ಲೇಖನಗಳು

ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಿದ ಶತಮಾನೋತ್ಸವ ಕಂಡ ಬೈಲಹೊಂಗಲದ ಶೂರ ಸಂಗೊಳ್ಳಿ ರಾಯಣ್ಣ (ಎಂ.ಜೆ) ಪ್ರೌಢಶಾಲೆ

ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಿದ ಶತಮಾನೋತ್ಸವ ಕಂಡ ಬೈಲಹೊಂಗಲದ ಶೂರ ಸಂಗೊಳ್ಳಿ ರಾಯಣ್ಣ (ಎಂ.ಜೆ) ಪ್ರೌಢಶಾಲೆ

            

   ಮನುಷ್ಯನಿಗೆ ವಿದ್ಯ ಎನ್ನುವದು ಬದುಕಿನಲ್ಲಿ ಅತೀ ಅತ್ಯವಶ್ಯವಾಗಿ ಬೇಕಾದಂತಹ ವ್ಯವಸ್ಥೆಗಳಲ್ಲಿ ಒಂದು. ಶಿಕ್ಷಣದಿಂದ ಮಾನವನ ಸರ್ವಾಂಗೀಣ ಪ್ರಗತಿ ಸಾಧ್ಯವಾಗಲಿದ್ದು ಈ ನಿಟ್ಟಿನಲ್ಲಿ ಐತಿಹಾಸಿಕ ನಾಡು ಬೈಲಹೊಂಗಲದಲ್ಲಿ ಈ ದಾಹಕ್ಕೆ ​ಪ್ರಥಮವಾಗಿ ಧಾರೆ ಎರೆದವರಲ್ಲಿ ಧಾರವಾಡದ ಕಲೆಕ್ಟರ್ ಮುನಶೀಪಲ್ ಜಾಕ್ಸನ್ ಎನ್ನುವದರಲ್ಲಿ ಎರಡು ಮಾತಿಲ್ಲ.  

   ಸ್ವಾತಂತ್ಯ್ರೆ ಪೂರ್ವದಲ್ಲಿ ಅಂದರೆ 1912ರಲ್ಲಿ ಮುಂಬೈ ಕರ್ನಾಟಕದ ಪ್ರಾಂತ್ಯದ ಆಡಳಿತದಲ್ಲಿ ಆಂಗ್ಲೋ ವರ್ನಾಕ್ಲರ ಸ್ಕೂಲ್ ಎಂಬ ಹೆಸರಿನೊಂದಿಗೆ ಜನ್ಮ ತಳೆದು ಶತಮಾನೋತ್ಸವವನ್ನು ದಾಟಿ ಹಸರು ಪಡೆದ ಬೈಲಹೊಂಗಲದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ (ಮುನಶೀಪಲ್ ಜಾಕ್ಷನ್) ಪ್ರೌಢಶಾಲೆಗೆ ರಾವ ಬಹದ್ದೂರ ಮಲ್ಲನಾಯ್ಕ ಪಾಟೀಲ ಅವರ ದೂರದ್ಟೃಯ ಪ್ರತಿಪಲವಾಗಿ ಬೈಲಹೊಂಗಲ ಪಟ್ಟಣದಲ್ಲಿ ಉಪ್ಪಿನ ಕೂಟದ ಕಾಂದ್ರೊಳ್ಳಿ ಅವರ ಮನೆ, ಬಿಳ್ಳೂರ ಗಲ್ಲಿಯ ಮುತ್ನಾಳ ಗೌಡರ ಮನೆ, ಬಝಾರ ರಸ್ತೆಯ ಹಳೇ ಪುರಸಭೆ ಕಟ್ಟಡ, ಮುಂತಾದ ಸ್ಥಳಗಳಲ್ಲಿ ಕಾಲಕ್ಕೆ ತಕ್ಕಂತೆ ಸ್ಥಳ ಬದಲಾುಸುತ್ತಾ ಪ್ರಾರಂಭದಲ್ಲಿ ಶಾಖಾ ಮೂರುಸಾ"ರ ಮಠದ ಅನ್ನ ದಾಸೋಹದ ಸೇಮೆಂದ ನಡೆದು ಸದ್ಯ ಮುನವಳ್ಳಿ ರಸ್ತೆಯ ಸುಂದರ ಪರಿಸರದ "ಶಾಲ ಮೈದಾನದಲ್ಲಿ ಮೈದಳೆದು ನಿಂತಿದೆ.   

