ಮುಂಡರಗಿ

ಅದೀಕೃತ ಬಿಜೆಪಿ ಅಭ್ಯರ್ಥಿಗೆ ಒಲಿದ ಪುರಸಭೆ ಅಧ್ಯಕ್ಷ ಪಟ್ಟ.

ಅದೀಕೃತ ಬಿಜೆಪಿ ಅಭ್ಯರ್ಥಿಗೆ ಒಲಿದ ಪುರಸಭೆ ಅಧ್ಯಕ್ಷ ಪಟ್ಟ.

ಮುಂಡರಗಿ,22: ಪಟ್ಟಣದ ಸ್ಥಳಿಯ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅದೀಕೃತ ಅಭ್ಯರ್ಥಿ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷರಾಗಿ ಆಯ್ಕೆ. ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗೇಂದ್ರ​‍್ಪ ಹುಬ್ಬಳ್ಳಿ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಜರುಗಿದ ಖಾಲಿಯಾಗಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಜರುಗಿಸಲಾಯಿತು. ಈ ವೇಳೆ ತಹಶಿಲ್ದಾರ ಎರಿ​‍್ರಸ್ವಾಮಿ.ಪಿ.ಎಸ್ ಇವರು ಚುನಾವಣಾಧಿಕಾರಿಯಾಗಿ ಸರ್ಕಾರದ ನಿರ್ದೇಶನದಂತೆ ಕಾನೂನಾತ್ಮಕವಾಗಿ ಸ್ಥಳಿಯ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಇತರೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪುರುಷ ಇತರೆ ಮೀಸಲಾತಿಯಡಿಯಲ್ಲಿ ಚುನಾವಣೆಯನ್ನು ಅಚ್ಚುಕಟ್ಟಾಗಿ ಶಾಂತಯುತವಾಗಿ ಸದಸ್ಯರು ಕೈ ಎತ್ತುವುದರ ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. 

ಪುರಸಭೆಯ 23 ಸ್ಥಾನಗಳ ಪೈಕಿ 12 ಬಿಜೆಪಿ, 6 ಕಾಂಗ್ರೆಸ್, 3 ಪಕ್ಷೇತರ ಮತ್ತು 1 ಜೆಡಿಎಸ್ ಸದಸ್ಯರಿದ್ದಾರೆ. ಈ ಪೈಕಿ 7 ಬಿಜೆಪಿ ಬಂಡಾಯ ಸದಸ್ಯರು ಮತ್ತು 5 ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತಗಳು ಸೇರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅದೀಕೃತ ಬಿಜೆಪಿ ಅಭ್ಯರ್ಥಿ ನಿರ್ಮಲಾ ಕೊರ್ಲಹಳ್ಳಿ ಇವರ ಪರವಾಗಿ 12 ಜನ ಸದಸ್ಯರು ಒಟ್ಟಿಗೆ ಕೈ ಎತ್ತುವುದರ ಮೂಲಕ 12 ಮತಗಳು ಲಭಿಸಿದ ಕಾರಣ ನಿರ್ಮಲಾ ಕೊರ್ಲಹಳ್ಳಿ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. 5 ಬಿಜೆಪಿ ಮತ, ಕಾಂಗ್ರೇಸ್ ಹಾಗೂ ಜೆಡಿಎಸ್ ಬೆಂಬಲಿತ ತಲಾ ಒಂದೊಂದು ಮತ ಹಾಗೂ 3 ಪಕ್ಷೇತರ ಸದಸ್ಯರು ಹಾಗೂ ಶಾಸಕರ ಒಂದು ಮತ ಸೇರಿ ಕೇವಲ 11 ಕಡಿಮೆ ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನಧೀಕೃತ ಬಿಜೆಪಿ ಅಭ್ಯರ್ಥಿ ಜ್ಯೋತಿ ಹಾನಗಲ್ ಇವರು ಪರಾಭವಗೊಂಡಿದ್ದಾರೆ. ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಾಗೇಂದ್ರ​‍್ಪ ಹುಬ್ಬಳ್ಳಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನಾಟಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 3 ಅರ್ಜಿಗಳಿಂದ ನಾಮಪತ್ರ ಸಲ್ಲಿಸಲಾಗಿತ್ತು. ಅದರಲ್ಲಿ ಒಬ್ಬರೇ ಎರಡು ಅರ್ಜಿ ಸಲ್ಲಿಸಿದ್ದರು. ಈ ವೇಳೆ ದಾಖಲಾತಿ ಪರೀಶಿಲಿಸಿದ ನಂತರ ನಿಕರವಾದ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಯಿತು. ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಜಿ ಸಲ್ಲಿಕೆಯಾದ ಕಾರಣ ಉಪಾಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ತಹಶಿಲ್ದಾರ ಮಾಹಿತಿ ನೀಡಿದರು. 

ಇದಕ್ಕೂ ಮುನ್ನ ಆಕಾಂಕ್ಷಿಗಳ ತೀವ್ರ ಪೈಪೋಟಿ ತಪ್ಪಿಸಲು ಶಾಸಕರು ಹಾಗೂ ಆಯಾ ಪಕ್ಷದ ಅಧ್ಯಕ್ಷರು ಹಾಗೂ ಮುಖಂಡರ ದುಂಬಾಲು ಬಿದ್ದು ಸದಸ್ಯರ ಮನ ಒಲಿಸಲು ಆಕಾಂಕ್ಷಿಗಳು ಪ್ರಯತ್ನಿಸಿದರು. ಅಲ್ಲದೇ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಂಡಲ ಅಧ್ಯಕ್ಷರು ಬಿಜೆಪಿ ಪಕ್ಷದ ಅನದೀಕೃತ ಅಭ್ಯರ್ಥಿಗೆ ಮಣೆ ಹಾಕಿ ಅವರನ್ನೇ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಿದರು. ಈ ಕುರಿತು ವಿಪ್  ಜಾರಿಯೂ ಕೂಡಾ ಮಾಡಲಾಯಿತು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಅನದೀಕೃತಿ ಬಿಜೆಪಿ ಅಭ್ಯರ್ಥಿಗೆ ಬಹುಮತ ಸಿಗದೇ ಇರುವುದು ಬಿಜೆಪಿ ಶಾಸಕರಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಹಿನ್ನೆಡೆಯಾಯಿತು ಎಂದು ಮೇಲ್ನೋಟಕ್ಕೆ ಕಂಡು ಬಂದಿತು. ಈ ವೇಳೆ ಪುರಸಭೆ ಸುತ್ತಲೂ ಪೋಲೀಸ್ ಬಂದೋಬಸ್ತ್‌ ವಹಿಸಲಾಗಿತ್ತು. ಯಾವುದೇ ಗಲಾಟೆಯಾಗದೇ ಶಾಂತಯುತವಾಗಿ ಚುನಾವಣೆ ನಡೆಯಿತು. 


ಸುದ್ದಿ ಓದಿ