ವಿಜಯಪುರ

ಬಾನುಬಿ ಲೋಹಾನಿರವರಿಗೆ ಪಿಎಚ್‌ಡಿ ಪದವಿ

ಬಾನುಬಿ ಲೋಹಾನಿರವರಿಗೆ ಪಿಎಚ್‌ಡಿ ಪದವಿ

ಲೋಕದರ್ಶನ ವರದಿ 

ವಿಜಯಪುರ 07 :  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶಿರಿನಸುಲ್ತಾನ ಅಲಿಯಾಸ ಬಾನುಬಿ ಲೋಹಾನಿ ಅವರು ಸಲ್ಲಿಸಿದ್ದ “ಎ ಸ್ಟಡಿ ಆನ್ ಮೆಂಟಲ್ ಹೆಲ್ತ್‌ ಆಫ್ ಮುಸ್ಲಿಂ ವ್ಯೂಮೆನ್‌” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.   

ಶಿರಿನಸುಲ್ತಾನ ಅಲಿಯಾಸ ಬಾನುಬಿ ಲೋಹಾನಿ ಅವರು ಸಮಾಜಕಾರ್ಯ ವಿಭಾಗದ ಡಾ. ರಮೇಶ ಎಂ ಸೋನಕಾಂಬಳೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶಿರಿನಸುಲ್ತಾನ ಅಲಿಯಾಸ ಬಾನುಬಿ ಲೋಹಾನಿ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.   


ಸುದ್ದಿ ಓದಿ