ಇಂಡಿ ಆರ್‌.ಎಂ. ಶಹಾ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪರಿಷತ್ ಪದಗ್ರಹಣ

ಇಂಡಿ ಆರ್‌.ಎಂ. ಶಹಾ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪರಿಷತ್ ಪದಗ್ರಹಣ Student Council Investiture at R.M. Shah School, Indi

 

ಲೋಕದರ್ಶನ ವರದಿ  

ಇಂಡಿ 15: ನಗರದ ಆರ್‌.ಎಂ. ಶಹಾ ಪಬ್ಲಿಕ್ ಸ್ಕೂಲ್‌ನಲ್ಲಿ 2026ಹಿ27್ಫೂ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ ಪದಗ್ರಹಣ (ಇನ್‌ವೆಸ್ಟಿಚರ್) ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಲಾಯಿತು.  ಮುಖ್ಯ ಅತಿಥಿಯಾಗಿ 36 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, ವಿಜಯಪುರದ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ.ಕೆ.ಕೆ. ವಂಶಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ನಾಯಕತ್ವ, ಶಿಸ್ತು ಹಾಗೂ ಜವಾಬ್ದಾರಿಯ ಮಹತ್ವವನ್ನು ತಿಳಿಸಿದರು. ನಾಯಕತ್ವ ಎಂದರೆ ಅಧಿಕಾರವಲ್ಲ, ಸೇವೆ ಮತ್ತು ಜವಾಬ್ದಾರಿ.

ಇಂದಿನ ವಿದ್ಯಾರ್ಥಿಗಳೇ ನಾಳಿನ ಉತ್ತಮ ನಾಗರಿಕರು. ನಿರಂತರ ಕಲಿಕೆ, ಆತ್ಮವಿಶ್ವಾಸ ಹಾಗೂ ಪ್ರಾಮಾಣಿಕತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸಿದರೆ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ಅವರು ಹೇಳಿದರು.  ಸಂಸ್ಥೆಯ ಅಧ್ಯಕ್ಷ ಡಿ.ಆರ್‌. ಶಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಂದ ನಡೆದ ಪರೇಡ್, ಪ್ರಾರ್ಥನಾ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.  

ಶಾಲಾ ಸಂಸತ್ತಿನ ವಿದ್ಯಾರ್ಥಿಗಳಾದ ಹೆಡ್ ಬಾಯ್ ಶರತ್ ಕೊಂಡಗೂಳಿ, ಹೆಡ್ ಗರ್ಲ್‌ ಸುಮನ್ ಮುಚಂಡಿ, ಸ್ಪೋರ್ಟ್ಸ ಕ್ಯಾಪ್ಟನ್ ಜ್ಞಾನೇಶ್ವರ ರಾಥೋಡ್, ಡಿಸಿಪ್ಲೇನ್ ಕ್ಯಾಪ್ಟನ್ ಸೀಮಾ ಅಲೋಜಿ, ಕಲ್ಚರಲ್ ಕ್ಯಾಪ್ಟನ್ ಶಿವರಾಜ್ ಅಳ್ಳಗಿ, ಎನ್ ಸಿ ಸಿ ವಿದ್ಯಾರ್ಥಿಗಳಾದ ಲಾವಣ್ಯ ಇಂಗಳೇಶ್ವರ, ಚಾಲುಕ್ಯ ಹೌಸಿನ, ಕ್ಯಾಪ್ಟನ್ ಕಾಂಚನ ಬಡಿಗೇರ್, ವೈಸ್ ಕ್ಯಾಪ್ಟನ್ ಚೇತನ್ ಕಾಳಿ, ಗಂಗಾ ಹೌಸನ ಕ್ಯಾಪ್ಟನ್ ಆರ್ಯ ಕುಲಕರ್ಣಿ, ವೈಸ ಕ್ಯಾಪ್ಟನ್ ವಿಜಯ್ ನಿವರಗಿ, ಮೌರ್ಯ ಹೌಸನ ಕ್ಯಾಪ್ಟನ್ ರೋಹನ್ ಅಕ್ಕಲಕೋಟ, ವೈಸ್ ಕ್ಯಾಪ್ಟನ್ ಮಹಾದೇವ, ರಾಷ್ಟ್ರ ಕೂಟ ಹೌಸ್ ಕ್ಯಾಪ್ಟನ್ ಲಕ್ಷ್ಮಿ ಮೂಲಿ, ವೈಸ್ ಕ್ಯಾಪ್ಟನ್ ಖುಷಿ ಮೇತ್ರಿ ಪದಗ್ರಹಣ ಮಾಡಿದರು. 

ವಿದ್ಯಾರ್ಥಿ ಪರಿಷತ್ ಸದಸ್ಯರು, ವಿವಿಧ ಹೌಸ್‌ಗಳ ಕ್ಯಾಪ್ಟನ್‌ಗಳು ಹಾಗೂ ಉಪ ಕ್ಯಾಪ್ಟನ್‌ಗಳಿಗೆ ಬ್ಯಾಡ್ಜ್‌ ಧರಿಸಿ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ಅವರು ಶಾಲೆಯ ಶಿಸ್ತು, ಮೌಲ್ಯಗಳು ಹಾಗೂ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸುವ ಪ್ರತಿಜ್ಞೆ ಸ್ವೀಕರಿಸಿದರು.  ಲೆಫ್ಟಿನೆಂಟ್ ಕರ್ನಲ್ ಅಜಯ್ ಸಿಂಗ್, ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಸಲಹೆಗಾರ ನಜೀರ್ ಹುಂಡೇಕರ್, ಪ್ರಾಂಶುಪಾಲ ಪ್ರಕಾಶ್ ಪಾಟೀಲ, ಉಪಪ್ರಾಂಶುಪಾಲ ಅನೀಶಾ ಮೇಡಂ, ಶಾಲಾ ಸಂಯೋಜಕ ಅಲ್ಲಾಭಕ್ಷ ಉಕ್ಕಲಿ, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಅನುಷ್ಕಾ ಶ್ರೀ ಮತ್ತು ಲಕ್ಷ್ಮಿ ಉಮರ್ಜಿ ನಿರೂಪಿಸಿದರು. ಸದಾಫ್ ಸ್ವಾಗತಿಸಿ, ಸ್ವಯಂ ವಂದಿಸಿದರು.