಅಲ್ಲಮಪ್ರಭುಗಳ ಘನ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಇದರಿಂದ ಸಿಟ್ಟಿಗೆದ್ದ ಸನಾತನಿಗಳು ಸಿಡಿದೆದ್ದು, ಬಿಜ್ಜಳ ಮಹಾರಾಜರ ವಿಹಲ್ವತೀಯ ಪರಿಸ್ಥಿತಿ ಹಾಗೂ ರಾಜಕೀಯ ಮಹತ್ವಾಂಕ್ಷಿ ಜನರು ಗುರು ಬಸವಣ್ಣನವರನ್ನು ಗಡಿಪಾರು ಮಾಡಲು ಪ್ರೇರೆಪಿಸಿ ಅವರನ್ನು ಗಡಿಪಾರು ಮಾಡಿ ಆದೇಶಿಸಿದರು. ಗಡಿಪಾರು ದಂಡ ಸ್ವೀಕರಿಸಿದ ಗುರುಬಸವಣ್ಣನವರು ಕಲ್ಯಾಣದಿಂದ ಕೂಡಲಸಂಗಮಕ್ಕೆ ಆಗಮಿಸಿದರು. ಅನಂತರ ಕೆಲವು ದಿನಗಳ ನಂತರ ಒಂದು ಆಶರೀರವಾಣಿ ಕೇಳಿಸಿತು ಬಸವಣ್ಣ ನೀನು ಮರ್ತ್ಸುಕ್ಕ ಬಂದ ಮಣಿಹ ಪೂರೈಸಿತು ಎಂದು ದೇವನಿಂದ ಕರೆ ಬಂದಿತು ಇನ್ನು ನೀನು ನನ್ನನ್ನು ಒಂದು ಸೇರು ಎಂದು ಕರೆ ಬಂದಿತು.  

ಅಂದು ಶ್ರಾವಣ ಶುದ್ದ ಪಂಚಮಿ ನಳನಾಮ ಸವಂತ್ಸರ 30-07-1196 ಕೂಡಲಸಂಗಮ ತಮ್ಮ ಕಲ್ಲಿನ ಗವಿಯಲ್ಲಿ ಗುರುಬಸವಣ್ಣನವರು ಇಷ್ಟಲಿಂಗ ಪೂಜೆ ತ್ರಾಟಿಕಯೋಗದಲ್ಲಿ ತಲ್ಲಿನರಾಗಿ ತಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡಾಗ ಸಂತೃಪ್ತಿಯ ಅಲೆ ಮುಖದ ಮೇಲೆ ಹಾಯುತ್ತದೆ ತಮ್ಮ ಬಾಳಿಗೆ ನಿಷ್ಪತಿ ಹಣ್ಣು ಲಿಂಗದೇವನಿಗೆ ಸಲ್ಲಬೇಕು ಎಂದು ತಿಳಿದು ಭೂಮಿಯೊಳಗೆ ಬಿದ್ದ ಬೀಜ ಮೊಳಕೆಯೊಡೆದು ಸಸಿಯಾಗಿ ಗಿಡಮರವಾಗಿ ನಿಷ್ಪತ್ತಿಗೊಂಡು ತಾನಾಗಿಯೇ ಮರದಿಂದ ಬೇರು​‍್ಡವಂತೆ ಪರಮಾತ್ಮ ತತ್ವವೇ ನಾನೆಂಬ ಭಾವದ ನಿಜ ಅರಿವು ಉಂಪಾದ ದೇಹದಿಂದ ಬಂದಿಸಲ್ಪಟ್ಟಿರುವ ಎಲ್ಲ ಬಂಧನಗಳಿಂದ ಹೊರಬಂದು ಗುರುಬಸವಣ್ಣನವರು ತೋರಿಸಿದ್ದಾರೆ.  

ಇಷ್ಟಲಿಂಗ ಸೂತ್ರದ ಮೂಲಕ ಕಾಯ ಜೀವನ ಬಂಧನಗಳಿಂದ ಮುಕ್ತಗೊಂಡು ಇಚ್ಚಾಮರಣಿಯಾಗಿ ಪರಬ್ರಹ್ಮ ತತ್ವದಲ್ಲಿ ಸಮರಸಗೊಂಡ ದಿನವನ್ನು ಮೈಸೂರ ವಿಶ್ವವಿದ್ಯಾಲಯ ಮುಖ್ಯಸ್ಥರಾದ ಶರಣ ಬಾಡಲು ರಾಮಯ್ಯನವರು ಶಿವಶರಣರ ವಚನಗಳ ಆಧಾರದಿಂದ ಶ್ರಾವಣ ಶುದ್ದ ಪಂಚಮಿಯನ್ನು ಬಸವ ಲಿಂಗೈಕ್ಯ ದಿನವೆಂದು ಅದನ್ನೇ “ಬಸವಪಂಚಮಿ” ಎಂದು ಘೋಷಿಸಿದರು. ಆದರೆ ಅವರ ಘೋಷಣೆ ಅಷ್ಟು ಪ್ರಚಾರಕ್ಕೆ ಬರಲಿಲ್ಲ ಆ ವಿಷಯವನ್ನು ಬಸವಧರ್ಮ ಪೀಠದ ಪರಮಪೂಜ್ಯ ಮಹಾಜಗದ್ಗುರು ಲಿಂಗಾನಂದ ಅಪ್ಪಾಜಿಯವರು ಹಾಗೂ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾಽಽ ಮಾತೆ ಮಹಾದೇವಿಯವರು ಬಸವ ಲಿಂಗ್ಯಕ್ಯ ದಿನ ಬಸವಪಂಚಮಿ ಎಂದು ಪ್ರಚಾರ ಮಾಡಿ ಜಗತ್ತಿಗೆ ತೋರಿಸಿಕೊಟ್ಟು ಬಸವಜಯಂತಿ ಅಷ್ಟೆ ಬಸವಪಂಚಮಿಯು ಮುಖ್ಯವಾಗಿದೆ ಅದಲ್ಲದೆ ಪ್ರತಿವರ್ಷ ಬೆಂಗಳೂರಲ್ಲಿ ಬಸವಪಂಚಮಿಯನ್ನು ಅದ್ದೂರಿಯಾಗಿ ಆಚರಿಸಿ ಅದನ್ನು ಪ್ರಚಾರ ಮಾಡಿದರು. ಇಂದು ನಾಡಿನಾದ್ಯಂತ ರಾಷ್ಟ್ರೀಯ ಬಸವದಳ ಹಾಗೂ ಎಲ್ಲ ಬಸವ ಸಂಘಟನೆಗಳು ಬಸವ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹೀಗೆ ಅವರ ಜೀವಿತಾವಧಿ ಬದುಕು ಸಾಧನೆಗಳು ಅವರ ಯೋಗ ಸೂತ್ರ ನಾವಿಂದು ಅರಿತು ಅದರಂತೆ ಕ್ರೀಯಾಶೀಲರಾಗುವುದು ನಮ್ಮ ಬದುಕಿನ ಸಾರ್ಥಕತೆ.  

- ಬಿ.ವ್ಹಿ. ಕಾಮಣ್ಣವರ  

ಬಸವ ಬಳಗ ಗದಗ  

     ಮೊ: 8073598711        

- * * * - 


ಸುದ್ದಿ ಓದಿ