ಭಾವನಾತ್ಮಕ ಬಂಧನದಿಂದ ಬಿಜೆಪಿಗೆ ಹಿನ್ನೆಡೆ : ಬಲ್ಲಾಹುಣ್ಸಿ ರಾಮಣ್ಣ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 14: ಬಿಜೆಪಿಯಿಂದ ಯಾರಿಗೆ ಟಿಕೆಟ್ ನಿಡಲಿ ಒಗ್ಗಟ್ಟಿನಿಂದ ಕೆಲಸ ಮಾಡುವೆ ಎಂದು ಹೇಳಿದ ಬಿಜೆಪಿ ಪಕ್ಷದ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಟಿಕೆಟ್ ಕೈತಪ್ಪಿದ ಕೂಡಲೇ ಪಕ್ಕ ಬಿಜೆಪಿಗರನ್ನು ಭಾವನಾತ್ಮಕವಾಗಿ ಬಂಧಿಸಿ ಬಿಜೆಪಿಗೆ ಸೋಲು ಅನುಭವಿಸಿದಂತಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿ ಕಾಂಗ್ರೇಸ್ ಸೇರಿದಂತೆ ಇನ್ನಿತರೆ ಪಕ್ಷದ ಪ್ರಮುಖ ವ್ಯಕ್ತಿಗಳು ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಪಕ್ಷ ಸೇರೆ್ಡಗೊಂಡು ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿದ್ದು ಎಂದೆಗುಂದದೆ ಕಾರ್ಯ ನಿರ್ವಹಿಸಿದ್ದೆವು ಆದರೆ ಟಿಕೇಟ್ ದೊರಕದ ಕಾರಣ ನೇಮಿರಾಜ್ ನಾಯ್ಕ್ ಜೆಡಿಎಸ್ ಪಕ್ಷದಿಂದ ಟಿಕೇಟ್ ಪಡೆದು ಮಾತಿಗೆ ತಪ್ಪಿದ್ದುದರ ಜೊತೆ ಕೆಲ ಬಿಜೆಪಿ ಸ್ಥಳೀಯ ಪದಾಧಿಕಾರಿಗಳು ಇವರಿಗೆ ಕೈ ಜೋಡಿಸಿದರೆ ಮತ್ತೆ ಕೆಲವರು ನಿಷ್ಕ್ರೀಯವಾಗಿದ್ದು ಕಂಡು ಬಂದಿದೆ ಎಂದು ಆರೋಪ ಮಾಡಿದರು. ಇದರ ಬಗ್ಗೆ ಹೈಕಮಾಂಡ್ನಲ್ಲಿನ ನಾಯಕರ ಗಮನಕ್ಕೆ ತಂದು ಪಕ್ಷದ ಚೌಕಟ್ಟಿನಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು.
ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ ಮಾತನಾಡಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯು ಅಚ್ಚುಕಟ್ಟಾಗಿ ನಡೆಸಿದ್ದೇವೆ ದೊರಕಿದ ಅಲ್ಪ ಸಮಯದಲ್ಲಿ ಮತದಾರರ ಮನೆ ಮನೆಗೆ ತೆರಳಿ ಪ್ರತಿಯೊಂದು ಹಳ್ಳಿಯಲ್ಲಿ ಮತಯಾಚನೆ ಮಾಡಿದ್ದೆವೆ ಆದರೆ ಟಿಕೇಟ್ ವಂಚಿತ ನೇಮಿರಾಜ್ ನಾಯ್ಕ್ ಬಿಜೆಪಿ ಪಕ್ಷದ ಮುಖಂಡರನ್ನು ತನ್ನೆಡೆ ಸೆಳೆದು ಪಕ್ಷದ ಹಿನ್ನೆಡೆಗೆ ಕಾರಣವಾಗಿದ್ದಾರೆ ಇದಕ್ಕೆ ಸಾಥ್ ನೀಡಿದ ಬಿಜೆಪಿ ಪಕ್ಷದ ಪದಾಧಿಕಾರಿಗಳ ವಿರುಧ್ಧ ರಾಜ್ಯ ನಾಯಕರಿಗೆ ತಿಳಿಸಿ ಕ್ರಮ ಕೈಗೊಳ್ಳುವುದಗಿ ತಿಳಿಸಿದರು, ಮತ್ತೆ ಪಕ್ಷಕ್ಕೆ ಮರಳುವವರಿದ್ದರೆ ಅದರ ಬಗ್ಗೆ ಪಕ್ಷದಲ್ಲಿನ ಹಿರಿಯ ಮುಖಂಡರ ಸಮಕ್ಷಮ ವಿಷಯ ಪ್ರಸ್ತಾಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂಧರ್ಭದಲ್ಲಿ ಮುಟಗನ ಹಳ್ಳಿ ಕೊಟ್ರೇಶ್, ಬುಡ್ಡಿ ಬಸವರಾಜ್, ಮರಿಯಮ್ಮನಹಳ್ಳಿ ಕೃಷ್ಣನಾಯ್ಕ್, ಅನಿಲ್ ಕುಮಾರ್ ಜಾಣ, ನವೀನ್ ಕುಮಾರ್, ಜೋಗಿ ಹನುಮಂತ, ಕನಕಪ್ಪ, ಸಂದೀಪ್ ಶಿವಮೊಗ್ಗ, ರವೀಂದ್ರ ಗೌಡ ಸೇರಿದಂತೆ ಇನ್ನಿತರರು ಇದ್ದರು.