ಬಿಜೆಪಿ ಎಲ್ಲ ಸಮುದಾಯದವರಿಗೂ ಮೀಸಲಾತಿ ಕಲ್ಪಿಸುವ ಮೂಲಕ ದಾಖಲೆ ಸೃಷ್ಟಿಸಿದೆ: ಶ್ರೀನಿವಾಸ ಪಟೇಲ್
ಬಳ್ಳಾರಿ: ಮೀಸಲಾತಿ ವಿಚಾರದಲ್ಲಿ ಸುಮಾರು ವರ್ಷಗಳ ಕಾಲ ಆಡಳಿತ ನಡೆಸಿದ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಕಳೆದ 30-40 ವರ್ಷದಲ್ಲಿ ಮಾಡದ ಸಾಧನೆಯನ್ನು ಬಿಜೆಪಿ ಸರ್ಕಾರ ಬಹುತೇಕ ಎಲ್ಲ ಸಮುದಾಯದವರಿಗೂ ಮೀಸಲಾತಿ ಕಲ್ಪಿಸುವ ಮೂಲಕ ದಾಖಲೆ ಸೃಷ್ಟಿಸಿದೆ ಎಂದು ವೀರಶೈವ ಲಿಂಗಾಯತ ಮಹಾಜನ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಣ್ಣ ಸಣ್ಣ ಜಾತಿಯವರೂ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಕಲ್ಪಿಸುವ ಮೂಲಕ ದಾಖಲೆ ತೀರ್ಮಾನವನ್ನು ಕೈಗೊಂಡಿದ್ದು, ನಮ್ಮ ಸಂಘ ಅತ್ಯಂತ ಪ್ರೀತಿಯ, ಗೌರವದಿಂದ ಸ್ವಾಗತಿಸಲಿದೆ. ನಮ್ಮ ಸಂಘ ಯಾವತ್ತೂ ಬಿಜೆಪಿ ಪರವಾಗಿರಲಿದೆ ಎಂದರು. ಕಳೆದ ಸುಮಾರು ವರ್ಷಗಳ ಬೇಡಿಕೆಗೆ ಬಿಜೆಪಿ ಸರ್ಕಾರ ಸ್ಪಂದಿಸಿದ್ದು, 30ವರ್ಷಗಳಿಂದ ಯಾರೂ ಮಾಡದ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾನವೀಯ ಗುಣಗಳನ್ನು ಹೊಂದಿರುವ ಜನಪರ ನಾಯಕ, ಒಳ ಮಿಸಲಾತಿ ಕಲ್ಪಿಸುವುದು ಜೇನುಗೂಡಿಗೆ ಕೈಹಾಕುವುದು ಎಂದು ಗೊತ್ತಿದ್ದರೂ ಎಲ್ಲರಿಗೂ ಸಿಹಿ ತಿನಿಸಬೇಕು ಎಂದು ಈ ತೀರ್ಮಾನವನ್ನು ಕೈಗೊಂಡಿದ್ದಾರೆ, ನಮ್ಮ ಸಂಘ ಯಾವಾಗಲೂ ಬಿಜೆಪಿ ಪರವಾಗಿದೆ ಎಂದು ಭರವಸೆ ನೀಡಿದರು. ನಾಗಭೂಷಣ್ ಗೌಡ, ಪಂಪನಗೌಡ, ರಾಮಾಂಜಿನೇಯ ರೆಡ್ಡಿ, ದೊಡ್ಡ ಬಸವನಗೌಡ ಇತರರಿದ್ದರು