ಚಿತ್ರರಂಗದ ಹಲವು ನಟ, ನಟಿಯರಿಗೆ ಕೋವಿಡ್ ಸೋಂಕು
ಬೆಂಗಳೂರು/ಮುಂಬೈ, ಏಪ್ರಿಲ್ 05:ದೇಶವನ್ನು ಆತಂಕಕ್ಕೆ ದೂಡಿರುವ ಕೊರೋನಾ ಸೋಂಕು ಆರ್ಭಟ ಮುಂದುವರಿಸಿದೆ. ಸರ್ಕಾರಗಳು ಅದೆಷ್ಟೇ ಕಠಿಣ ನಿಯಮ ಕೈಗೊಂಡರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ವೇಳೆ ಚಿತ್ರರಂಗದ ಹಲವು ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸೋಂಕಿಗೆ ಒಳಗಾಗಿದ್ದಾರೆ. ಸ್ಯಾಂಡಲ್ ವುಡ್ ನ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ, ತಮಿಳು ನಟಿ ನಿವೇತಾ ಥಾಮಸ್, ತೆಲುಗಿನ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ಗೂ ಪ್ರಸ್ತುತ ಸೋಂಕು ತಗುಲಿದೆ.ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಮತ್ತೊಬ್ಬ ಕಲಾವಿದ ಗೋವಿಂದ ಅವರಿಗೆ ಕೋವಿಡ್ ಅಂಟಿಕೊಂಡಿದೆ. ನಟ ಗೋವಿಂದ ಅವರಿಗೆ ಕೊರೋನಾರೊನಾ ಸೋಂಕು ತಗುಲಿರುವುದನ್ನು ಅವರ ವಕ್ತಾರ ಖಚಿತಪಡಿಸಿದ್ದಾರೆ. 'ಗೋವಿಂದ ಅವರಿಗೆ ಇಂದು ಕೋವಿಡ್ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ.
ಸೌಮ್ಯ ರೋಗ ಲಕ್ಷಣಗಳು ಇದೆ. ಹೋಮ್ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ' ಎಂದು ತಿಳಿಸಿದ್ದಾರೆ.ತಮ್ಮ ಪತಿಯ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ, ಮತ್ತು ಸುರಕ್ಷಿತೆ ಕಾಪಾಡಿ ಎಂದು ಗೋವಿಂದ ಅವರ ಪತ್ನಿ ಸುನೀತಾ ಆಹುಜಾ ಮನವಿ ಮಾಡಿದ್ದಾರೆ.ಈ ಮೊದಲು ನಟಿ ಆಲಿಯಾ ಭಟ್, ಫಾತಿಮಾ ಸನಾ ಶೇಖ್, ಪರೇಶ್ ರಾವಲ್, ಕಾರ್ತಿಕ್ ಆರ್ಯನ್, ರಣ್ಬೀರ್ ಕಪೂರ್, ರೋಹಿತ್ ಸರಾಫ್ ಕೊರೊನಾಗೆ ತುತ್ತಾಗಿದ್ದರು. ಅದಕ್ಕೂ ಮುಂಚೆ ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್, ಕನಿಕಾ ಕಪೂರ್, ಮಲೈಕಾ ಆರೋರ, ಅರ್ಜುನ್ ಕಪೂರ್ ಸಹ ಸೋಂಕಿಗೆ ಒಳಗಾಗಿದ್ದರು.ಕೊರೋನಾದ ಎರಡನೇ ಅಲೆಯಲ್ಲಿ ಹಿರಿಯ ಗಾಯಕಿ ಸುಮಿತ್ರಾ ಅವರ ಪುತ್ರ ಸುನಿಲ್ ರಾವ್ ಕೂಡ ಸೋಂಕಿಗೆ ಒಳಗಾಗಿರುವುದಾಗಿ ಇನ್ ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದರು.