ಬಿಜೆಪಿ ನೂತನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಮುದ್ದೇಬಿಹಾಳ 4: ಪಟ್ಟಣದ ಸಂಗಮೇಶ ನಗರದಲ್ಲಿ ಬಿಜೆಪ ತಾಲೂಕಾ ಮಂಡಲದಿಂದ ಬಿಜೆಪಿ ನೂತನ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ) ಅವರು ಮಂಗಳವಾರ ಚಾಲನೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ) ಅವರು ಮಾತನಾಡಿ ದೇಶದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಉತ್ತಮ ಆಡಳಿತ ಮತ್ತು ಆರ್ಥಿಕ ಸುಭದ್ರತೆಯನ್ನು ಕಂಡು ವಿದೇಶಿಗರು ಹಾಡಿಹೊಗಳುತ್ತಿದ್ದಾರೆ. ಬ್ರಷ್ಟಾಚಾರ ಮುಕ್ತ ಬಲಿಷ್ಟ ರಾಷ್ಟ್ರ ಕಟ್ಟುವಲ್ಲಿ ಪ್ರಧಾನಿ ಬಲಪಡಿಸಬೇಕಾದರೇ ದೇಶದಲ್ಲೆಡೆ ಬಾಜಪ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಭಾರತಿಯ ಸಂವಿದಾನದಲ್ಲಿ ಅಳವಡಿಸಿರುವ ಎಲ್ಲ ಮೌಲ್ಯಗಳ ಅನುಸಾರ ಉತ್ತಮ ಸಾಮಾಜಿಕ ಸೇವೆ ಸಲ್ಲಿಸುವ ಗುರಿಹೊಂದಿದ ಏಕೈಕ ಬಿಜೆಪಿ ಪಕ್ಷವನ್ನಾಗಿ ಮಾಡಲು ಎಲ್ಲ ಕಾರ್ಯಕರ್ತರ ಪ್ರಮುಖ ಪಾತ್ರವಹಿಸುತ್ತದೆ.
ಕೇವಲ ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೇಸ್ ಪಕ್ಷ ಸದಸ್ಯತ್ವ ಪ್ರಾರಂಭಿಸುತ್ತದೆ ಆದರೇ ಬಾಜಪಾ ಹಾಗಲ್ಲ ಪ್ರತಿ ವರ್ಷವೂ ಪ್ರತಿ ಗ್ರಾಮ ಬೂತ ಮಟ್ಟದಿಂದಲೂ ಲಕ್ಷಾಂತರ ಜನರನ್ನು ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಇಡೀ ವಿಶ್ವದಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ ಮಾತ್ರವಲ್ಲದೇ ಪ್ರಜಾಸತ್ಯಾತ್ಮ ಪಕ್ಷವಾಗಿ ಬೆಳೆದು ನಿಂತಿದೆ.ಈ ನಿಟ್ಟಿನಲ್ಲಿ ಮತಕ್ಷೇತ್ರದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡು ಸಧ್ಯ ಕೇಂದ್ರದ ವರಿಷ್ಠರು ಒಟ್ಟು 60 ಸಾವಿರ ಸದಸ್ಯತ್ವ ಮಾಡುವ ಗುರಿ ನೀಡಿದ್ದು ಎಲ್ಲ ಕಾರ್ಯಕರ್ತರು ಪ್ರಧಾನ ನರೇಂದ್ರ ಮೋದಿಯವರ ಜನಪರ ಆಡಳಿತ ಮತ್ತು ಸಾಧನೆಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಹೆಚ್ಚೆಚ್ಚು ಸದಸ್ಯತ್ವ ಮಾಡುವಲ್ಲಿ ಶ್ರಮಿಸಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಸರಕಾರದ ಒಂದಲ್ಲ ಒಂದು ರೀತಿಯ ದಿನಕ್ಕೊಂದು ಹಗರಣಗಳು ಬೆಳಕಿಗೆ ಬರುತ್ತಿವೆ ಬ್ರಷ್ಟಾಚಾರ ಹೆಚ್ಚಾಗಿದೆ ಈ ಹಿನ್ನೇಲೆಯಲ್ಲಿ ಪ್ರಸ್ತುತ ರಾಜ್ಯದ ಕಾಂಗ್ರೇಸ್ ಸರಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿಂದೆ ನಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡಿರುವ ಸುಮಾರು 1500 ಕೋಟಿಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಂಡಿಲ್ಲ ಅದನ್ನು ಹಣಬಿಡುಗಡೆ ಮಾಡಿಸಲು ಸ್ಥಳಿಯ ಶಾಸಕ ಸಿ ಎಸ್ ನಾಡಗೌಡ ಸಾಧ್ಯವಾಗಿಲ್ಲ,
