ಮೂಡಲಗಿ

ಗರ್ಭಿಣೀಯರಿಗೆ ಸೀಮಂತ: ಜಾಗೃತಿ

ಗರ್ಭಿಣೀಯರಿಗೆ ಸೀಮಂತ: ಜಾಗೃತಿ

ಮೂಡಲಗಿ 10: ಮಹಿಳೆ ಹುಟ್ಟು ಸಾವಿನ ಮಧ್ಯೆ ಹೋರಾಟ ಮಾಡಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತಾಳೆ. ಆದ್ದರಿಂದ ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನ ನೀಡುವ ಮೂಲಕ ಅವಳ ಋಣ ತೀರಿಸುವ ಕಾರ್ಯವಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಹೇಳಿದರು. 

ಮಂಗಳವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಕ್ತಿ ಮಹಿಳಾ ಸಂಘ ಗೋಕಾಕ ಇವರ ಆಶ್ರಯದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ, ಮಗುವಿಗೆ ಎಚ್‌ಐವಿ, ಸಿಫಿಲಿಸ್, ಹೆಪಟೈಟಿಸ್ ರೋಗ ಹರಡದಂತೆ ಮುನ್ನೆಚ್ಚರಿಕೆ ಚಿಕಿತ್ಸಾಂದೋಲನದಲ್ಲಿ ಗರ್ಭಿಣೀಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಹೊಟ್ಟೆಯಲ್ಲಿರುವ ಶಿಶುವಿಗೆ ಎಚ್‌ಐವಿ ರೋಗ ಬರದಂತೆ ಪ್ರಸ್ತುತ ಚಿಕಿತ್ಸೆ ಲಭ್ಯವಿದ್ದು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೀಮಂತ ಕಾರ್ಯ ನೆಪದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. 

ಸೀಮಂತ ಕಾರ್ಯಕ್ರಮದಲ್ಲಿ ಪಟ್ಟಣದ ಸುಮಾರು 40 ಗರ್ಭಿಣಿಯರಿಗೆ ಬಳೆ ತೋಡಿಸುವ ಮೂಲಕ ಸೀಮಂತ ಕಾರ್ಯಕ್ರಮ ಜರುಗಿತು. 

ಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಹೊಸಮನಿ, ಆರೋಗ್ಯ ಕೇಂದ್ರದ ಡಾ ದೀಪಾ ಮಾಚಪನ್ನವರ, ಮಹಿಳಾ ಆಪ್ತ ಸಮಾಲೋಚಕಿ ಲತಾ ನಾಯಕ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಶಕ್ತಿ ಮಹಿಳಾ ಸಂಘದ ಸಿಬ್ಬಂದಿಗಳು ಮತ್ತು ಗರ್ಭಿಣಿಯರು ಇದ್ದರು. 


ಸುದ್ದಿ ಓದಿ