ಸಮತೋಲನ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು: ಗೀತಾ
ಲೋಕದರ್ಶನ ವರದಿ
ಹೂವಿನ ಹಡಗಲಿ 28: ಸಮತೋಲನ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ವಿಜ್ಞಾನ ಶಿಕ್ಷಕಿ ಪಿ ಎಂ ಗೀತಾ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಿದ್ದ ಆಹಾರ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್ಚು ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸಬೇಕು. ಹಣ್ಣು ತರಕಾರಿ ಸೊಪ್ಪು ಕಾಳು ಪ್ರೋಟೀನ್ ಅಂಶಗಳು ದೇಹದ ಬೆಳವಣಿಗೆಗೆ ಪೂರಕ ಎಂದರು.
ಮುಖ್ಯ ಗುರುಗಳಾದ ಸುರೇಶ ಅಂಗಡಿ ಅಕ್ಷರ ದಾಸೋಹದ ಯೋಜನೆ ಅಡಿಯಲ್ಲಿ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವ ಕೆಲಸ ದೇಶಾದ್ಯಂತ ನಡೆದಿದೆ ಎಂದು ಹೇಳಿದರು.
ಶಿಕ್ಷಕ ವೈ ಜಯಮ್ಮ, ಲಾವಣ್ಯ ಜಿ, ರೇಖಾ ಎಸ್,ಆನಂದ ಜಿ, ಕೆ ಬಸವರಾಜ, ಸ್ವಾಮಿನಾಥ ರಾಮಸ್ವಾಮಿ ಇತರರು ಉಪಸ್ಥಿತರಿದ್ದರು. ಮಾನವನ ಮೆದುಳು, ಮಾನವನ ಹೃದಯ, ಸಸ್ಯ ಜೀವಕೋಶ, ಸೂರ್ಯಕಾಂತಿ, ವಿಸರ್ಜನಾಂಗ ವ್ಯೂಹ,ಪ್ರಾಣಿ ಜೀವಕೋಶ, ವಿಜ್ಞಾನದ ಮೊದಲಾದ ನಮೂನೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.