ಬಿ.ಎಸ್.ಯಡಿಯೂರಪ್ಪ ಇಂದು ಬೃಹತ್ ರೋಡ್ ಶೋ
ತಾಳಿಕೋಟೆ26: ಮುದ್ದೇಬಿಹಾಳ ವಿಧನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ ನಡಹಳ್ಳಿ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 27 ರಂದು ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕು ಎಂದು ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಶಂಭು ಕಕ್ಕಳಮೇಲಿ ಹೇಳಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು , ಬೆಳಿಗ್ಗೆ 11 ಗಂಟೆಗೆ ಪಟ್ಟಣದ ರಾಜವಾಡೆಯಿಂದ ರೋಡ್ ಶೋ ಆರತಂಭವಾಗಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಗಮೇಶ್ವರ ಸಭಾ ಭವನದಲ್ಲಿ ಬೃಹತ್ ಸಭೆಯಾಗಿ ಮಾರ್ಪಡಲಿದೆ. ಅಲ್ಲಿ ಕಾರ್ಯಕರ್ತರನ್ನುದ್ದೆಶಿಸಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಬಿಹಾರದ ರಾಜ್ಯದ ಪಾಟ್ನಾದ ಬಿಜೆಪಿ ಶಾಸಕ ಸಂಜಯಸಿಂಗ ಮಾತನಾಡಿ, ದಕ್ಷಿಣ ಭಾರತದಲ್ಲಿ ಕರ್ನಾಟಕ ಪ್ರವೇಶ ದ್ವಾರವಾಗಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವು ಮುಖ್ಯವಾಗಿದೆ. ಎಲ್ಲ ಕಾರ್ಯಕರ್ತರ ಒಗ್ಗಟ್ಟು ಮುಖ್ಯ ಪ್ರತಿಯೊಬ್ಬ ಕಾರ್ಯಕರ್ತ ಮನೆ ಮನೆಗೆ ಭೇಟಿ ನೀಡಬೇಕು. ಜನ ಕಲ್ಯಾಣ ಯೋಜನೆಗಳು ತಿಳಿಸಬೇಕು. ಕೊರೊನಾ ಕಾಲದಲ್ಲಿ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಿದ ರೀತಿ ಜಗತ್ತು ಹೊಗಳಿದೆ. ಪ್ರತಿಯೊಬ್ಬ ಭಾರತೀಯರಿಗೂ ಸಹ ಉಚಿತ ಲಸಿಕೆ ನೀಡಿ ದೇಶವನ್ನು ಆಪತ್ತಿನಿಂದ ಕಾಪಾಡಿದ್ದಾರೆ. ಪ್ರಧಾನ ಮಂತ್ರಿಗಳು ಬಡವರ ಮನೆಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರಿಗೆ ಬಡವರ ಕಷ್ಟ ಗೊತ್ತು. ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆಗಳ ಮೂಲಕ ಬಡವರ ಕಲ್ಯಾಣ ಕಾರ್ಯವನ್ನು ಮಾಡಿದ್ದಾರೆ. ನಾವು ವಿಕಾಸ ಜೊತೆ ದೇಶವನ್ಮು ಬಲಿಷ್ಠ ಮಾಡಿದ್ದೇವೆ. ದೇಶವನ್ಮು ಧಾರ್ಮಿಕ ಕಾರಿಡಾರಗಳ ಮೂಲಕ ಧಾರ್ಮಿಕ ಕೇಂದ್ರಗಳನ್ನ ಅಭಿವೃದ್ಧಿ ಮಾಡಲಾಗಿದೆ. 2034 ರ ಲೋಕಸಭೆ ಚುನಾವಣೆಯ ರಾಜ್ಯವೇ ದಿಕ್ಸೂಚಿಯಾಗಿದ್ದು ಮೋದಸಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲು ಕನರ್ಾಟವನ್ನು ಗೆಲ್ಲಿಸಬೇಕಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಘು ಚವ್ಹಾಣ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಮುದಕಪ್ಪ ಬಡಿಗೇರ, ಅಣ್ಣಪ್ಪ ಜಗತಾಪ, ಮಾನಸಿಂಗ ಕೊಕಟನೂರ, ಮುರಗೆಪ್ಪ ಸರಶೇಟ್ಟಿ, ಕಾಶಿನಾಥ ಸಜ್ಜನ, ಗಂಗಾಧರ ಕಸ್ತೂರಿ, ಪ್ರಕಾಸ ಹಜೇರಿ, ಶಿವಶಂಕರ ಹಿರೇಮಠ ಸೇರಿದಂತೆ ಇತರರು ಇದ್ದರು.