ಬಾಲಕೃಷ್ಣ, ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿ
ಮುಂಡಗೋಡ 26: ನವಚೇತನ ಯುವಕ ಮಂಡಳ ಟ್ರಸ್ಟ್ ಆಶ್ರಯದಲ್ಲಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಸ್ಪರ್ಧೆಯಲ್ಲಿ ಒಟ್ಟು 77 ಸ್ಪರ್ಧಿಗಳು ಪಾಲ್ಗೊಂಡಿದ್ದರು. ವಿಭಾಗದ ಬಾಲಕೃಷ್ಣನ ರೂಪಕ ಸ್ಪರ್ಧೆಯಲ್ಲಿ ಅದ್ಯಾ ರಾಘವೇಂದ್ರ ರಾಯ್ಕರ ಪ್ರಥಮ ಸ್ಥಾನ ಪಡೆದರೆ, ತ್ರಿಷಾ ಇಂಗಳೆ ಹಾಗೂ ಸಾತ್ವಿಕ ನಿಡಗುಂದಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಅದಿತಿ ಕಾನಡೆ ಪ್ರಾರ್ಥನೆ ಗೀತೆ ಹಾಡಿದರು. ಜಗದೀಶ ಕಾನಡೆ ಸ್ವಾಗತಿಸಿದರು. ದಿನೇಶ ವೆರ್ಣೇಕರ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಕಲಾಲ್ ವಂದಿಸಿದರು ಮಾರುತಿ ಓಂಕಾರ, ಡಾ.ಕಿರಣ ಹುಲಗೂರ, ಜಗದೀಶ ಕಾನಡೆ, ವಿನಾಯಕ ಶೇಟ, ಪಾಂಡುರಂಗ ಟಿಕ್ಕೋಜಿ, ವಿದ್ಯಾ ಸಣ್ಣಕ್ಕಿ, ಶಶಿಕಾಂತ ರಾಠೋಡ, ಕವಿತಾ ಚವ್ಹಾಣ ಇದ್ದರು.