ಹಾವೇರಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಡಗಿ ಮಹಿಳೆಯರಿಗೆ ಪ್ರಥಮ ಸ್ಥಾನ
ಬ್ಯಾಡಗಿ 25: ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಿದ್ದಪ್ಪ ಹೊಸಮನಿ ಜಿಲ್ಲಾ ಕ್ರೀಡಾಂಗಣದಲ್ಲಿ 2026ನೇ ಸಾಲಿನ 27ನೇ ಹಾವೇರಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು. ಮಹಿಳೆಯರ ಖೋ-ಖೋ ವಿಭಾಗದಲ್ಲಿ ಬಾಡಗಿ ತಾಲ್ಲೂಕಿನ ಮತ್ತೂರು ಗ್ರಾಮದ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಸಂದರ್ಭದಲ್ಲಿ ತರಬೇತುದಾರರು ಹಾಗೂ ಮಕ್ಕಳು ಟ್ರೋಫಿ ಪಡೆದುಕೊಂಡು ಸಂಭ್ರಮಿಸಿದರು.