ಪಾಳಾ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಪಾಳಾ ಗ್ರಾಮದ ಬಸವ ಸಮಿತಿಯವರು ಬಸವ ಜಯಂತಿಯನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವಿಶೇಷವಾದ ಜಗ್ಗಲಗಿ ವಾದ್ಯದೊಂದಿಗೆ ಬಸವಣ್ಣನವರ ಮೂರ್ತಿಯ ಮೆರವಣಿಗೆ ನಡೆಸುವುದರ ಮೂಲಕ ಬಸವ ಜಯಂತಿ ಆಚರಿಸಿದರು. ಬಸವ ಸಮಿತಿ ಅಧ್ಯಕ್ಷ ಮಲ್ಲನಗೌಡ ಬಿದ್ರಕೊಪ್ಪ, ಕಾರ್ಯದರ್ಶಿ ಪ್ರಕಾಶ ಕೋಟಿ, ಬಸವರಾಜ ಪೂಜಾರ, ಸತೀಶ ಆಡೂರ, ಪ್ರಹ್ಲಾದ ಬಡಿಗೇರ, ಮಾಲತೇಶ ಪೂಜಾರ, ರಾಜೇಂದ್ರ ಚಿಕ್ಕಮಠ, ರಾಮಣ್ಣ ಪೂಜಾರ, ಬಸನಗೌಡ ಶಿವನಗೌಡ್ರ, ನಾಗನಗೌಡ ಶಿವನಗೌಡ್ರ ಹಾಗೂ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.