ಬಿಜೆಪಿ ಆಕಾಂಕ್ಷಿ ಮಾಜಿ ಶಾಸಕ ನೇಮರಾಜ್ ನಾಯ್ಕ್ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಏ.17 : ಮಾಜಿ ಶಾಸಕ ನೇಮರಾಜ್ ನಾಯ್ಕ್ ಕೆ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಈ ವೇಳೆ ನಾಮ ಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿ ಇಂದು ಸಮಯ ಸೂಕ್ತವಾಗಿದ್ದು ಅದಕ್ಕಾಗಿ ನಾಮಪತ್ರ ಸಲ್ಲಿಸಿದ್ದೆನೆ, ಇನ್ನು ಪಕ್ಷದಿಂದ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಗೊಷಣೆ ಬಾಕಿ ಇದೆ ಅದರಲ್ಲಿ ಯಾರಿಗೆ ಟಿಕೇಟ್ ನೀಡುತ್ತಾರೆ ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ, ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದನೆ ಮತ್ತೊಂದು ದಿನವನ್ನು ನಿಗದಿಗೊಳಿಸಿ ಪಕ್ಷದ ಸರ್ವ ಪದಾಧಿಕಾರಿಗಳನ್ನು ಒಳಗೊಂಡಂತೆ ನಾಮಪತ್ರ ಸಲ್ಲಿಸುವೆ, ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯರ್ತರಿಗೆ ಇನ್ನೆರಡು ದಿನದಲ್ಲಿ ಟಿಕೇಟ್ನ ಸಂಪೂರ್ಣ ಚಿತ್ರಣ ಕಾಣುತ್ತದೆ, ನಮ್ಮದು ರಾಷ್ಟ್ರೀಯ ಪಕ್ಷ ಯಾವುದೇ ನಿರ್ಣಯ ತರಾತುರಿಯಲ್ಲಿ ತೆಗೆದುಕೊಳ್ಳುವುದಿಲ್ಲ, ನಮ್ಮ ನಾಯಕರು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ, ನನಗೆ ಖಂಡಿತ ಬಿಜೆಪಿ ಪಕ್ಷದ ಟಿಕೇಟ್ ನೀಡುತ್ತಾರೆ ಎಂಬ ಖಾತರಿ ಇದೆ, ನಮ್ಮ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದಾರೆ ಅಭಿವೃಧ್ಧಿಗಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಅರಿತಿದ್ದಾರೆ ಎಂದರು.