ಬಿಜೆಪಿ ಕಾರ್ಯಕರ್ತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ
ಸಿಂದಗಿ02: ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಲಾಟಿ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವ ಮೂಲಕ ಕೊಲೆ ಯತ್ನ ನಡೆದ ಘಟನೆ ತಾಲೂಕಿನ ನಾಗಾವಿ ಬಿಕೆ ಗ್ರಾಮದಲ್ಲಿ ಮಂಗಳವಾರ ನಸುಕಿನ 5 ಗಂಟೆಗೆ ನಡೆದಿದೆ.
ಗ್ರಾಮದ ಬಿಜೆಪಿ ಕಾರ್ಯಕರ್ತರ ಗುರಣ್ಣ ಸಿದ್ದನಗೌಡ ಬಿರಾದಾರ (30) ಮಂಗಳವಾರ ಬೆಳೆಗಳಿಗೆ ನೀರು ಬಿಡಲು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುರಣ್ಣನ ಮುಖಕ್ಕೆ ಬಟ್ಟೆಯಿಂದ ಮುಚ್ಚಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರಣ್ಣನ ಕುತ್ತಿಗೆ ಮತ್ತು ಕಾಲಿಗೆ ಚಾಕುವಿನಿಂದ ಇರಿದಿದ್ದಾರೆ. ಒಳ ಪೆಟ್ಟಾಗಿದೆ. ಕುತ್ತಿಗೆ ಮತ್ತು ಕಾಲಿಗೆ ಕೊಯ್ದ ರೀತಿಯಲ್ಲಿ ಗಾಯವಾಗಿವೆ. ಹಲ್ಲೆ ಮಾಡಿದ ಇಬ್ಬರೂ ಮುಖಕ್ಕೆ ಸ್ಕಾರ್ ಸುತ್ತಿಕೊಂಡಿದ್ದರು. ಯಾವುದೇ ಮಾತನಾಡದೇ ಈ ಕೃತ್ಯ ಏಸಗಿದ್ದಾರೆ. ಎಲ್ಲಿ ಮಾತಾನಡಿದರೆ ಧ್ವನಿಯಿಂದ ಗುರುತು ಹಿಡಿಯುತ್ತಾರೆ ಎಂದು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಗುರಣ್ಣನಿಗೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಿಡಲಾಗಿದೆ. ಆಸ್ಪತ್ರೆಗೆ ಪೋಲಿಸರು ಬೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.