ಬಿಜೆಪಿ ಸರ್ಕಾರ ಎರಡು ವರ್ಷದಿಂದ ರಾಜ್ಯದ ಕೈ ಶಾಸಕರ ಕೇತ್ರಕ್ಕೆ ಅನುದಾನವೇ ಬಿಡುಗಡೆ ಮಾಡಿಲ್ಲ ಶಾಸಕ ಗಣೇಶ್ ಆಕ್ರೋಶ
ಲೋಕದರ್ಶನ ವರದಿ
ಕಂಪ್ಲಿ 24: ತಾಲ್ಲೂಕಿನ ಗ್ರಾಮೀಣ ಭಾಗದ ದೇವಸಮುದ್ರ, ರೆಗ್ಯುಲೇಟರ್ ಕ್ಯಾಂಪ್‌ಜೀರಿಗನೂರು ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ರೂ. 40ಲಕ್ಷ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಶಾಸಕ ಜೆ.ಎನ್. ಗಣೇಶ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿ.ಬಿಜೆಪಿ ಸರ್ಕಾರ ಕಂಪ್ಲಿ ಕ್ಷೇತ್ರಕ್ಕೆ ಎರಡು ವರ್ಷದಿಂದ ಮತ್ತು ರಾಜ್ಯದಲ್ಲಿರುವ ಕಾಂಗ್ರೇಸ ಶಾಸಕರ ಕೇತ್ರಕ್ಕೆ ಅನುದಾನವೇ ಬಿಡುಗಡೆ ಮಾಡಿಲ್ಲ ಆಕ್ರೋಶ ವ್ಯಕ್ತಪಡಿಸಿದರು ‘ಕೋವಿಡ್ ಎರಡು ಅಲೆಯಲ್ಲಿ ಮುಳುಗಿದ ಸರ್ಕಾರ ಕೋಟ್ಯಂತರ ರೂಪಾಯಿ ಲೂಟಿ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ಈ ಕುರಿತು ವಿಪಕ್ಷಕ ನಾಯಕ ಸಿದ್ದರಾಮಯ್ಯ ಕೋವಿಡ್ ಅವ್ಯವಹಾರ ಕುರಿತು ಬಹಿರಂಗಪಡಿಸಿದರು. ಮುಂದಿನ ದಿನಗಳಲ್ಲಿಯಾದರೂ ಕೋವಿಡ್ ಲೆಕ್ಕಪತ್ರ ಕುರಿತು ಶ್ವೇತಪತ್ರ ಹೊರಡಿಸುವಂತೆ’ ಒತ್ತಾಯಿಸಿದರು ‘ಕ್ಷೇತ್ರದ ಗ್ರಾಮೀಣ ಭಾಗದ ಸಾಮಾನ್ಯ ಜಾತಿ ಜನಾಂಗ ವಾಸಿಸುವ ವಾರ್ಡ್‌ಗಳ ಮೂಲ ಸೌಕರ್ಯಗಳಿಲ್ಲ ಮುಂದಿನ ಎರಡು ವರ್ಷ ಅಧಿಕಾರವಧಿಯಲ್ಲಿ ಅಂಥ ವಾರ್ಡ್‌ಗಳು ಗುರ್ತಿಸಿ ಪ್ರಗತಿಗೆ ಶ್ರಮಿಸುವುಲಾಗುವುದು ಎಂದರು
ಮುಖಂಡರಾದ ನಾಯಕರ ಯಂಕೋಬ, ಕೋರಿ ಚನ್ನಬಸವ, ದೊಡ್ಡಬಸಪ್ಪ, ಸಿ. ಬಸವರಾಜ, ದೊಡ್ಡಬಸಪ್ಪ, ಎನ್. ಬಸವರಾಜ, ಎನ್. ಮಲ್ಲಿಕಾರ್ಜುನ, ಎ. ಕುಮಾರಸ್ವಾಮಿ, ಬಾವಿಕಟ್ಟೆ ಭೀಮಲಿಂಗಪ್ಪ, ಅರೇರು ರುದ್ರ್ಪ, ಗಾದಿಲಿಂಗಪ್ಪ, ಹೊಸಕೇರ್ಪ, ಬಸವರಾಜ, ರಾಮನಗೌಡ, ಗುತ್ತಿಗೆದಾರ ಎನ್. ಮಲ್ಲಿಕಾರ್ಜುನರೆಡ್ಡಿ, ಗ್ರಾ.ಪಂ ಹಾಲಿ, ಮಾಜಿ ಪ್ರತಿನಿಧಿಗಳು ಹಾಜರಿದ್ದರು.