ಕದಂಬ ಗುರುರತ್ನ ಪ್ರಶಸ್ತಿಗೆ ಬಂಡ್ರಾಳ್ ಎಂ.ಮೃತ್ಯಂಜಯಸ್ವಾಮಿ ಆಯ್ಕೆ
ಬಳ್ಳಾರಿ28: ಕಂದಬ ಕನ್ನಡ ಸೇನೆ ಕರ್ನಾಟಕ (ರಿ) ಚಾಮರಾಜನಗರ, ಬೆಂಗಳೂರು ಇವರು ಕದಂಬ ಕನ್ನಡ ಸೇನೆ ಕರ್ನಾಟಕ ದಶಮಾನೋತ್ಸವ ಹಾಗೂ ಚಾಮರಾಜನಗರ ಜಿಲ್ಲಾ ಬೆಳ್ಳಿಮೋಹತ್ಸವ ಸಂಭ್ರಮದ ಅಂಗವಾಗಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ-2022 ಕಾರ್ಯಕ್ರಮವನ್ನು ನ.30ರಂದು ಬೆ. 10ಗಂಟೆಗೆ ಜೆ.ಹೆಚ್.ಪಾಟೀಲ್ ಸಭಾಂಗಣ, ಜಿಲ್ಲಾಡಳಿತ ಭವನ, ಚಾಮರಾಜನಗರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು, ಮುರುಘ ಸಂಸ್ಥಾನ ಮಠ ಮರಿಯಾಲಿ ಇವರು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಯೋಗಾವಿದ್ಯಾನಂದ ಕದಂಬ ಕನ್ನಡ ಸೇನೆ ಕನರ್ಾಟಕ ರಾಜ್ಯ ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಾಟಾಳ್ ನಾಗರಾಜ ರವರು ಕನ್ನಡ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷರು, ಬೆಂಗಳೂರು ನೆರವೇರಿಸಲಿದ್ದಾರೆ.
ವಿವಿಧ ಕ್ಷೇತ್ರದ ಸಾಧನೆ ಮಾಡಿದ ಗಣ್ಯರಿಗೆ ಹಲವಾರು ಪ್ರಶಸ್ತಿಗಳನ್ನು ನೀಡುತ್ತಿದ್ದು, ಅದರಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿಗೆ ಎರಡು ದಶಕಗಳ ಸಾಮಾಜಿಕಿ ಸೇವೆ ಮತ್ತು ವಿದ್ಯಾರ್ಥಿಗಳಿಗೆ ಕರಾಟೆ, ಯೋಗ, ಧ್ಯಾನ, ಕಲಿಸುವುದನ್ನು ಮತ್ತು ಹಲವಾರು ಕಾರ್ಯಕ್ರಮಗಳ ಸಂಘಟನೆ ಮಾಡಿರುವುದನ್ನು ಗಮನಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂಬ ಉದ್ದೇಶದಿಂದ ಮತ್ತು ಅವರ ಸಾಮಾಜಿಕ ಕಾರ್ಯಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಅವರಿಗೆ "ಕದಂಬ ಗುರುರತ್ನ ಪ್ರಶಸ್ತಿ" ನೀಡಿ ಗೌರವಿಸಲಿದ್ದಾರೆ ಎಂದು ಹೇಳಲು ನಮಗೆ ಸಂತೋಷವೆನ್ನಿಸುತ್ತೇನೆ. ನಮ್ಮ ಅಧ್ಯಕ್ಷರಿಗೆ ಟ್ರಸ್ಟ್ನ್ ಗೌರವಾಧ್ಯಕ್ಷ ವಿಕ್ರಂ ಮಣಿಪಾಲ್ ಕರಾಟೆ ವಿದ್ಯಾರ್ಥಿಗಳ ಪೋಷಕರ ಮತ್ತು ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