ಖಾನಾಪುರ

ಪಾಂಡ್ರಿ ನದಿಗೆ ಬ್ರಿಡ್ಜ್ಕ ಕಂ ಬ್ಯಾರೇಜ್ ನಿರ್ಮಾಣ: ನಿಂಬಾಳಕರ

ಪಾಂಡ್ರಿ ನದಿಗೆ ಬ್ರಿಡ್ಜ್ಕ ಕಂ ಬ್ಯಾರೇಜ್ ನಿರ್ಮಾಣ: ನಿಂಬಾಳಕರ

ಕಕ್ಕೇರಿ 23: ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳಕರ ತಾಲೂಕಿನ ಲೋಂಡಾ ಜಿ.ಪಂ. ವ್ಯಾಪ್ತಿಯಲ್ಲಿರುವ ಪಾಂಡ್ರಿ ನದಿಗೆ ಅಡ್ಡಲಾಗಿ ಬ್ರಿಡ್ಜ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿದರು. 

ಸಾತನಾಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗಲೆಂದು ಮುತುವರ್ಜಿ ವಹಿಸಿ ಸಾತನಾಳಿ  ಗ್ರಾಮದ ಹತ್ತಿರ ಅಂದಾಜು ವೆಚ್ಚ ರೂ. 1,95,00,000ಗಳ ಸಣ್ಣ ನೀರಾವರಿ ಇಲಾಖೆ ವತಿಯಿಂದ ಶಾಸಕರು  ತಮ್ಮ ಅಮೃತ ಹಸ್ತದಿಂದ ಗುದ್ದಲಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಇಂಜನೀರ್, ಗುತ್ತಿಗೆದಾರ, ಕಾರ್ಯಕರ್ತರು, ಪತ್ರಕರ್ತರು, ಲೋಂಡಾ, ಸಾತನಾಳಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಸುದ್ದಿ ಓದಿ