ಖಾನಾಪುರ

ಶಾಸಕ ಹಲಗೇಕರರಿಂದ ಹಲಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಶಾಸಕ ಹಲಗೇಕರರಿಂದ ಹಲಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಖಾನಾಪುರ 24 : ಖಾನಾಪುರ ತಾಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಹಲಸಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀಜಾತ್ರೆಯ ಸಂಭ್ರಮ ನೆಲೆಯಾಗಿದ್ದು, ಈ ಶುಭ ಸಂದರ್ಭದಲ್ಲಿ ಹಲಸಿ ಗ್ರಾಮದ ಸಮಗ್ರಅಭಿವೃದ್ಧಿಗಾಗಿಕೋಟ್ಯಂತರ ರೂಪಾಯಿಗಳ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಶಾಸಕ ವಿಠ್ಠಲ ಹಲಗೇಕರ ನೆರವೇರಿಸಿದರು.  

ಗ್ರಾಮಸ್ಥರಿಗೆಅಗತ್ಯವಾದ ಮೂಲಭೂತ ಸೌಕರ್ಯ ಹಾಗೂ ಗ್ರಾಮದ ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.  

ರಸ್ತೆಅಭಿವೃದ್ಧಿ: ಛತ್ರಪತಿ ಶಿವಾಜಿ ಮಹಾರಾಜಚೌಕದಿಂದಗುಂಡಪಿ ರಸ್ತೆಯವರೆಗೆ 80 ಲಕ್ಷರೂ. ಮಂಜೂರಾಗಿದೆ. ಭಕ್ತರ ಸೌಲಭ್ಯಕ್ಕಾಗಿದೇವಸ್ಥಾನದಲ್ಲಿ ಫ್ಲೋರ್ ಅಳವಡಿಸಲು 5 ಲಕ್ಷರೂ. ಅನುದಾನ ಮಂಜೂರಾಗಿದೆ. ಅಲ್ಪಸಂಖ್ಯಾತರಯೋಜನೆಯಡಿ 5 ಲಕ್ಷರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣವಾಗಲಿದೆ.  

ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಹಲಶಿವಾಡಿ ಮತ್ತುಗುಂಡಪಿಗಾಗಿ ಪ್ರತ್ಯೇಕ ಬೈಪಾಸ್‌ರಸ್ತೆ ನಿರ್ಮಾಣ ಮಾಡಲಾಗುತ್ತದೆ. 8.7 ಲಕ್ಷರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆಕಾಮಗಾರಿ ನಡೆಯಲಿದೆ. ಸರ್ಕಾರಿ ಶಾಲೆ ದುರಸ್ತಿಗೆ 5 ಲಕ್ಷರೂ. ಮತ್ತು ಕುಡಿಯುವ ನೀರಿಗಾಗಿಎರಡು ಹೊಸ ಬೋರ್‌ವೆಲ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ವಿಠ್ಠಲ ಹಲಗೇಕರ ತಿಳಿಸಿದರು.  

ಹಲಸಿ ಗ್ರಾಮವು ಕೇವಲ ಒಂದು ಗ್ರಾಮವಲ್ಲ, ಅದು ನಮ್ಮತಾಲೂಕಿನ ಭಕ್ತಿಯಕೇಂದ್ರ ಬಿಂದುವಾಗಿದೆ. ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಯಾತ್ರಿಕರು ಮತ್ತುಗ್ರಾಮಸ್ಥರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದುಅವರು ಹೇಳಿದರು.  

ಈ ಸಂದರ್ಭದಲ್ಲಿ ಹಲಸಿವಾಡಿ ಮತ್ತುಗುಂಡಪಿ ಗ್ರಾಮದ ಪಂಚಕಮಿಟಿ ಸದಸ್ಯರು, ಮಹಾಲಕ್ಷ್ಮಿಯಾತ್ರಾ ಸಮಿತಿಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. 


ಸುದ್ದಿ ಓದಿ