ಶಿಗ್ಗಾವ್

ಹಿರೇಬೆಂಡಿಗೇರಿಯ ದೊಡ್ಡಕೆರೆಗೆ ಮುಖ್ಯಮಂತ್ರಿ ಬಾಗಿನ ಪೂಜೆ

ಹಿರೇಬೆಂಡಿಗೇರಿಯ ದೊಡ್ಡಕೆರೆಗೆ ಮುಖ್ಯಮಂತ್ರಿ ಬಾಗಿನ ಪೂಜೆ

ಶಿಗ್ಗಾವಿ 13:  ಸವಣೂರು ಏತ ನೀರಾವರಿ ಯೋಜನೆಯಡಿ ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 48 ಕೆರೆಗಳ ತುಂಬಿಸುವ ರೂ 90.57 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾದ ಯೋಜನೆಯನ್ನು ಲೋಕಾರೆ​‍್ಣಗೊಳಿಸಿ, ಯೋಜನೆ ಅಡಿಯಲ್ಲಿ ತುಂಬಿದ ಹಿರೇಬೆಂಡಿಗೇರಿಯ ದೊಡ್ಡಕೆರೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ​‍್ಿಸಿ ಪೂಜೆ ಸಲ್ಲಿಸಿದರು. 

ಕೆರೆಗೆ ಬಾಗಿನ ಅರ​‍್ಿಸಿದ ನಂತರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರಲ್ಲಿ ಬೆಳಿಗ್ಗೆ ಪತ್ರಕರ್ತರು ಏನ್ ಸರ್ ತವರುಮನೆಗೆ ಹೊಂಟಿದ್ದೀರಿ ಅಂತಾ ಕೇಳಿದರು, ಹೌದು ನಾನು ನನ್ನ ತವರುಮನೆಗೆ ಹೊರಟಿದ್ದೇನೆ ಅಂದೆ, ಅಲ್ಲಿ ಸಿಗೋ ಸಂತೋಷ ಎಲ್ಲೂ ಸಿಗೋದಿಲ್ಲ ಅಂದೆ, ಜನತೆಯ ಆಶೀರ್ವಾದ, ನಮ್ಮ ನಾಯಕರಾದ ಯಡಿಯೂರ​‍್ಪ, ಪ್ರಧಾನಿ ಮೋದಿ, ಅಮೀತ್ ಷಾ ಮತ್ತು ನಡ್ಡಾರ ಆಶೀರ್ವಾದದಿಂದ ರಾಜ್ಯದ ಮಹಾಜನತೆಯ ಸೇವೆ ಮಾಡೋ ಅವಕಾಶ ಸಿಕ್ಕಿದೆ, ಅದರ ಶ್ರೇಯಸ್ಸು ನಿಮಗೆ ಸಲ್ಲುತ್ತದೆ, ನೀವು ನನ್ನನ್ನ ಗುರ್ತಿಸಿ, ಬೆಳೆಸಿ, ಹೃದಯದಲ್ಲಿ ಇಟ್ಟುಕೊಂಡಿದ್ದೀರಿ, ಅದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು, ಆ ನಿಮ್ಮ ವಿಶ್ವಾಸಕ್ಕೆ ಸದಾಕಾಲ ನ್ಯಾಯವನ್ನ ಕೊಡುತ್ತೇನೆ. ಯಾವುದೇ ರೀತಿಯ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದರು. 

ಈಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ. ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮುಖ್ಯಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿ ರಮೇಶ ಕೋನರಡ್ಡಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಎಡಿಸಿ ತಿಪ್ಪೇಸ್ವಾಮಿ, ಸಿಇಒ ಮಹ್ಮದ ರೋಷನ್, ಪೋಲಿಸ ವರಿಷ್ಠಾದಿಕಾರಿ ಹನುಮಂತರಾಯಪ್ಪ, ವಾರ್ತಾದಿಕಾರಿ ರಂಗನಾಥ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ,  ಹಾಗೂ ತಾಲೂಕಿನ ಹಿರಿಯರು ಹಾಗೂ ಇತರರು ಉಪಸ್ಥಿತರಿದ್ದರು. ಶಿವಾನಂದ ಮ್ಯಾಗೇರಿ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