ಹಗರಿಬೊಮ್ಮನಹಳ್ಳಿ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಬಸಮ್ಮ ಆಯ್ಕೆ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಬಸಮ್ಮ ಆಯ್ಕೆ

ಹಗರಿಬೊಮ್ಮನಹಳ್ಳಿ.ನ.04 : ತಾಲೂಕಿನ ಮಗಿಮಾವಿನಹಳ್ಳಿಯ ಫ್ರೌಢಶಾಲಾ ವಿಧ್ಯಾಥರ್ಿನಿ ಬಸಮ್ಮ  ಟಿ.ಬಿ.ಡ್ಯಾಂ ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂರು ಸಾವಿರ ಮೀಟರ್ ಓಟದಲ್ಲಿ  ದ್ವಿತೀಯ ಸ್ಥಾನವನ್ನು ಬಸಮ್ಮ ಹಾಗೂ  ಮತ್ತು ತೃತೀಯ ಸ್ಥಾನದಲ್ಲಿ ಗಾಳೇಶ ಹಾಗೂ ದುರುಗಮ್ಮ ಜಯಗಳಿಸಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವೇಳೆ ಶಾಲಾ ಮುಖ್ಯ ಶಿಕ್ಷಕ ಶೀವಯೋಗಿ ಪತ್ರಿಕೆಯೊಂದಿಗೆ ಮಾತನಾಡಿ ಗ್ರಾಮೀಣ ಪ್ರತಿಭೆಗಳು ಇಂದು ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುವುದು ಸಂತಸ ಮೂಡಿಸಿದೆ ಹಾಗೂ ಶಾಲೆ ಹಾಗೂ ಗ್ರಾಮವನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಥರ್ಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಎಸ್ಡಿಎಂಸಿ ಅಧ್ಯಕ್ಷ ರಮೇಶ ಮಾತನಾಡಿ ಕ್ರೀಡೆಗಳು ಮಾನಸಿಕ ನೆಮ್ಮದಿಗೆ ಸಹಾಯಕವಾಗಿವೆ, ಮಕ್ಕಳಿಗೆ ಕ್ರೀಡೆಯಲ್ಲಿ ಇರುವ ಆಸಕ್ತಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ದೈಹಿಕ ಶಿಕ್ಷಕರು ಹಾಗೂ ಸಿಬ್ಬಂದಿಗಳ ಶ್ರಮವೇ ಇಂದು ಶಾಲಾ ಮಕ್ಕಳು ರಾಜ್ಯ ಮಟ್ಟಕ್ಕೆ ಅಯ್ಕೆಯಾಗುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಅಭಿನಂದಿಸಿದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳಿಗೆ ಎಸ್ಡಿಎಂಸಿ ಉಪಾಧ್ಯಕ್ಷ ಟಿ.ಸೋಮಣ್ಣ, ದೈಹಿಕ ಶಿಕ್ಷಕಿ ಬಾಗಳಿ ಗುಲ್ಜಾರ್ ಬೇಗಂ,ಶಿಕ್ಷಕರಾದ ರಾಮಪ್ಪ, ಭೀಮಾನಾಯ್ಕ್, ತುಕಾರಾಂ, ಗಾಯತ್ರಿ, ಓಬಣ್ಣ, ನಾಗನಗೌಡ ಹಾಗೂ ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

 

ಸುದ್ದಿ ಓದಿ