    ಈ ಭಾಗದ ಜನರಿಗೆ ಶಿಕ್ಷಣದ ವ್ಯವಸ್ಥೆಗೆ ಅನುಕೂಲವಾಗಲೆಂಬ ಸದುದ್ದೇಶ ಇಟ್ಟುಕೊಂಡು ಬಸಪ್ಪ ಪಾಗಾದ ಎನ್ನುವ ದಾನಿಗಳು ತಮ್ಮ ಜ"ುನನ್ನು ಉಚಿತವಾಗಿ ನೀಡಿದ್ದರ ಫಲವಾಗಿ 1939 ರಲ್ಲಿ ನಗರ ಪಿತಾಮಹ ದಿ. ಎಚ್‌.ಎಸ್‌.ಮೆಟಗುಡ್ ಅವರ ನೇತೃತ್ವದಲ್ಲಿ ಆಗಿನ ಮುಂಬೈ ಪ್ರಾಂತ್ಯದ ಪ್ರಧಾನಿ ಬಿ.ಜಿ.ಖೇರ ಶಾಲೆಯ ಕಟ್ಟಡಕ್ಕೆ ಶಂಕು ಸ್ಥಾಪನೆಯನ್ನು ನೆರವೇರಿಸಿದರು. ತದ ನಂತರದ ದಿನಗಳಲ್ಲಿ ಕಟ್ಟಡ ಪೂರ್ಣಗೊಂಡ ತರುವಾಯ ಒಂದರಿಂದ ಮೂರರವರೆಗೆ ಇದ್ದ ಇಂಗ್ಲೀಷ ವರ್ಗಗಳು ಎಸ್‌ಎಸ್‌ಸಿವರೆಗೆ ಬಂದಾಗ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಬಿ.ಜಿ.ನರಗುಂದ ಅವರು ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡು ಈ ಶಾಲೆಯ ಪ್ರಗತಿಗೆ ಸಾಕಷ್ಟು ಶ್ರಮಿಸಿದರ ಫಲವಾಗಿ ಇಡೀ ಕರ್ನಾಟಕದಲ್ಲೇ ಹೆಸರುವಾಸಿಯಾುತು. 

    1948 ರಲ್ಲಿ ಶಾಲೆಯ ಬೆಳ್ಳಿ ಹಬ್ಬವನ್ನು ವಿಜೃಭಣೆುಂದ ಆಚರಿಸಿಕೊಂಡ ನಂತರ ಶಾಲೆಯ ಶಿಕ್ಷಣದ ಬೋಧನೆಯ ಗುಣಮಟ್ಟಕ್ಕೆ ಮಾರು ಹೋದ ಬೈಲಹೊಂಗಲ ಭಾಗದ ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗಕ್ಕೆ ಬಂದಾಗ ದೂರದ ಊರುಗಳಿಗೆ ತೆರಳುವದನ್ನು ಮನಗಂಡ ದಿ. ಎಚ್‌.ಎಸ್‌.ಮೆಟಗುಡ್ ಅವರು ಶೇಟ್, ಪ್ರೇಮಚಂದ ಮೂಲ್ಜಿ ಇವರಿಂದ ದಾನವಾಗಿ ಪಡೆದ ಈಗಿನ ಎಂಕೆಸಿಆರ್ ಹ್ಯಸ್ಕೂಲಿನ ಕಟ್ಟಡವನ್ನು ಸೇಟ್ ಪುರುಸೋತ್ತಮ ಹಾಸ್ಟೇಲಾಗಿ ನಿಯೋಜನೆಯಾಗಿತ್ತು. ಮುಂಬೈನ ಶೇಟ್ ವ್ರಂದಾವನ ಮೂಲ್ಜಿ ಅವರು ಜಾಗೆಯು ಸೇರಿದಂತೆ ಹಾಸ್ಟೇಲಿನ ಕಟ್ಟಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದರು.   