ರಾಜ್ಯದಲ್ಲಿ ತಮ್ಮದೇಯಾದ ಕಾಂಗ್ರೇಸ್ ಸರಕಾರ ಅಧಿಕಾರದಲ್ಲಿದ್ದರೂ ಕಳೇದ 18 ತಿಂಗಳಲ್ಲಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ಹಣವನ್ನು ಕೂಡಾ ತಂದಿದ್ದರೆ ತಿಳಿಸಿ ಬಹಿರಂಗವಾಗಿ ಚರ್ಚೆಗೆ ನಾನು ಸದಾಸಿದ್ಧನಿದ್ದೇನೆ ಎಂದು ಸವಾಲೇಸೆದರು. ನಾನು ಅಧಿಕಾರದಲ್ಲಿದ್ದಾಗ ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸಿ ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಿರಿ, ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎರಡನ್ನು ಸಮಾನವಾಗಿ ಸ್ವೀಕರಿಸಿದ್ದೇನೆ ಹಾಗಂತ ನಾನು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೇಯೇ ಇಲ್ಲ ಈಗಾಗಲೇ ಮತಕ್ಷೇತ್ರದ ಜನ ನಿಮ್ಮ ಸರಕಾರದ ಮತ್ತು ನಿಮ್ಮ ದುರಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಹಿಂಬಾಲಕರು ಕೆಬಿಜೆಎನ್ಎಲ್ ಇಲಾಖೆಯಲ್ಲಿ ಕಲೇಕ್ಷನ್ ಏಜೇಂಟರಾಗಿದ್ದಾರೆ ಜೊತೆಗೆ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಗಳಲ್ಲಿ ಬೋಗಸ್ ಬಿಲ್ಲ ಎತ್ತುವ ಕಾರ್ಯ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ನಮ್ಮ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿರ್ಮಿಸಿದ ಗುತ್ತಿಗೆದಾರರಿಗೆ ಬಿಲ್ಲ ಮಂಜೂರಿ ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕಿತು ಮಾಡುತ್ತಾರೆ. ಜೊತೆಗೆ ವಿವಿಧ ಕಾಮಗಾರಿಗಳನ್ನು ನಿಲ್ಲಿಸುವಂತೆ ನಿಮ್ಮ ಕಾಂಗ್ರೇಸ್ ಪುಡಿ ಪುಡಾರಿಗಳು ಒತ್ತಾಯ ಮಾಡುತ್ತಾರೆ ಎಂಬ ಮಾಹಿತಿ ತಿಳಿದುಬಂದಿಗೆ ನಿವೇಷ್ಟು ಪುಡಾರಿಗಳಿದ್ದಿರಿ ಎಂಬುದು ನನಗೆ ಚನ್ನಾಗಿ ಗೊತ್ತಿದೆ ನಿಮಗಿಂತ ದೊಡ್ಡ ಪುಡಾರಿ ನಾನಿದ್ದೇನೆ ಆದರೇ ನಾನ್ಯಾವತ್ತಿಗೂ ಪುಡಾರಿಕೆ ಮಾಡಿಲ್ಲ ಇನ್ನುಮುಂದೆ ಅದು ಅನಿವಾರ್ಯವಾಗಬಹುದು. ಸಧ್ಯ ತಾಲೂಕಿನಲ್ಲಿ ಎಷ್ಟು ಜನ ಕಾಂಗ್ರೇಸ್ ಪುಡಿ ಪುಡಾರಿಗಳಿದ್ದಿರಿ ಮುಂದಿನ ಮೂರುವರೇ ವರ್ಷದಲ್ಲಿ ರಾಜ್ಯದಲ್ಲಿ ನಮ್ಮದೇ ಸರಕಾರ ಬರುತ್ತೇ ಮತ್ತೆ ನಾನೇ ಗೆದ್ದು ಬರುತ್ತೇನೆ ಈಗಾಗಲೇ ನಿಮ್ಮ ಲಿಷ್ಟ್ ರೇಡಿಮಾಡಿಕೊಂಡಿದ್ದೇನೆ ಆಗ ಮನೆ ಮನೆ ಕಿತ್ತಿಸುತ್ತೇ ಎಚ್ಚರದಿಂದಿರಿ ಎಂದರು.
ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಪೋಲಿಸ್ ಇಲಾಖೆ ಮೂಲಕ ತೊಂದರೆ ಕೋಡುವುದು ಸರಿಯಲ್ಲ ಪಿಎಸೈ ಸೇರಿದಂತೆ ಕೆಲವು ಪೋಲಿಸರು ಕಾಂಗ್ರೇಸ್ ಕಚೇರಿಯಂತೆ ಬಿಂಬಿಸಬೇಡಿ ಹಾಗೇನಾದರೂ ಕಂಡು ಬಂದರೇ ನಾನು ಸುಮ್ಮನಿರಲ್ಲ ನಮ್ಮ ಅಧಿಕಾರ ಬಂದ ಮೇಲೆ ನಿಮ್ಮನ್ನು ಸುಮ್ಮನೆ ಬೀಡುವೂದೇ ಇಲ್ಲ ಎಂಬುದು ಅರ್ಥ ಮಾಡಿಕೊಳ್ಳಬೇಕು. ಕಳೇದ ಮೂರುವರೆ ವರ್ಷದಲ್ಲಿ ನನ್ನ ಅವಧಿಯಲ್ಲಿ ನಾನೇಷ್ಟು ಅನುದಾನ ತಂದಿದ್ದೇನೆಯಾವೇಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂಬುದನ್ನು ದಾಖಲೆ ಸಮೇತ ಬರುತ್ತೇನೆ ನಿವು ಶಾಸಕರಾಗಿ ಒಂದೂವರೆ ವರ್ಷದಲ್ಲಿ ನೀವೇಷ್ಟು ನಿಮ್ಮ ಸರಕಾರದಿಂದ ಎಷ್ಟು ಅನುದಾನ ತಂದಿದ್ದಿರಿ ನೀವು ದಾಖಲೆ ಸಮೇತ ಬನ್ನಿ ಬಹಿರಂಗ ಚರ್ಚೆ ಮಾಡೋಣ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ತಾಲೂಕಾ ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಮುಖಂಡರಾದ ರಾಜಶೇಖರ ಮ್ಯಾಗೇರಿ, ಸೋಮನಗೌಡ ಬಿರಾದಾರ,ಪ್ರಭು ಕಡಿ, ಮಲಕೇಂದ್ರಾಯಗೌಡ ಪಾಟೀಲ, ಡಾ, ವಿರೇಶ ಪಾಟೀಲ, ಪುರಸಭೆ ಸದಸ್ಯರಾದದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಸಿದ್ಧರಾಜ ಹೊಳಿ, ರೇವಣಸಿದ್ದಪ್ಪ ಮಸೂತಿ, ಸಂಜು ಬಾಗೇವಾಡಿ, ಶ್ರೀಶೈಲ ದೊಡಮನಿ, ಕಮಲಾ ಇಂಗಳೇಶ್ವರ, ನೀಲಮ್ಮ ಸಾಲಿ, ರಾಜು ಬಳ್ಳೋಳ್ಳಿ, ಶಿವೂ ಅತ್ತೂರ, ಪ್ರೀತಿ ಕಂಬಾರ, ಕಾವೇರಿ ಕಂಬಾರ ಸೇರಿದಂತೆ ಹಲವರು ಇದ್ದರು.