ಶರೀಫಗಿರಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ಸ್ವಚ್ಛತಾ ಕಾರ್ಯ
ಶಿಗ್ಗಾವಿ : ತಾಲೂಕಿನ ಶಿಶುವಿನಹಾಳ ಗ್ರಾಮದ ಶರಫಗಿರಿಯ ಗದ್ದುಗೆ ಆವರಣದಲ್ಲಿ ಜಾತ್ರೆಯ ನಂತರ ತುಂಬಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರ ಕಸದ ಸ್ವಚ್ಛತೆಯನ್ನು ರವಿವಾರ ಬಿಜೆಪಿ ಯುವ ಮೋರ್ಚಾ ಶಿಗ್ಗಾವಿ ಮಂಡಲದ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಕಾರ್ಯಕರ್ತರು ಸೇರಿಕೊಂಡು ಸ್ವಚ್ಚಗೊಳಿಸುವ ಮೂಲಕ ಸಾರ್ಥಕ ದಿನವನ್ನಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ ಮಲ್ಲಿಕಾರ್ಜುನ ಬಾಳಿಕಾಯಿ, ಶಿಗ್ಗಾವಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜ್ ರಾಯಣ್ಣವರ, ಪ್ರಧಾನ ಕಾರ್ಯದರ್ಶಿ ವಿನಯ ಮುಂಡಗೋಡ, ಚೇತನ್ ಕಲಾಲ್, ರಾಘವೇಂದ್ರ ಅತಡಕರ, ರವಿ ಬಿಷೆಟ್ಟಿ, ಸಂಜೀವ ಬಾರಿಗಿಡದ, ಸುನೀಲಗೌಡ್ರ್ ಪಾಟೀಲ್, ನಾಗರಾಜ್ ಸವದತ್ತಿ, ಸುರೇಶ ಮೂದೇನವರ, ಸಂಜೀವ ಕೆಳಗೇರಿ, ಯಂಕನಗೌಡ ಪಾಟೀಲ್, ಕಳ್ಳನಗೌಡ್ರ ಚಂದನಗೌಡ್ರ, ತಾಕಣ್ಣ ಕಟ್ಟಣಿ ಸೇರಿದಂತೆ ಇತತರು ಭಾಗಿಯಾಗಿದ್ದರು.