    1955 ರಲ್ಲಿ ವಿವಿದ್ದೋಧ್ದೇಶ ಶಾಲೆಗಳೆಂದು ಸರಕಾರ ನೂತನ ಯೋಜನೆ ಆರಂಭಿಸಿದಾಗ ಅದರಲ್ಲಿ ರಾಜ್ಯದ ರಾಣೆಬೆನ್ನೂರ ಹಾಗೂ ಬೈಲಹೊಂಗಲದ ಎಂ.ಜೆ ಹೈಸ್ಕೂಲ್ ಈ ಯೋಜನೆಯಡಿಯಲ್ಲಿ ಮಾರ​‍್ಾಡಾಗಿ "ದ್ಯಾರ್ಥಿಗಳ ಬದುಕಿನ ಕೌಶ್ಯಲತೆಗೆ ಅನುಕೂಲದ ದ್ಟೃುಂದ ಕೃ, ತೋಟಗಾರಿಕೆ, ಬಡಿಗತನ, ಟೇಲರಿಂಗ್, ಕಮ್ಮಾರಿಕೆ, ಗೃಹಪಯೋಗಿ ವಸ್ತುಗಳ ತಯಾರಿಕೆ ಸೇರಿದಂತೆ ಹಲವು ತರಬೇತಿ ವ್ಯವಸ್ಥೆಗಳನ್ನು ಕಲ್ಪಿಸಿತು. 1957 ರಲ್ಲಿ ಮೊಂಟೇಸರಿ ಶಿಶು ವಿಹಾರವನ್ನು ಪ್ರಾರಂಭಿಸಿತು. ಶಿಕ್ಷಕಿ ಶ್ರೀಮತಿ ಆರ್‌.ಬಿ.ಇಂಗಳಗಿ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. 

      1967 ರಲ್ಲಿ ಎಂ.ಎಸ್‌.ಗಡತನ್ನವರ ಪುರಸಭೆಯ ಅಧ್ಯಕ್ಷರಾದ ಅವಧಿಯಲ್ಲಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿ ಇದ್ದದ್ದನ್ನು ಮನಗಂಡು ವಿದ್ಯಾರ್ಥಿನಿಯರ ಅನುಕೂಲದ ದ್ಟೃುಂದ ಪ್ರತ್ಯೇಕ ಶಿಕ್ಷಣಕ್ಕಾಗಿ ಈಗಿರುವ ಪುರಸಭೆಯ ಕಿತ್ತೂರು ಚೆನ್ನಮ್ಮ ರಾಣಿ ಬಾಲಕಿಯರ (ಎಂಕೆ.ಸಿಆರ್) ಪ್ರೌಢಶಾಲೆಯನ್ನು ತೆರೆಯಲಾುತು. ಪ್ರಥಮವಾಗಿ ಎಂ.ಎಸ್‌.ಊರೂಳಗಿನ ಅವರು ಕಾರ್ಯ ನಿರ್ವ"ಸಿ ಶಾಲೆಯ ಪ್ರಗತಿಗೆ ಶ್ರಮಿಸಿದರು. ಎಂಜೆ. ಹೈಸ್ಕೂಲಿನ ಮತ್ತೊಂದು ಕೊಡುಗೆಯಾಗಿ ಇಲ್ಲಿ ಉರ್ದು ಶಿಕ್ಷಣದ ವಿಭಾಗವನ್ನು ಆರಂಬಿಸಲಾಗಿತ್ತು.  

   1965 ರಲ್ಲಿ ಪಿಯುಸಿ ಎಂಟ್ರನ್ಸ್‌ ವರ್ಗಗಳನ್ನು ಈ ಸೂರಿನಲ್ಲಿ ತೆರೆಯಲಾಗಿತ್ತು.  ನಂತರದ ಅನ್ಯ ಸಂಸ್ಥೆಗಳು ತಲೆ ಎತ್ತಿದ್ದರಿಂದ ಆ ವರ್ಗಗಳನ್ನು ನಿಲ್ಲಿಸಲಾುತು. ಸರಕಾರ ವಸತಿ ಶಾಲೆಗಳನ್ನು ಆರಂಬಿಸಿದಾಗ ಮೂರಾರ್ಜಿ ವಸತಿ ಶಾಲೆಯು ಸೇರಿದಂತೆ ಸರಕಾರಿ ಪದವಿ ಪೂರ್ವ ಮಹಾ"ದ್ಯಾಲಯವೂ ಕೂಡಾ ತನ್ನ ​‍್ರ​‍್ರಥಮ ಸೇವೆಗಳನ್ನು ಈ ಕಟ್ಟಡದ ಸೇವೆಗಳಿಂದಲೇ ಆರಂಬಿಸಿವೆ.  

   ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹಲವಾರು "ದ್ಯಾ ಸಂಸ್ಥೆಗಳಿದ್ದರೂ ಸಹ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ (ಎಂಎಸ್‌ಎಸ್‌ಆರ್) ಯೂ ಇಂದಿಗೂ ಬಹು ವರ್ಗಗಳಿಂದ, ನುರಿತ ಬೋಧಕರಿಂದ ತನ್ನತನವನ್ನು ಕಾಪಾಡಿಕೊಂಡು ಬಂದಿದ್ದು ಶತಮಾನೋತ್ಸವವನ್ನು ದಾಟಿ ಸಾಗಿದ್ದು ಈ ಭಾಗದ ಜನರ ಪುಣ್ಯ. ಶಾಲೆಯಲ್ಲಿ ಕಲಿತಂತಹ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದು ಬಹು ದೊಡ್ಡ ಖ್ಯಾತಿಯೊಂದಿಗೆ ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿದ್ದು ಶಾಲೆಯ ಕೀರ್ತಿ ಪತಾಕೆಗೆ ಮತ್ತಷ್ಟು ಪ್ಟು ನೀಡಿದೆ.   

   ಕಾಲ ಕಾಲಕ್ಕೆ ಬಂದ ಶಾಸಕರು, ಅಧಿಕಾರಿ ವರ್ಗ, ಪುರಸಭೆಯ ಅಧ್ಯಕ್ಷರಾದಿಯಾಗಿ, ಸದಸ್ಯರು, ಸ್ಥಾು ಸಮಿತಿಯ ಸದಸ್ಯರು, ಅಲ್ಲಿನ ಮುಖ್ಯೋಪಾಧ್ಯಾಯರು, ಶಿಕ್ಷಕರ ಬಳಗ ಸೇರಿದಂತೆ ಸಿಬ್ಬಂದಿ ವರ್ಗದವರು, ದಾನಿಗಳು, ಅಭಿಮಾನಿಗಳು, ವಿದ್ಯಾರ್ಥಿಗಳು ಇತಿಹಾಸದ ಈ ಶಾಲೆಯ ಪ್ರಗತಿಗೆ ನಿರಂತರ ಪ್ರಯತ್ನದಲ್ಲಿದ್ದಾರೆ. 

