100 ಸಿಲಿಂಡರ್ ಆಕ್ಸಿಜನ್ ಫಿಲ್ಲಿಂಗ್ಗೆ ಮುಂದಾದ ಬಾದಾಮಿ ಕರಿಬಸವರಾಜ್
ಹಗರಿಬೊಮ್ಮನಹಳ್ಳಿ 19 : ಮಹಾಮಾರಿ ಕರೋನಾ ವೈರಸ್ ಎರಡನೆ ಅಲೆಗೆ ತುತ್ತಾದ ರೋಗಿಗಳಿಗೆ ಅಕ್ಸಿಜನ್ ಹಾಹಾಕಾರದ ಕೂಗಿಗೆ ವಿವಿ ಸಂಘದ ನಿದೇರ್ಶಕ ಬಾದಾಮಿ ಕರಿಬಸವರಾಜ್ ಕೈಜೋಡಿಸಿ 100 ಜಂಬೂ ಸಿಲಿಂಡರ್ಗೆ ಅಕ್ಸಿಜನ್ ವ್ಯೆವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.ಸೊಂಕಿತರಿಗೆ ಆಕ್ಸಿಜನ್ ಕೊರತೆ ಇರುವುದನ್ನು ಮನಗೊಂಡು 100 ಸಿಲಿಂಡರ್ಗಳಿಗೆ ಆಕ್ಸಿಜನ್ ತುಂಬಿಸುವ ಪ್ರಯತ್ನವನ್ನು ಮಾಡಿದ್ದೆವೆ ಹಾಗೂ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಯವುದೇ ರೀತಿಯ ಸಹಾಯವಿದ್ದರೂ ಮಾಡುವ ಭರವಸೆಯನ್ನು ನೀಡಿದ್ದಾರೆ. ಪಟ್ಟಣದ ಗ್ರೀನ್ ಹೆಚ್ಬಿಹೆಚ್ ಆಸ್ಪತ್ರೆಯಲ್ಲಿನ ಫ್ಲೋ ಮೀಟರ್ಗಳ ಕೊರತೆಯನ್ನು ನೀಗಿಸಿ 8ಫ್ಲೋ ಮೀಟರ್ಗಳನ್ನು ನೀಡಿದ್ದಾರೆ.ಬಾಂಬೆಯಿಂದ ಈ ಫ್ಲೋ ಮೀತರ್ಗಳನ್ನು ತರಿಸಿದ್ದೆವೆ ಎಂದು ಟೀಂನ ಸದಸ್ಯರು ತಿಳಿಸಿದರು.
ಗ್ರೀನ್ ಹೆಚ್ಬಿಹೆಚ್ ಟೀಂ ನವರು ನೀಡಿರುವ ಫ್ಲೋ ಮೀಟರ್ಗಳು ಆಸ್ಪತ್ರೆಗೆ ತುಂಬಾ ಉಪಯುಕ್ತವಾಗಿವೆ ಹಾಗೂ ಬಾದಾಮಿ ಕರಿಬಸವರಾಜ್ ನೀಡಿರುವ 100ಸಿಲಿಂಡರ್ ಆಕ್ಸಿಜನ್ ಸೊಂಕಿತರಿಗೆ ನೆರವಾಗಿವೆ ,ಪಟ್ಟಣವು ದನಿಗಳ ತವರು ಎಂದರೂ ತಪ್ಪಿಲ್ಲವೆಂದು ಶ್ಲಾಘಿಸಿದರು.ಮುಖ್ಯ ವೈದ್ಯಾಧಿಕಾರಿ ಶಂಕರ ನಾಯ್ಕ್ ಈ ಬಗ್ಗೆ ಪ್ರತಿಕ್ರಿಯಿಸಿ ನಮ್ಮ ಆಸ್ಪತ್ರೆಯಲ್ಲಿನ ಅನೇಕ ಕೊರತೆಗಳನ್ನು ದಾನಿಗಳು ತೀರಿಸುತ್ತಿರುವುದು ತುಂಬ ಸಂತಸ ತಂದಿದೆ ಹಾಗೂ ಆಸ್ಪತ್ರೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಕೈಜೊಡಿಸುವುದಗಿ ತಿಳಿಸಿರುವ ಬಾದಾಮಿ ಕರಿಬಸವರಜ್ ಹಾಗೂ ಗಜಾಪುರ ಜಗದೀಶ್ ಅವರಿಗೆ ಧನ್ಯವಾದಗಳನ್ನು ಆರ್ಪಿಸಿದರು.ಹಾಗೂ ಸೊಂಕಿತರಿಗೆ ನೀಡುವ ಆಕ್ಸಿಜನ್ ಸಿಲಿಂಡರ್ಗಳಿಗೆ ಮುಖ್ಯವಾಗಿ ಫ್ಲೋಮೀಟರ್ ತುಂಬ ಅವಶ್ಯಕವಾಗಿ ಬೇಕಾಗಿದೆ ಗ್ರೀನ್ ಹಚ್ಬಿಹೆಚ್ ಟೀಂ ಇಂದು 8ಫ್ಲೋ ಮೀಟಗಳನ್ನು ನೀಡಿರುವುದು ಆಸ್ಪತ್ರೆಯ ಪ್ಲೋಮೀಟರ್ ಕೊರತೆಯನ್ನು ನೀಗಿಸಿದೆ ಎಂದರು.ಈ ಸಂಧರ್ಭದಲ್ಲಿ ಗ್ರೀನ್ ಹೆಚ್ಬಿಹೆಚ್ ಟೀಂನ ಆನಂದಬಾಬು,ಅಶೋಕ ಬಾವಿಕಟ್ಟಿ,ಕುಮಾರ್ ಪಾಲ್,ವಿಕಾಸ್ ಬಾಪ್ನ,ವಿ.ಹೆಚ್.ಮನೋಹರ್,ಬಾವಿ ಶಶಿಧರ ಸೇರಿದಂತೆ ಇನ್ನತರರು ಇದ್ದರು.ಮೇ.19 ಹೆಚ್ಬಿಹೆಚ್ 01 : ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ವಿವಿ ಸಂಘದ ನಿದೇರ್ಶಕ ಬಾದಮಿ ಕರಿಬಸವರಾಜ 100ಸಿಲಿಂಡರ್ಗಳಿಗೆ ಆಕ್ಸಿಜನ್ ಹಾಗೂ ಗ್ರೀನ್ ಹೆಚ್ಬಿಹೆಚ್ ಟೀಂನಿಂದ 8ಫ್ಲೋ ಮೀಟರ್ಗಳನ್ನು ನೀಡಿದರು.