ಖಾನಾಪುರ

ಬಿಜೆಪಿ ಕಾರ್ಯಕಾರಿಣಿಗೆ ಆಯ್ಕೆಯಾದ ಪ್ರಮೋದ ಕೊಚೇರಿಗೆ ಸನ್ಮಾನ

ಬಿಜೆಪಿ ಕಾರ್ಯಕಾರಿಣಿಗೆ ಆಯ್ಕೆಯಾದ ಪ್ರಮೋದ ಕೊಚೇರಿಗೆ ಸನ್ಮಾನ


ಖಾನಾಪುರ 23 :  ಭಾರತೀಯಜನತಾ ಪಾರ್ಟಿ (ಬಿಜೆಪಿ)ಖಾನಾಪುರ ಮಂಡಲ ಕಚೇರಿಯಲ್ಲಿ ಸೋಮವಾರ ಬಿಜೆಪಿ ಸಭೆಯನ್ನು ಆಯೋಜಿಸಲಾಗಿತ್ತು.   ಈ ಸಭೆಯಲ್ಲಿ ಬಿಎಲ್ ಎ 2 ಮತ್ತು ವಿಬಿ ಜಿ ರಾಮ್ ಜಿ ಯೋಜನೆಗಳ ಕುರಿತು ಚರ್ಚಿಸಲಾಯಿತು ಮತ್ತುಕರ್ನಾಟಕ  ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಆಯ್ಕೆಯಾದ ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೋದ ಸೂರ್ಯಕಾಂತ ಕೊಚೇರಿ ಅವರನ್ನು ಪಕ್ಷದ ಪರವಾಗಿ ಸನ್ಮಾನಿಸಲಾಯಿತು.

ಶಾಸಕ ವಿಠ್ಠಲ ಹಲಗೇಕರ, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮಾಜಿಅಧ್ಯಕ್ಷ ಸಂಜಯ ಕುಬಾಲ, ಮಾಜಿಜಿಲ್ಲಾ ಪಂಚಾಯ್ತಿ ಸದಸ್ಯ ಬಾಬುರಾವ್‌ದೇಸಾಯಿ, ಪ್ರಧಾನ ಕಾರ್ಯದರ್ಶಿ ಗುಂಡುತೋಪಿನಕಟ್ಟಿ, ಪಂಡಿತಓಗ್ಲೆ, ಮೋಹನ ಪಾಟೀಲ, ಕಿಶೋರ ಹೆಬ್ಬಾಳಕರ, ಬಾಬು ದೇಸಾಯಿ, ಶಿವ ಮಾಯೇಕರ, ಮಹಿಳಾ ಮೋರ್ಚಾಅಧ್ಯಕ್ಷೆರಜಕ್ತಾ ಪಾಟೀಲ, ಪ್ರಮೋದ ಪಾಟೀಲ, ಡಿ. ಗೋಂಧಳಿ, ನಾರಾಯಣಗುರವ ಮತ್ತಿತರಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