   ಸ್ಥಳೀಯ ಪುರಸಭೆಯ ಸಂಚಾಲಿತ ಈ ಪ್ರೌಢಶಾಲೆಯು ತನ್ನ ಸೇವೆಯನ್ನು ಐತಿಹಾಸಿಕ ನಾಡಿನಲ್ಲಿ ವಿಸ್ತರಿಸುತ್ತಾ ಸಾಗಿದ್ದು ಹೆಮ್ಮೆಯೆನಿಸಿದೆ. ಸದ್ಯ ಸುಂದರ ಪರಿಸರದ ವಿಶಾಲ ಮೈದಾನದಲ್ಲಿ ವಿದ್ಯಾರ್ಥಿಗಳ ಅನುಕೂಲತೆಗೆ ತಕ್ಕಂತೆ ಆಟೋಟಗಳಿಗೆ ಪೂರಕವಾದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಸೇರಿದಂತೆ ವಿದ್ಯಾರ್ಥಿಗಳ ಮನೋ ವಿಕಾಸಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲಾಗುತ್ತಿದ್ದು ಇಂದಿಗೂ ಸಹ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಸೇರಿದಂತೆ ಬೇರೆ ತಾಲೂಕಿನ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವದು ಇಲ್ಲಿ ವಿಶೇಷವಾಗಿದೆ.   

   ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವ  ವಿದ್ಯಾರ್ಥಿಗಳು ಇಲ್ಲಿನ ಗುಣಮಟ್ಟದ ಶಿಕ್ಷಣದ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದಾರೆ. ಸರಕಾರ ಕೊಡುವ ಪ್ರತಿಯೊಂದು ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಆ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನೀಡಿ ಧಾರವಾಡದ ಕಲೆಕ್ಟರ್ ಮುನಶೀಪಲ್ ಜಾಕ್ಸನ್ ಆರಂಭಿಸಿದ ಶಾಲೆಯ ಕೀರ್ತಿಗೆ ಪರಿಶ್ರಮ ಪಡುತ್ತಿರುವ ವಿವಿಧ ಕ್ಷೇತ್ರದ ಗಣ್ಯರ ಸೇವೆ ಸದಾ ಸ್ಮರಣೀಯವಾಗಿದ್ದು ಅಜರಾಮರವಾಗಿದೆ. 2012 ರಲ್ಲಿ ತನ್ನ ಶಿಕ್ಷಣ ಸೇವೆಯ ಶತಮಾನೋತ್ಸವ ಮೈದುಂಬಿಕೊಂಡದ್ದನ್ನು ಮನಗಂಡು ಬೀಗುತ್ತಿರುವ ಬ್ರಿಟೀಷರ ಕಾಲದ ಕಟ್ಟಡ ಇಂದಿಗೂ ಉಕ್ಕಿನ ಕೋಟೆಯಾಗಿ ನೋಡುಗರ ಕಣ್ಮನ ಸೆಳೆಯುತ್ತಿರುವದು ವಿಶೇಷವಾಗಿದೆ.  

    ಪ್ರಸ್ತುತ ಎಂ.ವಿ.ನಾಗನೂರ ಮುಖ್ಯಾಧ್ಯಾಪಕರಾಗಿ ಸೇವೆಯಲ್ಲಿದ್ದು ಶೈಕ್ಷಣೀಕ, ಸಾಂಸ್ಕ್ರತಿಕ, ಸಾಹಿತ್ಯಕ, ಕ್ರೀಡಾ ಕಾರ್ಯಗಳಿಂದ ಶಾಲೆಯನ್ನು ಉತ್ತುಂಗಕ್ಕೇರಿಸಲಿ ಪ್ರಯತ್ನಿಸುತ್ತಿದ್ದಾರೆ. 

ಮಹಾಂತೇಶ ರಾಜಗೋಳಿ 

                                  1 ಕ್ರಾಸ್, ಪ್ರಭುನಗರ, ಬೈಲಹೊಂಗಲ  

                                   ಬೈಲಹೊಂಗಲ-591102 

                                   ಜಿಲ್ಲೆ-ಬೆಳಗಾವಿ  

                                  ಮೋಬೈಲ ನಂ-9538578708   

    


ಸುದ್ದಿ ಓದಿ