ಬಿಜೆಪಿ ಸಂಸದ ಬ್ರಿಜ್ ಭೂಷನ್ ಶರಣಸಿಂಗ್ ಬಂಧನಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ,
ಜಮಖಂಡಿ 07: ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ. ಬಿಜೆಪಿ ಸಂಸದ ಬ್ರಿಜ್ ಭೂಷನ್ ಶರಣಸಿಂಗ್ ಬಂಧಿಸಬೇಕೆಂದು ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರಬಣ) ಸಂಘಟನೆ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಮಿನಿ ವಿಧಾನಸೌದ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ. ನಂತರ ಮಾತನಾಡಿದರು.
ದೇಶ ಸ್ವತಂತ್ರ ಸಂವಿಧಾನ ಪಡೆದುಕೊಂಡು 75 ವರ್ಷ ಗತಿಸಿದ್ದು, ಈ ಅವಧಿಯಲ್ಲಿ ಸಾಕಷ್ಟು ಸರಕಾರಗಳನ್ನು ಜನ ಕಂಡಿದ್ದಾರೆ. ಆದರೆ ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಂತಹ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಹಾಗೂ ಮಹಿಳಾ ವಿರೋಧಿ ಸರಕಾರವನ್ನು ಕಂಡಿಲ್ಲ. ನೂತನ ಸಂಸತ್ತ ಭವನ ಉದ್ಘಾಟನೆಯನ್ನು ಧಾಮರ್ಿಕ ಆಚರಣೆಯಂತೆ, ರಾಜನ ಪಟ್ಟಾಭಿಷೇಕದಂತೆ ಆಚರಣೆ ಮಾಡುವುದರ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಿದ್ದು ಖಂಡನೀಯ. ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಘನವೆತ್ತ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ವಿರೋಧ ಪಕ್ಷದ ನಾಯಕರು ವಿವಿಧ ಕ್ಷೇತ್ರದ ಸಾದಕರು ಇರಬೇಕಾಗಿತ್ತು. ಆದರೆ ಸೆಂಗೋಲ್ ಸ್ಥಾಪಿಸುವ ಮೂಲಕ ಸರ್ವಾ ಧಿಕಾರಿ ಮತು ಮಹಿಳಾ ವಿರೋಧಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಪೊಲೀಸರ ಮೂಲಕ ಧಮನಗೊಳಿಸಲು ಪ್ರಯತ್ನಿಸುತ್ತಿರುವುದು ಹಾಗೂ ಆರೋಪಿಯಾದ ಬಿಜೆಪಿ ಸಂಸದ ಬ್ರಿಜ್ ಭೂಷನಸಿಂಗ್ನನ್ನು ರಕ್ಷಿಸುತ್ತಿದ್ದಾರೆ. ರಾಷ್ಟ್ರಪತಿಗಳು ಮದ್ಯ ಪ್ರವೇಶಿಸಿ ಆರೋಪಿತನನ್ನು ತಕ್ಷಣ ಬಂಧಿಸಿ, ನೊಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಒತ್ತಾಯಿಸಿದರು.
ಜಿಲ್ಲಾ ಸಂಚಾಲಕರು ಪರಶುರಾಮ ಕಾಂಬಳೆ, ತಾಲೂಕಾ ಸಂಚಾಲಕರು, ಸದಾಶಿವ ಐನಾಪೂರ, ಬಸವರಾಜ ದೊಡಮನಿ,ಅಪ್ಪಶಿ ಕಾಂಬಳೆ. ಸಂಜು ಕಾಗಿ, ವಿಠ್ಠಲ ಕಾಂಬಳೆ, ಧರ್ಮಣ್ಣ ಕಾಂಬಳೆ, ಪರಮಾನಂದ ಕಾಂಬಳೆ, ಬಸವರಾಜ ಬನ್ನೂರ, ಹಣಮಂತ ಕಾಂಬಳೆ, ಯಾಸೀನ ಲೋಧಿ, ಶ್ಯಾಮರಾವ ಮಾದರ, ಸುಶೀಲ ಕರಡಿ, ರಾಜು ಪೋಳ, ಅಡಿವೆಪ್ಪ ಮರೆಗುದ್ದಿ, ಶ್ರವಣ ನಿಡೋಣಿ ಸೇರಿದಂತೆ ಅನೇಕರು ಇದ್ದರು.